ಮಂಗಳೂರು ; ಅಡಿಕೆಯ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಕೆಂದ್ರ ಸರಕಾರ ಅಡಿಕೆಯ ಕನಿಷ್ಕ ಆಮದು ಬೆಲೆ(MIP)ಯನ್ನು ಈಗ ಇರುವ ಕೆಜಿಗೆ ರೂ. 251ಗಳಿಂದ 351ರೂಪಾಯಿಗಳಿಗೆ ಪರಿಷ್ಕರಿಸಿ ಆದೇಶ ಹೊರಡಿಸಿರುವುದನ್ನು ಕೇಂದ್ರೀಯ ಅಡಿಕೆ ಮತ್ತು ಕೊಕ್ಕೊ ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರಿ ಸಂಸ್ಥೆ (ಕ್ಯಾಂಪ್ಕೊ) ಸ್ವಾಗತಿಸಿದೆ. ಇದರಿಂದ ಕೆಲವು ತಿಂಗಳುಗಳಿಂದ ಏರಿಳಿತದ ಮೂಲಕ ಮಾರುಕಟ್ಟೆಯಲ್ಲಿ ಅಡಿಕೆಯ ದರ ಅನಿಶ್ಚಿತತೆಯಿಂದ ಕೂಡಿತ್ತು. ಮತ್ತು ರೈತರಲ್ಲಿ ಹತಾಶೆಯ ಭಾವನೆಯನ್ನು ಮೂಡಿಸಿತ್ತು.ಕೇಂದ್ರದ ಕ್ರಮದಿಂದಾಗಿ ಕಳಪೆ ಗುಣಮಟ್ಟದ ವಿದೇಶಿ ಅಡಿಕೆಯ ಆಮದಿನ ಮೇಲೆ ಭಾರಿ ಹೊಡೆತ ಬೀಳಲಿದ್ದು, ಉತ್ತಮ ಗುಣಮಟ್ಟದ ದೇಶೀ ಅಡಿಕೆಗೆ ಬೇಡಿಕೆ ಬರಲಿದೆ ಮತ್ತು ದರದಲ್ಲಿ ಸ್ಥಿರತೆ ಕಾಣಲಿದ್ದು ಅಡಿಕ ಮಾರುಕಟ್ಟೆ ಚೇತರಿಕೆಯಾಗಲಿದೆ. ಅಡಿಕೆ ಬೆಳೆಗಾರರ ಹಿತ ರಕ್ಷಕ ಕಾಂಪ್ಯೂ ಸಂಸ್ಥೆಯ ಆಡಳಿತ ಮಂಡಳಿ ಕೇಂದ್ರ ಸರಕಾರದ ಕ್ರಮಕ್ಕೆ ಕೃತಜ್ಞತೆ ಸಲ್ಲಿಸುತ್ತಿದೆ.
ಅಡಿಕೆಯ ಆಮದು ಬೆಲೆಯನ್ನು ಹೆಚ್ಚಿಸಿ ಅಡಿಕೆ ಬೆಳೆಗಾರನಿಗೆ ಬೆಂಬಲ ನೀಡಿರುವ ಸನ್ಮಾನ ನರೇಂದ್ರ ಮೋದಿಯವರಿಗೆ,ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಸನ್ಮಾನ್ಯ ಅಮಿತ್ ಷಾ ಮತ್ತು ಕೇಂದ್ರದ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್,ವಾಣಿಜ್ಯ ಸಚಿವ ಮಾನ್ಯ ಪಿಯೂಷ್ ಗೋಯಲ್ ಮತ್ತು ಕೃಷಿ ಸಚಿವರಾದ ಸನ್ಮಾನ ನರೇಂದ್ರ ಸಿಂಗ್ ತೋಮರ್ ಮತ್ತು ನಮ್ಮವರೇ ಆದ ಕೇಂದ್ರ ಕೃಷಿ ರಾಜ್ಯ ಸಚಿವ ಶೋಭ ಕರಂದ್ಲಾಜೆಯವರಿಗೆ ಕ್ಯಾಂಪ್ಕೊ ಕೃತಜ್ಞತೆ ಸಲ್ಲಿಸುತ್ತದೆ.ದೆಹಲಿ ನಿಯೋಗದ ನೇತೃತ್ವ ವಹಿಸಿದ ರಾಜ್ಯ ಗೃಹ ಸಚಿವರಾದ ಮಾನ್ಯ ಆರಗ ಜ್ಞಾನೇಂದ್ರ ಅವರಿಗೂ ಕ್ಯಾಂಪ್ಕೊ ಧನ್ಯವಾದ ಅರ್ಪಿಸುತ್ತವೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಹಳೆ ಅಡಿಕೆಯ ದರ ಪ್ರತಿ ಕೆ.ಜಿ.ಗೆ ರೂ. 450ರಿಂದ ರೂ. 500ರಷ್ಟು ಹಾಗೂ ಹೊಸ ಅಡಿಕೆಯ ದರ ಪ್ರತಿ ಕೆ.