ಪುತ್ತೂರು: ಕೇಬಲ್ ಟಿವಿ ಹಾಗೂ ಕೇಬಲ್ ಇಂಟರ್ನೆಟ್ ನ ಮಟ್ಟಿಗೆ ಪುತ್ತೂರಿನಲ್ಲಿ ವಿಶ್ವಕೋಶದಂತಿದ್ದ ಪುತ್ತೂರು ನಗರದ ಉರ್ಲಾಂಡಿ ನಿವಾಸಿ ಸೋನಿ ಗೋನ್ಸಾಲಿಸ್ (51) ಅಲ್ಪ ಕಾಲದ ಅಸ್ವಸ್ಥತೆಯಿಂದ ನಿನ್ನೆ ತಡ ರಾತ್ರಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು ಮೃತರು ಪತ್ನಿ ಮತ್ತು ಓರ್ವ ಮಗಳನ್ನು ಅಗಲಿದ್ದಾರೆ. ಪುತ್ತೂರಿನ ಧರ್ಬೆಯಲ್ಲಿ ಕಛೇರಿ ಹೊಂದಿದ್ದ ಇವರು ಕಳೆದ 3 ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು . ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಜು .30 ರಂದು ನಸುಕಿನ ವೇಳೆ 1.30ರ ಸುಮಾರಿಗೆ ನಿಧನ ಹೊಂದಿದರು. ಇವರು ತಮ್ಮ ಆತ್ಮೀಯ ಬಳಗದಲ್ಲಿ ಸೋನಿ ಎಂದೇ ಕರೆಯಿಸಿಕೊಳ್ಳುತ್ತಿದ್ದರು.
ಪೋಟೋಗ್ರಾಫರ್ ಆಗಿ ವೃತ್ತಿ ಬದುಕು ಆರಂಭಿಸಿದ ಅವರು ಬಳಿಕ ಸರಿ ಸುಮಾರು ಎರಡು ದಶಕಗಳ ಹಿಂದೆ ಪುತ್ತೂರನ್ನೆ ಕೇಂದ್ರಿಕರಿಸಿ ಪುತ್ತೂರಿನಲ್ಲಿ ಕೇಬಲ್ ಚಾನೆಲ್ ಪಿಸಿಎನ್ ಆರಂಭವಾದಗ ಅದರಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು.ಅ ದರ ತಾಂತ್ರಿಕ ವಿಭಾಗದಲ್ಲೂ ಅವರು ಗಮನಾರ್ಹ ಪಾತ್ರ ನಿರ್ವಹಿಸಿದರು. ಈ ವೇಳೆ ಅವರು ಪುತ್ತೂರು ಪ್ರೆಸ್ ಕ್ಲಬ್ ನ ಸದಸ್ಯರು ಆಗಿದ್ದರು. ವಾರ್ತವಾಚಕರಾಗಿಯೂ ಪಿಸಿಎನ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರು ಅಪರೂಪದ ಸೌಂಡ್ ಇಂಜೀನಿಯರ್ ಪುತ್ತೂರಿನ ಖ್ಯಾತ ಕಲಾವಿದರು ರಸಮಂಜರಿ ಕಾರ್ಯಕ್ರಮಗಳನ್ನು ನೀಡಲು ಪುತ್ತೂರಿಗೆ ಬಂದಾಗಲೆಲ್ಲ ಆ ಕಾರ್ಯಕ್ರಮಗಳ ಸೌಂಡ್ ಅಪರೇಟರಾಗಿ ಸೋನಿಯವರನ್ನೆ ನೆಚ್ಚಿಕೊಳ್ಳುತ್ತಿದ್ದರು. ಮಾದ್ಯಮ ಲೋಕದಲ್ಲಿ ಹಾಗೂ ಕೇಬಲ್ ಜಗತ್ತಿನಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅವರು ಅದಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಿದ್ದರು. ಜಗತ್ತಿನಾದ್ಯಂತ ಹೆಚ್ಚು ಜನಪ್ರಿಯವಾದಗ ಆ ತಂತ್ರಜ್ಞಾನವನ್ನುಸಹ ಪುತ್ತೂರಿನಲ್ಲಿ ಬಳಸಿಕೊಂಡವರಲ್ಲಿ ಮೊದಲಿಗರು ಅವರು .
Discover more from Coastal Times Kannada
Subscribe to get the latest posts sent to your email.
Discussion about this post