• About us
  • Contact us
  • Disclaimer
Wednesday, February 4, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಾಂಡ್ ಸೊಭಾಣ್ ಸಂಸ್ಥೆಯ ಹರಿಕಾರ, ಕೊಂಕಣಿ ಸಂಗೀತ ಕ್ಷೇತ್ರದ ದಿಗ್ಗಜ ಎರಿಕ್ ಒಜಾರಿಯೊ ಇನ್ನಿಲ್ಲ

Coastal Times by Coastal Times
August 29, 2025
in ಕರಾವಳಿ
ಮಾಂಡ್ ಸೊಭಾಣ್ ಸಂಸ್ಥೆಯ ಹರಿಕಾರ, ಕೊಂಕಣಿ ಸಂಗೀತ ಕ್ಷೇತ್ರದ ದಿಗ್ಗಜ ಎರಿಕ್ ಒಜಾರಿಯೊ ಇನ್ನಿಲ್ಲ
24
VIEWS
WhatsappTelegramShare on FacebookShare on Twitter

ಮಂಗಳೂರು, ಆ.29: ಕೊಂಕಣಿ ಸಾಹಿತ್ಯ, ಕಲಾ‌ ಸಂಘಟಕ, ಮಾಂಡ್ ಸೊಭಾಣ್ ಸಂಸ್ಥೆಯ ಸ್ಥಾಪಕ, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಕೊಂಕಣಿ ಭಾಷಾ ಚಳವಳಿಯ ಹರಿಕಾರ, ವಿಶ್ವ ಕೊಂಕಣಿ ಕಲಾರತ್ನ ಎಂಬ ಬಿರುದು ಪಡೆದಿದ್ದ ಎರಿಕ್ ಅಲೆಕ್ಸಾಂಡರ್ ಒಝಾರಿಯೋ(76) ಇನ್ನಿಲ್ಲ.

ಕೆಲವು ವರ್ಷಗಳಿಂದ ಮೂತ್ರಪಿಂಡ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 19 ದಿನಗಳ ಚಿಕಿತ್ಸೆಯ ಬಳಿಕ ಕಾಯಿಲೆ ನಿಯಂತ್ರಣಕ್ಕೆ ಬಾರದೆ ಅವರು ಶುಕ್ರವಾರ ನಿಧನರಾಗಿದ್ದಾರೆ ಎಂದು ಅವರ ಆಪ್ತ ವಲಯದವರು ಮಾಹಿತಿ ನೀಡಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತದೇಹವನ್ನು ಆಗಸ್ಟ್ 31ರಂದು ಕಲಾಂಗಣ್ ನಲ್ಲಿ ಅಂತಿಮ ನಮನಕ್ಕೆ ಇರಿಸಲಾಗುವುದು. ವೆಲೆನ್ಸಿಯಾ ಸೈಂಟ್ ವಿನ್ಸೆಂಟ್ ಚರ್ಚ್ ನಲ್ಲಿ ಮಾಸ್ ನಡೆಸಲಿದ್ದು ಅಂದು ಸಂಜೆ ಬೋಳೂರಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ‌

