ನವದೆಹಲಿ, ಮೇ 28 : ಕಳೆದ 35 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕುಸ್ತಿ ಪಟುಗಳು ಮಹಿಳಾ ಮಹಾ ಪಂಚಾಯತ್‌ಗೆ ಕರೆ ನೀಡಿದ ಕುಸ್ತಿಪಟುಗಳು ಇಂದು ಹೊಸ ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮಾರ್ಗ ಮಧ್ಯೆಯೇ ಬ್ಯಾರಿಕೇಡ್ ಹಾಕಿ ಪೊಲೀಸರು ಪ್ರತಿಭಟನಾನಿರತರನ್ನು ತಡೆಯಲು ಪ್ರಯತ್ನಿಸಿದ್ದು, ಸಾಕ್ಷಿ ಮಲ್ಲಿಕ್ ಮತ್ತು ಸಂಗೀತ ಪೋಗಟ್ ಬ್ಯಾರಿಕೇಡ್ ಮುರಿಯಲು ಪ್ರಯತ್ನಿಸಿದ್ದರು. ಈ ವೇಳೆ ಪೊಲೀಸರು ಮತ್ತು ಕುಸ್ತಿಪಟುಗಳ ನಡುವೆ ಘರ್ಷಣೆ ಉಂಟಾಗಿದೆ.
ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದು ಆತನನ್ನು ಬಂಧಿಸಬೇಕೆಂದು ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕುಸ್ತಿಪಟುಗಳ ಪ್ರತಿಭಟನೆ ರಾಷ್ಟ್ರವ್ಯಾಪಿ ವಿವಾದ ಎಬ್ಬಿಸಿದ್ದು, ಮೋದಿ ಸರ್ಕಾರಕ್ಕೆ ಮುಜುಗರ ಸೃಷ್ಟಿಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಾಕ್ಷಿ ಮಲ್ಲಿಕ್, ‘ಚಾಂಪಿಯನ್‌ಗಳನ್ನು ಈ ರೀತಿ ನಡೆಸಿಕೊಳ್ಳಲಾಗುತ್ತಿದೆ. ಜಗತ್ತು ನಮ್ಮನ್ನು ನೋಡುತ್ತಿದೆ!‘ ಎಂದು ವಿಡಿಯೊ ಸಮೇತ ಪೋಸ್ಟ್ ಮಾಡಿದ್ದಾರೆ.
https://twitter.com/SakshiMalik/status/1662729269532065792?ref_src=twsrc%5Etfw%7Ctwcamp%5Etweetembed%7Ctwterm%5E1662729269532065792%7Ctwgr%5E1b2f7d8a37e1fe414d8f3d37bf14fed1d5743596%7Ctwcon%5Es1_c10&ref_url=https%3A%2F%2Fwww.prajavani.net%2Fnews%2Findia-news%2Fstrongly-condemn-the-way-delhi-police-manhandled-wrestlers-mamatha-banerjee-2297011
Discover more from Coastal Times Kannada
Subscribe to get the latest posts sent to your email.
Discussion about this post