ಕೋವಿಡ್-19 ಸಾಂಕ್ರಾಮಿಕ ಶ್ವಾಸಕೋಶಕ್ಕೆ ಸಂಬಂಧಿಸಿದ ಆತಂಕಗಳನ್ನು ಹೆಚ್ಚು ಮಾಡಿದೆ.
ಎರಡನೇ ಅಲೆ ಪ್ರಾರಂಭವಾದಾಗಿನಿಂದಲೂ ಶ್ವಾಸಕೋಶದ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳು ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೆಯಾಗುತ್ತಿದ್ದು, ತಪ್ಪು ಮಾಹಿತಿ ಕೂಡಾ ಹೆಚ್ಚು ಹರಡುತ್ತಿದೆ. ಪ್ರಮುಖವಾಗಿ ಆಸ್ತಮಾಗೆ ಸಂಬಂಧಿಸಿದ ರೋಗಿಗಳಿಗೆ ವಿಷಯಗಳಲ್ಲಿ ತಪ್ಪು ಮಾಹಿತಿ ಹರಡುತ್ತಿದೆ.
ಗ್ಲೋಬಲ್ ಬರ್ಡನ್ ಆಫ್ ಡೀಸೀಸ್ ರಿಪೋರ್ಟ್ ನ ಪ್ರಕಾರ 93 ಮಿಲಿಯನ್ ಮಂದಿ ಭಾರತದಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಪೈಕಿ 37 ಮಿಲಿಯನ್ ಮಂದಿ ಆಸ್ತಮಾವನ್ನು ಎದುರಿಸುತ್ತಿದ್ದಾರೆ. ಜಾಗತಿಕವಾಗಿ ಆಸ್ತಮಾ ಸಮಸ್ಯೆ ಎದುರಿಸುತ್ತಿರುವವರ ಪೈಕಿ ಶೇ.11.1 ರಷ್ಟು ಭಾರತದಲ್ಲಿದ್ದು, ಭಾರತ ಜಾಗತಿಕವಾಗಿ ಶೇ.42 ರಷ್ಟು ಆಸ್ತಮಾ ಸಾವುಗಳನ್ನು ಹೊಂದಿದ್ದು, ಆಸ್ತಮಾದ ರಾಜಧಾನಿಯಾಗಿದೆ.
ಧೂಳು, ಶೀತ, ಪ್ರಾಣಿಗಳ ರೋಮ, ವೈರಸ್ಗಳು ವಾಯು ಮಾಲಿನ್ಯಕಾರಕಗಳು, ಭಾವನಾತ್ಮಕ ತಳಮಳಗಳೂ ಸಹ ಆಸ್ತಮಾ ಹೆಚ್ಚುವುದಕ್ಕೆ ಕಾರಣಗಳಾಗಿವೆ. ಆಸ್ತಮಾಗೆ ಶಾಶ್ವತ ಪರಿಹಾರವಿಲ್ಲದೇ ಇದ್ದರೂ ಅದನ್ನು ನಿಯಂತ್ರಿಸುವ ಮೂಲಕ ಸಹಜ ಜೀವನ ನಡೆಸುವುದಕ್ಕೆ ಸಾಧ್ಯವಿದೆ. ಆದ್ದರಿಂದ ಸರಿಯಾದ ಚಿಕಿತ್ಸೆ ಹಾಗೂ ಆಸ್ತಮಾ ನಿರ್ವಹಣೆ ಬಹುಮುಖ್ಯವಾಗುತ್ತದೆ.
ಇನ್ಹಲೇಷನ್ ಥೆರಪಿಯ ಪರಿಣಾಮ ಶ್ವಾಸಕೋಶಕ್ಕೆ ನೇರವಾಗಿ ತಲುಪಲಿದ್ದು, ಅದರ ಪ್ರಭಾವ ತಕ್ಷಣವೇ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಆದ್ದರಿಂದ ಗ್ಲೋಬಲ್ ಸ್ಟ್ರಾಟರ್ಜಿ ಫಾರ್ ಆಸ್ತಮಾ ಮ್ಯಾನೇಜ್ಮೆಂಟ್ ಮಾರ್ಗಸೂಚಿಗಳು ಇನ್ಹಲೇಷನ್ ಥೆರಪಿಯನ್ನೇ ಶಿಫಾರಸು ಮಾಡುತ್ತವೆ.
ಆಸ್ತಮಾ ಹಾಗೂ ಕೋವಿಡ್
1.ಕೋವಿಡ್-19 ಭೀತಿಯ ನಡುವೆ ಆಸ್ತಮಾ ಎದುರಿಸುತ್ತಿರುವವರು ಪಾಲಿಸಬೇಕಾದ ಕೆಲವೊಂದು ಮಾರ್ಗಸೂಚಿಗಳನ್ನು ಡಾ. ಅಸ್ಮಿತಾ ಶಿಫಾರಸು ಮಾಡಿದ್ದಾರೆ.
2.ವೈದ್ಯರು ನೀಡಿದ ಇನ್ಹೇಲರ್ ಔಷಧಗಳನ್ನು ಮುಂದುವರೆಸಿ,
3.ಆಸ್ತಮಾ ಹೆಚ್ಚಾದಾಗ ರೋಗಿಗಳು ತಮ್ಮ ವೈದ್ಯರನ್ನು ಸಂಪರ್ಕ ಮಾಡಬೇಕು
4.ಆಸ್ತಮಾ ಸ್ವಲ್ಪ ಹೆಚ್ಚಾದಾಗ ನೆಬುಲೈಸರ್ ಗಳನ್ನು ಸಾಧ್ಯವಾದಷ್ಟೂ ತಪ್ಪಿಸಬೇಕು, ಏಕೆಂದರೆ ಕೋವಿಡ್-19 ವೈರಾಣು ಪ್ರಸರಣದ ಅಪಾಯ ಇರುತ್ತದೆ. ವೈದ್ಯಕೀಯ ಸಲಹೆಯ ಮೇರೆಗೆ ಮಾತ್ರವೇ ಬಳಕೆ ಮಾಡಬೇಕು
5.ಸ್ಪೇಸರ್ ಮೂಲಕ ಪ್ರೆಷರೈಸ್ಡ್ ಮೀಟರ್ಡ್-ಡೋಸ್ ಇನ್ಹೇಲರ್ (ಪಿಎಂಡಿಐ) ಗಳ ಬಳಕೆಗೆ ಆದ್ಯತೆ ನೀಡಿ.
6.ಕೋವಿಡ್-19 ಅಪಾಯ ಇರುವುದರಿಂದ ಸ್ಪೇಸರ್ ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
Discover more from Coastal Times Kannada
Subscribe to get the latest posts sent to your email.
Discussion about this post