ಕೊಂಕಣಿ ಸಂಗೀತ ಸಂಯೋಜಕ, ಸಾಂಸ್ಕೃತಿಕ ಕಾರ್ಯಕರ್ತ, ಟ್ರೇಡ್ ಯೂನಿಯನ್ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿದ್ದ ಎರಿಕ್ ಒಜಾರಿಯೋ ಮಂಗಳೂರಿನಲ್ಲಿ ಕೊಂಕಣಿ ಸಾಂಸ್ಕೃತಿಕ ಚಳವಳಿ ಹುಟ್ಟುಹಾಕಿದ್ದರು.‌ ಕೊಂಕಣಿ ಸಂಸ್ಕೃತಿ, ಸಂಗೀತ ಚಳವಳಿ ಉದ್ದೇಶಕ್ಕಾಗಿ 1986ರಲ್ಲಿ ಮಂಗಳೂರಿನಲ್ಲಿ ಮಾಂಡ್ ಸೋಭಾಣ್‌ ಎಂಬ ಹೊಸ ಪ್ರತಿಷ್ಠಾನ ಸ್ಥಾಪನೆ ಮಾಡಿದ್ದರು. ಕೊಂಕಣಿ ಪರಂಪರೆಯ ಕೇಂದ್ರವಾದ ಕಲಾಂಗಣ್ ಕೂಡ ಅವರ ಗರಡಿಯಲ್ಲೇ ಸ್ಥಾಪನೆಗೊಂಡಿತ್ತು. ಕರ್ನಾಟಕ ರಾಜ್ಯದಲ್ಲಿ ಶಾಲಾ ಶಿಕ್ಷಣದಲ್ಲಿ ಕೊಂಕಣಿಯನ್ನು ಐಚ್ಛಿಕ ಭಾಷೆಯಾಗಿ ಅಂಗೀಕರಿಸುವಲ್ಲಿ ಒಜಾರಿಯೊ ಪ್ರಮುಖ ಪಾತ್ರ ವಹಿಸಿದರು. ದೇಶ ವಿದೇಶದಲ್ಲಿ 200ಕ್ಕು ಹೆಚ್ಚು ಮಾಂಡ್ ಸೊಭಾಣ್ ಕಾರ್ಯಕ್ರಮ ನೀಡಿದ್ದರು.‌ಅಲ್ಲದೆ, ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತ ಕೊಟ್ಟು ಜನರಿಗೆ ಹತ್ತಿರವಾಗಿಸಿದ್ದರು.

2005-08ರಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗಲೂ ಹಲವಾರು ಕೊಂಕಣಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಲ್ಲದೆ, ಜಗತ್ತಿನಾದ್ಯಂತ ಇರುವ 145 ಕೊಂಕಣಿ ಸಂಘಟನೆಗಳನ್ನು ಒಂದೇ ವೇದಿಕೆಯಡಿ ತರುವಲ್ಲಿ ಶ್ರಮಿಸಿದ್ದರು. ಗೋವಾದಿಂದ ಮಂಗಳೂರು ವರೆಗಿನ ಕರಾವಳಿಯಲ್ಲಿ ಕುಡುಬಿ, ಸಿದ್ಧಿ, ಖಾರ್ವಿ ಜನಾಂಗ ಮಾತನಾಡುವ ಕೊಂಕಣಿಗರ ಜನಪದ, ಸಾಹಿತ್ಯಗಳನ್ನು ಒಂದೇ ವೇದಿಕೆಗೆ ತಂದು ಅವುಗಳ ಮಧ್ಯ ಸಾಂಸ್ಕೃತಿಕ ಸಂಬಂಧ ಏರ್ಪಡುವಂತೆ ಮಾಡಿದ್ದರು. 1993ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದ ಅವರು, ದೂರದರ್ಶನ ಸೇರಿದಂತೆ ವಿವಿಧ ಕಡೆ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರಿಂದ ದೇಶ- ವಿದೇಶದಲ್ಲಿ ಗೌರವ, ಅಭಿಮಾನಿಗಳನ್ನು ಪಡೆದಿದ್ದರು.‌

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಸೌಜನ್ಯ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ; ಚಿನ್ನಯ್ಯನ ಹೇಳಿಕೆ ಆಧರಿಸಿ ಎಸ್ಐಟಿಗೆ ದೂರಿತ್ತ ಕುಸುಮಾವತಿ

Next Post

ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಈಜಾಟಕ್ಕಿಳಿದ ಬೆಂಗಳೂರಿನ ಮಹಿಳೆ ನಾಪತ್ತೆ: ತೀವ್ರ ಶೋಧ

Related Posts

ರಾಜ್ಯದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲಿ ಜೀವ ರಕ್ಷಣೆಗೆ ‘ಬೋಟ್ ಆಂಬ್ಯುಲೆನ್ಸ್’ ಉಳ್ಳಾಲದ ಮೀನುಗಾರರ ಹೊಸ ಪ್ರಯತ್ನ
ಕರಾವಳಿ

ರಾಜ್ಯದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲಿ ಜೀವ ರಕ್ಷಣೆಗೆ ‘ಬೋಟ್ ಆಂಬ್ಯುಲೆನ್ಸ್’ ಉಳ್ಳಾಲದ ಮೀನುಗಾರರ ಹೊಸ ಪ್ರಯತ್ನ