ಜಿ.ಗೆ ರೂ. 360ರಿಂದ ರೂ. 400ರಷ್ಟಿದೆ. ಕೇಂದ್ರದ ನಿರ್ಧಾರದಿಂದ ಅಡಿಕೆ ಧಾರಣೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಗೃಹ ಸಚಿವರಾದ ಸನ್ಮಾನ್ಯ ಅರಗ ಜ್ಞಾನೇಂದ್ರ ರ ನೇತೃತ್ವದಲ್ಲಿ ಕ್ಯಾಂಪ್ಕೊ, ಮ್ಯಾಮೊಸ್,ಟಿ ಎಸ್ ಎಸ್, ತುಮ್ಮೋಸ್, ಅಡಿಕೆ ಮಾರಾಟ ಮಹಾಮಂಡಳಿ ಮತ್ತು ಸಹಕಾರಿ ರಂಗದ ಹಿರಿಯರಾದ ಮಾನ್ಯ ಮಂಜಪ್ಪ ಹೊಸಬಾಳ ಹಾಗೂ ಸಹಕಾರ ಭಾರತೀಯ ರಾಷ್ಟ್ರೀಯ ನಾಯಕರಾದ ಮಾನ್ಯ ರಮೇಶ್ ವೈದ್ಯ ಮುಂತಾದ ಸದಸ್ಯರನ್ನೂಳಗೊಂಡ ನಿಯೋಗವು ದೆಹಲಿಗೆ ತೆರಳಿ ಆಮದು ಕನಿಷ್ಠ ಬೆಲೆಯನ್ನು ಹೆಚ್ಚಿಸುವಂತೆ ಕೃಷಿ ಮತ್ತು ವಾಣಿಜ್ಯ ಸಚಿವರಲ್ಲಿ ಮನವಿಯನ್ನು ಮಾಡಿತ್ತು.ನಂತರದ ದಿನಗಳಲ್ಲಿ ಕ್ಯಾಂಪ್ರೊದ ನಿರಂತರ ಸಂಪರ್ಕ ಮತ್ತು ಒತ್ತಡದ ಪರಿಣಾಮ ಕೇಂದ್ರ ಸರಕಾರ ಸ್ಪಂದಿಸಿ ಆದೇಶ ಹೊರಡಿಸಿದೆ.ಕನಿಷ್ಕ ಆಮದು ಬೆಲೆಯನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವ ಶೋಭ ಕರಂದ್ಲಾಜೆಯವರು ಪುತ್ತೂರಿನಲ್ಲಿ ಕ್ಯಾಂಪ್ಕೊದ 5ನೇ ಕೃಷಿ ಯಂತ್ರ ಮೇಳ ಉದ್ಘಾಟನಾ ಸಮಾರಂಭದಲ್ಲಿ ಘೋಷಣೆ ಮಾಡಿರುತ್ತಾರೆ. ಈಗ ತನ್ನ ಮಾತಿನಂತೆ ಕ್ರಮ ಕೃತಿಗೊಂಡಿರುವ ಬಗ್ಗೆ ಕ್ಯಾಂಪ್ಕೊ ಹರ್ಷ ವ್ಯಕ್ತ ಪಡಿಸಿದೆ.
ಅಡಿಕೆಯ ಕನಿಷ್ಕ ಆಮದು ಬೆಲೆಯ ಹೆಚ್ಚಳದಿಂದ ಅಡಿಕೆ ಮಾರುಕಟ್ಟೆ ಚೇತರಿಕೆಯಾಗಲಿದ್ದು ರೈತರು ಸುಳ್ಳು ಸುದ್ದಿಗಳಿಗೆ ಕಿವಿಗೊಡದ ಅಗತ್ಯಕ್ಕೆ ತಕ್ಕಂತೆ ಮಾರಾಟ ಮಾಡಿ ಅಡಿಕೆ ಧಾರಣೆಯ ಸ್ಥಿರತೆಗೆ ಸಹಕಾರ ನೀಡುವಂತೆ ಕ್ಯಾಂಪ್ಕೊ ಆಡಳಿತ ಮಂಡಳಿ ಮನವಿ ಮಾಡುತ್ತದೆ.
ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಕೃಷ್ಣಕುಮಾರ್, ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ನಿರ್ದೇಶಕರಾದ ರಾಘವೇಂದ್ರ ಭಟ್ ಕೆದಿಲ, ಕೃಷ್ಣ ಪ್ರಸಾದ್ ಮಡ್ತಿಲ, ಡಾ.ಜಯಪ್ರಕಾಶ್, ಪ್ರಧಾನ ವ್ಯವಸ್ಥಾಪಕಿ ರೇಷ್ಮಾ ಮಲ್ಯ, ಸಹಾಯಕ ಪ್ರಧಾನ ವ್ಯವಸ್ಥಾಪಕ ಗೋವಿಂದ ಭಟ್ ಸುದ್ದಿಗೋಷ್ಠಿಯಲ್ಲಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post