ನವದೆಹಲಿ, ಜೂನ್ 29: ದೆಹಲಿಯ ಆಸ್ಪತ್ರೆ ಒಂದಕ್ಕೆ ಗ್ರಾಹಕರ ನ್ಯಾಯಾಲಯ ಒಂದೂವರೆ ಕೋಟಿ ದಂಡ ಹಾಕಿದೆ. 15 ವರ್ಷಗಳ ಹಿಂದಿನ ಪ್ರಕರಣದಲ್ಲಿ ಕೋರ್ಟ್ ಜಟಾಪಟಿ ಬಳಿಕ ನ್ಯಾಯಾಧೀಶರು ದೆಹಲಿಯ ಭಾಟಿಯಾ ಗ್ಲೋಬಲ್ ಹಾಸ್ಪಿಟಲ್ ಮತ್ತು ಎಂಡೋಸರ್ಜರಿ ಇನ್ಸ್ ಟಿಟ್ಯೂಟ್ ಸಂಸ್ಥೆಗೆ ಭಾರೀ ದಂಡ ವಿಧಿಸಿದ್ದಾರೆ.
ಹೈದರಾಬಾದ್ ಮೂಲದ ಸಂತ್ರಸ್ತ ದಂಪತಿ ಸಂತಾನ ಬಯಸಿ, ಸಂತಾನೋತ್ಪತ್ತಿ ತಂತ್ರದ ಮೂಲಕ ಗರ್ಭ ಧರಿಸಲು ಆಸ್ಪತ್ರೆಯೊಂದನ್ನು ಸಂಪರ್ಕಿಸಿದ್ದರು. ಪರಿಣಾಮವಾಗಿ, ಅವರು 2009 ರಲ್ಲಿ ಅವಳಿ ಮಕ್ಕಳನ್ನು ಹೊಂದಿದ್ದರು. ದೆಹಲಿಯಲ್ಲಿ ಕೃತಕ ಗರ್ಭಧಾರಣೆಗೆಂದು ಆಸ್ಪತ್ರೆಗೆ ತೆರಳಿದ್ದ ದಂಪತಿಗೆ ಕಹಿ ಅನುಭವವಾಗಿದೆ. ತನ್ನ ಗಂಡನ ವೀರ್ಯದ ಬದಲಿಗೆ ಇನ್ನೊಬ್ಬ ಪುರುಷನ ವೀರ್ಯವನ್ನು ಮಹಿಳೆಗೆ ಆಸ್ಪತ್ರೆಯಲ್ಲಿ ನೀಡಲಾಗಿತ್ತು. ಅದರಿಂದ ಅವಳು ತೀವ್ರವಾಗಿ ನೊಂದಿದ್ದಳು. ತನಗಾದ ಅನ್ಯಾಯದ ವಿರುದ್ಧ ಕಾನೂನು ಮೊರೆ ಹೋದ ದಂಪತಿಯನ್ನು ಕಾನೂನು ಕೈಹಿಡಿದಿದೆ. ಇದರಿಂದ ಸಂತ್ರಸ್ತಗೆ ಆಸ್ಪತ್ರೆಯು ಒಂದೂವರೆ ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಕೋರ್ಟ್ ತೀರ್ಪು ನೀಡಿದೆ.
ಹೈದರಾಬಾದ್ ಮೂಲದ ಸಂತ್ರಸ್ತ ದಂಪತಿ ಸಂತಾನ ಬಯಸಿ, ಸಂತಾನೋತ್ಪತ್ತಿ ತಂತ್ರದ ಮೂಲಕ ಗರ್ಭ ಧರಿಸಲು ಆಸ್ಪತ್ರೆಯೊಂದನ್ನು ಸಂಪರ್ಕಿಸಿದ್ದರು. ಪರಿಣಾಮವಾಗಿ, ಅವರು 2009 ರಲ್ಲಿ ಅವಳಿ ಮಕ್ಕಳನ್ನು ಹೊಂದಿದ್ದರು. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿಯೆ ಇತ್ತು. ಮುಂದೆ ಕಹಿ ಸತ್ಯವೊಂದು ಹೊರಬಿದ್ದಿದೆ. ಆ ಎರಡು ಶಿಶುಗಳ ಡಿಎನ್‌ಎ ಟೆಸ್ಟ್ ನಡೆಸಿದಾಗ, ಆ ಮಕ್ಕಳ ತಂದೆ ಬೇರೆಯೊಬ್ಬ ಎಂದು ಕಂಡುಬಂದಿದೆ. ಇಲ್ಲಿ ಆಸ್ಪತ್ರೆಯವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಈ ಹಿನ್ನೆಲೆಯಲ್ಲಿ ದಂಪತಿಯಿಬ್ಬರೂ ನ್ಯಾಯಾಲಯದ ಮೊರೆ ಹೋಗಿದ್ದರು.
ಆಸ್ಪತ್ರೆಯವರು 2 ಕೋಟಿ ಪರಿಹಾರ ನೀಡಬೇಕು ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಈ ಬಗ್ಗೆ ಹಲವು ವರ್ಷಗಳಿಂದ ಸುದೀರ್ಘ ವಿಚಾರಣೆ ನಡೆದಿತ್ತು. ಇದೀಗ ನ್ಯಾಯಾಲಯವು ಪ್ರಕರಣದಲ್ಲಿ ದಂಪತಿಯ ಪರವಾಗಿ ತೀರ್ಪು ನೀಡಿದೆ. ತಪ್ಪಿತಸ್ಥ ಆಸ್ಪತ್ರೆ ಆಡಳಿತ ಮಂಡಳಿಯು ದಂಪತಿಗೆ 1.5 ಕೋಟಿ ರೂ. ಪರಿಹಾರ ಪಾವತಿಸುವಂತೆ ಎನ್‌ಸಿಡಿಆರ್‌ಸಿ ಆದೇಶಿಸಿದೆ. ಏತನ್ಮಧ್ಯೆ, ಕೃತಕ ಗರ್ಭಧಾರಣೆಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಹೊಸದಾಗಿ ರೂಪಿಸಬೇಕು ಮತ್ತು ಜನಿಸಿದ ಮಗುವಿನ ಡಿಎನ್‌ಎ ವಿವರಗಳನ್ನು ಸಹ ನೀಡಬೇಕು ಎಂದೂ ಆಯೋಗವು ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post