ರಾಣಿ ಪುಷ್ಪಲತಾದೇವಿ ಸಾರಥ್ಯದ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಆಶ್ರಯದಲ್ಲಿ” ಕೋಟಿಕಂಠ ಗಾಯನ ಮತ್ತು ಕವಿಗೋಷ್ಠಿ” ಮಂಗಳೂರಿನ ಕದ್ರಿ ಬಾಲ ಭವನದಲ್ಲಿ ಇಂದು (28-10-2022) ನಡೆಯಿತು .

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರ್ಮಿಕ ಇಲಾಖೆಯ ಪರಿವೀಕ್ಷಕ ರಾಜಶೇಖರ್ ರೆಡ್ಡಿ ಮಾತನಾಡಿ ಭಾರತದಲ್ಲಿ ಹುಟ್ಟಲು ಪುಣ್ಯ ಮಾಡಿರಬೇಕು. ಅದರಲ್ಲೂ ಕರ್ನಾಟಕದಲ್ಲಿ ಹುಟ್ಟಲು ತಪಸ್ಸು ಮಾಡಿರಬೇಕು. ಕರ್ನಾಟಕವು ನಾಲ್ಕು ಭಾಗಗಳಾಗಿತ್ತು, ಆದರೆ ಕರ್ನಾಟಕವನ್ನು ಅಖಂಡ ಕರ್ನಾಟಕವಾಗಿ ಕಾಣಬೇಕು ಈ ನಾಡಿನ ನೆಲ ಜಲ ಭಾಷೆಯನ್ನ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ . ಕರ್ನಾಟಕ ಏಕೀಕರಣಕ್ಕಾಗಿ ಅನೇಕರು ತಮ್ಮ ಪ್ರಾಣ ತೆತ್ತಿದ್ದಾರೆ ಎಂದು ಹೇಳಿದರು ಅಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು “ಕನ್ನಡದಲ್ಲಿ ಮಾತನಾಡುವೆ, ಕನ್ನಡದಲ್ಲಿ ವ್ಯವಹರಿಸುವೆ” ಎಂಬುದಾಗಿ ಪ್ರಮಾಣ ಮಾಡಿಸಿದರು .
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಉಪನ್ಯಾಸಕಿ ಹಾಗೂ ಕವಯತ್ರಿ ಸುಲೋಚನ ಪಚ್ಚಿನಡ್ಕ ಮಾತನಾಡಿ ಕಾವ್ಯ ಕಟ್ಟುವುದು ಅತ್ಯಂತ ಕ್ಲಿಷ್ಟಕರವಾದ ವಿಚಾರ. ಕಾವ್ಯ ಜನರ ಮನಸ್ಸನ್ನು ಮುಟ್ಟುವಂತಿರಬೇಕು ಕವಿತೆ ಜನರ ಭಾವನೆಗಳನ್ನು ಅರ್ಥೈಸುವಂತಿರಬೇಕು. ಮನುಷ್ಯನ ಮನಸ್ಸು ತಟ್ಟುವಂತಿರಬೇಕು. ನಾವು ಹಿರಿಯ ತಲೆಮಾರಿನ ಕಾವ್ಯವನ್ನು ಓದಿದ್ದೇವೆ ಕೇಳಿದ್ದೇವೆ. ಆದರೆ ಇತ್ತೀಚಿನ ಕವಿತೆಗಳಲ್ಲಿ ರಮ್ಯತೆ ಇದೆ ಹೊರತು ಗಂಭೀರತೆ ಇಲ್ಲ.
ಇವತ್ತಿಗೂ ಹಸಿವು ಮತ್ತು ಬಡತನದ ಬಗ್ಗೆ ಸಾಕಷ್ಟು ಕವಿತೆಗಳು ಬರುತ್ತಿದೆ ಎಂದರೆ ನಮ್ಮ ಸುತ್ತಮುತ್ತಲ ಸಮಾಜದಲ್ಲಿ ಇನ್ನೂ ಬಡತನ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿ ಎಂದ ಅವರು ಪರಂಪರೆಯನ್ನು ಇಟ್ಟುಕೊಂಡು ವರ್ತಮಾನದಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಹೇಳಿದರು

ಈ ಸಂದರ್ಭದಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ಕಾಂತಾರ ಚಿತ್ರದ ಪ್ರಥಮ ದೃಶ್ಯದಲ್ಲಿ ಕಾಣಿಸಿಕೊಂಡ ನಟ ನವೀನ್ ಬೊಂದೆಲ್ ಇವರನ್ನ ಹೂಗುಚ್ಚ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಾಮಾಜಿಕ ಚಿಂತಕ ಡಾಕ್ಟರ್ ಗಣೇಶ್ ಕುಮಾರ್ ಕವಿಗೋಷ್ಠಿಯ ಸಂಚಾಲಕ ಹಾಗೂ ಕವಿ ಡಾಕ್ಟರ್ ಸುರೇಶ್ ನೆಗಳ ಗುಳಿ NSCDF ಅಧ್ಯಕ್ಷ ಗಂಗಾಧರ ಗಾಂಧಿ ಮತ್ತಿತರರು ಉಪಸ್ಥಿತರಿದ್ದರು.
KSSAP ಅಧ್ಯಕ್ಷ ರಾಣಿ ಪುಷ್ಪಲತಾ ದೇವಿ ಸ್ವಾಗತಿಸಿ ಪ್ರಸ್ತಾವನೆ ಗೈದರು. ಗಂಗಾಧರ ಗಾಂಧಿ ವಂದಿಸಿದರು. ಅಪೂರ್ವ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತ ಸಂಸ್ಕೃತಿ ಇಲಾಖೆ ನಿರ್ದೇಶನದಂತೆ ಇ.ಎಸ್.ಕರ್ಕಿಯವರ ಹಚ್ಚೆವು ಕನ್ನಡದ ದೀಪ, ಹಂಸಲೇಖರವರ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು, ಹುಯಿಲಗೋಳ ನಾರಾಯಣ ರಾವ್ ರವರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹಾಡುಗಳನ್ನು ಸಮೂಹಗಾನದಲ್ಲಿ ಸಾದರ ಪಡಿಸಲಾಯಿತು.
Discover more from Coastal Times Kannada
Subscribe to get the latest posts sent to your email.
Discussion about this post