ಮಂಗಳೂರು: ದೇಶದಲ್ಲಿ ಪಿಎಫ್ಐ ನಿಷೇಧಿಸಿದಂತೆ ಎಸ್ಡಿಪಿಐ ಮತ್ತು ಮದರಸಗಳನ್ನು ನಿಷೇಧಿಸಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಆಗ್ರಹಿಸಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿರುವಾಗ ಪಿಎಫ್ಐನ ರಾಜಕೀಯ ಪಕ್ಷವಾದ ಎಸ್ಡಿಪಿಐಯನ್ನು ನಿಷೇಧ ಮಾಡದಿರುವುದು ಯಾಕೆ? ಮುಂದಿನ ಚುನಾವಣೆ ರಾಜಕೀಯಕ್ಕಾಗಿ ಲಾಭ ಪಡೆಯಲು ಎಸ್ಡಿಪಿಐಯನ್ನು ನಿಷೇಧ ಮಾಡದೇ ಇರುವ ಬಗ್ಗೆ ಅನುಮಾನಗಳಿದೆ. ಎಸ್ಡಿಪಿಐ ಮತ್ತು ಓವೈಸಿ ಪಕ್ಷವನ್ನು ಚುನಾವಣೆಗಾಗಿ ಬಿಜೆಪಿ ಬಳಸುತ್ತಿದೆ. ಎಸ್ಡಿಪಿಐ ನಿಷೇಧ ಮಾಡದೇ ಇರುವುದು ಬೇಸರದ ಸಂಗತಿ ಎಂದರು. ಅದೇ ರೀತಿ ಮದರಸಗಳನ್ನು ನಿಷೇಧಿಸಬೇಕು. ಈ ರೀತಿ ಮಾಡಿದರೆ ಹಿಂದೂ ರಾಷ್ಟ್ರ ನಿರ್ಮಾಣವಾಗಲಿದೆ ಎಂದ ಅವರು, ಬಿಜೆಪಿ ಎಂಬುದು ಭ್ರಷ್ಟ ಜನರ ಪಕ್ಷವಾಗಿದೆ. ಅದು ಹಿಂದೂ ಪಕ್ಷವಲ್ಲ. ಕೇವಲ ಬೂಟಾಟಿಕೆ ಮಾಡುತ್ತಿದೆ ಎಂದು ಟೀಕಿಸಿದರು. ಮುಸ್ಲಿಮರ ದೇಶ ವಿರೋಧಿ ಕೃತ್ಯಗಳಿಗೆ, ವಿಧ್ವಂಸಕ ಕೃತ್ಯಗಳಿಗೆ ಪ್ರೇರಣೆ ನೀಡುತ್ತಿರುವುದೇ ಅವರಿಗೆ ನೀಡಲಾಗುವ ಮದ್ರಸಾ ಶಿಕ್ಷಣ. ಮದ್ರಸಾದಲ್ಲಿ ಸಿಗುತ್ತಿರುವ ಶಿಕ್ಷಣದ ಕಾರಣ ಮುಸ್ಲಿಮರು ಮತಾಂಧತೆ ಬೆಳೆಸಿಕೊಳ್ಳುತ್ತಿದ್ದಾರೆ. ಹಾಗಾಗಿ ದೇಶದಲ್ಲಿ ಮದ್ರಸಾ ಶಿಕ್ಷಣಗಳನ್ನು ನಿಷೇಧಿಸಬೇಕು. ಜೊತೆಗೆ, ಎಸ್ಡಿಪಿಐ ಪಕ್ಷವನ್ನೂ ನಿಷೇಧ ಮಾಡಬೇಕು. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಎಸ್ಡಿಪಿಐ ನಿಷೇಧ ಮಾಡುವುದು ಕಷ್ಟವಲ್ಲ. ತಕ್ಷಣವೇ ಮದರಸಾಗಳ ಹಣಕಾಸಿನ ಮೂಲಗಳ ಬಗ್ಗೆ ಎನ್ಐಎ ತನಿಖೆಯನ್ನೂ ನಡೆಸಬೇಕು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಅಖಿಲ ಭಾರತ ಹಿಂದೂ ಮಹಾಸಭಾದ ಮುಖಂಡ ಧರ್ಮೇಂದ್ರ ಅವರು, ಪಿಎಫ್ಐಗೆ ವಕ್ಫ್ ಬೋರ್ಡ್ನಿಂದ ಹಣ ಸಂದಾಯವಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ವಕ್ಫ್ ಬೋರ್ಡ್ ಎಸ್ಡಿಪಿಐ, ಕಾಂಗ್ರೆಸ್ ಅಧೀನದಲ್ಲಿ ಇಲ್ಲ. ರಾಜ್ಯ ಬಿಜೆಪಿ ಸರ್ಕಾರದ ಅಧೀನದಲ್ಲಿದೆ. ಅದರ ಮೂಲಕ ಹಣ ಸಂದಾಯವಾಗುತ್ತಿರುವುದು ಬೇಸರ ವಿಚಾರ. ತಾಕತ್ತಿದ್ದರೆ ಬಿಜೆಪಿ ಸರ್ಕಾರ ವಕ್ಫ್ ಬೋರ್ಡ್ನ್ನು ತಕ್ಷಣ ನಿಷೇಧ ಮಾಡಲಿ ಎಂದು ಸವಾಲು ಹಾಕಿದರು. ಆರ್ಎಸ್ಎಸ್ ಬಗ್ಗೆ ಹೇಳಿಕೆ ನೀಡುವ ಸಿದ್ದರಾಮಯ್ಯ ಅವರು ಈ ರೀತಿ ಮಾತನಾಡಿದರೆ ಬಹಳ ಕಷ್ಟವಾದೀತು. ಇವರು ಆರೆಸ್ಸೆಸ್ ಕಾರ್ಯಕರ್ತರ ಚಪ್ಪಲಿಗೆ ಸಮ. ಆರೆಸ್ಸೆಸ್ ಬಗ್ಗೆ ಏನೇ ವ್ಯತಿರಿಕ್ತ ಹೇಳಿಕೆ ನೀಡಿದರೂ ಪರಿಣಾಮ ನೆಟ್ಟಗಿರುವುದಿಲ್ಲ. ದೇಶಭಕ್ತ ಸಂಘಟನೆಯ ಬಗ್ಗೆ ಮಾತನಾಡುವಾಗ ನಾಲಗೆ ಹಿಡಿತದಲ್ಲಿರಲಿ ಎಂದು ಹೇಳಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post