February 4, 2026
21
ತೀವ್ರ ರಕ್ತದೊತ್ತಡ ; ಮಂಗಳೂರು ಸಿಎಆರ್ ಹೆಡ್ ಕಾನ್ಸ್ ಟೇಬಲ್ ಕುಸಿದು ಬಿದ್ದು ಸಾವು
ಕರಾವಳಿ

ತೀವ್ರ ರಕ್ತದೊತ್ತಡ ; ಮಂಗಳೂರು ಸಿಎಆರ್ ಹೆಡ್ ಕಾನ್ಸ್ ಟೇಬಲ್ ಕುಸಿದು ಬಿದ್ದು ಸಾವು

February 3, 2026
70
Next Post
ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಈಜಾಟಕ್ಕಿಳಿದ ಬೆಂಗಳೂರಿನ ಮಹಿಳೆ ನಾಪತ್ತೆ: ತೀವ್ರ ಶೋಧ

ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಈಜಾಟಕ್ಕಿಳಿದ ಬೆಂಗಳೂರಿನ ಮಹಿಳೆ ನಾಪತ್ತೆ: ತೀವ್ರ ಶೋಧ

Discussion about this post

Recent News

ರಾಜ್ಯದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲಿ ಜೀವ ರಕ್ಷಣೆಗೆ ‘ಬೋಟ್ ಆಂಬ್ಯುಲೆನ್ಸ್’ ಉಳ್ಳಾಲದ ಮೀನುಗಾರರ ಹೊಸ ಪ್ರಯತ್ನ

ರಾಜ್ಯದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲಿ ಜೀವ ರಕ್ಷಣೆಗೆ ‘ಬೋಟ್ ಆಂಬ್ಯುಲೆನ್ಸ್’ ಉಳ್ಳಾಲದ ಮೀನುಗಾರರ ಹೊಸ ಪ್ರಯತ್ನ

February 4, 2026
21
ವ್ಯಾಪಕ ಜನವಿರೋಧ ಹಿನ್ನೆಲೆ ಕುಂಬಳೆ ಟೋಲ್ ಗೇಟ್ ರದ್ದುಪಡಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ವ್ಯಾಪಕ ಜನವಿರೋಧ ಹಿನ್ನೆಲೆ ಕುಂಬಳೆ ಟೋಲ್ ಗೇಟ್ ರದ್ದುಪಡಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

February 4, 2026
9
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ರಾಜ್ಯದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲಿ ಜೀವ ರಕ್ಷಣೆಗೆ ‘ಬೋಟ್ ಆಂಬ್ಯುಲೆನ್ಸ್’ ಉಳ್ಳಾಲದ ಮೀನುಗಾರರ ಹೊಸ ಪ್ರಯತ್ನ

ರಾಜ್ಯದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲಿ ಜೀವ ರಕ್ಷಣೆಗೆ ‘ಬೋಟ್ ಆಂಬ್ಯುಲೆನ್ಸ್’ ಉಳ್ಳಾಲದ ಮೀನುಗಾರರ ಹೊಸ ಪ್ರಯತ್ನ

February 4, 2026
ವ್ಯಾಪಕ ಜನವಿರೋಧ ಹಿನ್ನೆಲೆ ಕುಂಬಳೆ ಟೋಲ್ ಗೇಟ್ ರದ್ದುಪಡಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ವ್ಯಾಪಕ ಜನವಿರೋಧ ಹಿನ್ನೆಲೆ ಕುಂಬಳೆ ಟೋಲ್ ಗೇಟ್ ರದ್ದುಪಡಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

February 4, 2026
ಮಂಜೇಶ್ವರ ; ತಂದೆಯ ಇರಿತದಿಂದ ಮಗಳು ಬಲಿ, ತಡೆಯಲು ಬಂದಿದ್ದ ತಂಗಿ ಗಂಡನೂ ಆಸ್ಪತ್ರೆಯಲ್ಲಿ ಸಾವು

ಮಂಜೇಶ್ವರ ; ತಂದೆಯ ಇರಿತದಿಂದ ಮಗಳು ಬಲಿ, ತಡೆಯಲು ಬಂದಿದ್ದ ತಂಗಿ ಗಂಡನೂ ಆಸ್ಪತ್ರೆಯಲ್ಲಿ ಸಾವು

February 4, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d