ಬೆಂಗಳೂರು: ಕನ್ನಡ ಸಿನಿಮಾರಂಗ ಈಗ ಎಲ್ಲೆಡೆ ಮಿಂಚುತ್ತಿದೆ. ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಕನ್ನಡತಿ ಇಶಾನ ಹೊಸ ಸೇರ್ಪಡೆ. ಇನ್ನೂ ಹೆಸರಿಡದ ಕನ್ನಡ ಸಿನಿಮಾಗೆ ಇರಾನ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಗೀತ ಸಾಹಿತಿ ಹಾಗೂ ನಿರ್ದೇಶಕ ಗೌಸ್ ಪೀರ್ ನಿರ್ದೇಶನದ ಹೊಸ ಚಿತ್ರಕ್ಕೆ ಇಶಾನ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ಏ ಕ್ಯಾನ್ ಎಂಟರ್ಟೈನ್ ಬ್ಯಾನರ್ ಅಡಿಯಲ್ಲಿ ಥಿಲ್ಲ ಕಥಾಹಂದರದ ಸಿನಿಮಾ ನಿರ್ದೇಶಿಸುತ್ತಿರುವ ಗೌಸ್ ಪೀರ್, ಸದ್ಯದಲ್ಲೇ ಮುಹೂರ್ತ ನೆರವೇರಿಸುವ ಯೋಜನೆ ಹಾಕಿಕೊಂಡಿದ್ದಾರೆ.





ಇಶಾನ, ಕನ್ನಡ ಸಿನಿಮಾ ಮಾಡುವ ಮೊದಲೇ ತೆಲುಗು ಮತ್ತು ತಮಿಳು ಸಿನಿಮಾಗಳಿಗೂ ನಾಯಕಿಯಾಗಿದ್ದಾರೆ. ತಮಿಳಿನ ‘ರೇಟ್’ ಮತ್ತು ರೇಕ್ಲಾ ಎಂಬ ಸಿನಿಮಾದ ಇಬ್ಬರು ನಾಯಕಿಯರ ಪೈಕಿ ಇಶಾನ ಕೂಡ ಒಬ್ಬರು. ವಿಶೇಷವೆಂದರೆ, ಈ ಸಿನಿಮಾಗೆ ಪ್ರಭುದೇವ ಹೀರೋ. ತೆಲುಗಿನ ‘ಕರ್ಮ’ ಎಂಬ ಸಿನಿಮಾದಲ್ಲೂ ಇಶಾನ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ಕಾರ್ತಿಕ್ ವಿಬಕಿಲ್ಲರ್ ಹೀರೋ. ಸದ್ಯ ಪ್ರಭುದೇವ ಅವರ ಪ್ಯಾನ್ ಇಂಡಿಯಾ ಸಿನಿಮಾ ಇಷ್ಟರಲ್ಲೇ ಶುರುವಾಗಬೇಕಿದೆ.





ಅದರ ಜೊತೆಯಲ್ಲೇ ಇಶಾನ, ಕನ್ನಡದ ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಶಾನ ಮೂಲತಃ ಉತ್ತರ ಕರ್ನಾಟಕದ ಹುಡುಗಿ. ತಂದೆ ಡಾಕ್ಟರ್. ಬೆಂಗಳೂರಲ್ಲೇ ನೆಲೆಸಿರುವ ಇಶಾನ, ಬಿ.ಕಾಂ, ಎಂಬಿಎ ಮುಗಿಸಿದ್ದಾರೆ. ಕಾಲೇಜ್ ದಿನಗಳಲ್ಲೇ ಸಿನಿಮಾ ಅವಕಾಶ ಬಂದರೂ, ಓದು ಮುಗಿಸುವ ಹಂಬಲ ಅವರಿಗಿತ್ತು. ಕಾಲೇಜು ಮುಗಿದ ಕೂಡಲೇ ಇಶಾನ ಚಾಮರಾಜ್ ಮಾಸ್ಟರ್ ಬಳಿ ನಟನೆ ತರಬೇತಿ ಕೂಡ ಪಡೆದುಕೊಂಡಿದ್ದಾರೆ. ಮೊದಲ ಬಾಲ್‌ನಲ್ಲೇ ಸಿಕ್ಸರ್ ಹೊಡೆದಂತೆ, ಮೊದಲ ಎಂಟ್ರಿಯಲ್ಲೇ ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಾಯಕಿಯಾಗುವ ಅವಕಾಶ ಪಡೆದಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post