ಗ್ವಾಲಿಯರ್ : ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆ ಮತ್ತು ಆಕೆಯ ಸಂಬಂಧಿಯನ್ನು ಐವರು ಪುರುಷರ ಗುಂಪು ರೈಲಿನಿಂದ ತಳ್ಳಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ. ರೈಲಿನಿಂದ ಬಿದ್ದು ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿದ್ದ ಮಹಿಳೆ ಮತ್ತು ಆಕೆಯ ಸಂಬಂಧಿಯನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಮಹಿಳೆ ಜಾರ್ಖಂಡ್ನ ಮುಜಾಫರ್ಪುರದಿಂದ ಗುಜರಾತ್ನ ಸೂರತ್ಗೆ ಸಂಬಂಧಿಯೊಂದಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಸಂತ್ರಸ್ತೆ ಸಂಬಂದಿ ಜೊತೆ ಜಾರ್ಖಂಡ್ನಿಂದ ಗುಜರಾತಿಗೆ ತನ್ನ ಸಂಬಂಧಿಕರೊಂದಿಗೆ ಸೂರತ್ ಎಕ್ಸ್ಪ್ರೆಸ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಐವರು ಅಪರಿಚಿತರ ಗುಂಪು ಮಹಿಳೆಯ ಅನುಮತಿ ಇಲ್ಲದೆ ಫೋಟೋ ತೆಗೆದಿದ್ದಾರೆ. ಇದಕ್ಕೆ ಮಹಿಳೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಹಿಳೆ ಮತ್ತು ಆರೋಪಿಗಳ ನಡುವೆ ವಾಗ್ವಾದ ನಡೆದಿದ್ದು, ಈ ಅವರು ಮಹಿಳೆ ಜೊತೆಗಿದ್ದ ಸಂಬಂಧಿ ಮೇಲೆ ದಾಳಿ ನಡೆಸಿದ್ದಾರೆ.
ಗಲಾಟೆ ದೊಡ್ಡದಾಗುವುದ ಬೇಡ ಎಂದು ಮಹಿಳೆ ಹಾಗೂ ಸಂಬಂಧಿ ಜಾಗ ಬದಲಿಸಿ ಕುಳಿತಿದ್ದಾರೆ. ಆದರೂ, ಕಿಡಿಗೇಡಿಗಳ ಗುಂಪು ಅವರನ್ನು ಹಿಂಬಾಲಿಸಿ ಮಹಿಳೆಯ ಸೀರೆ ಎಳೆದು ಆಕೆಯನ್ನು ಅರೆಬೆತ್ತಲೆ ಮಾಡಿದ್ದಾರೆ. ನಂತರ ಆರೋಪಿಗಳು ಇಬ್ಬರನ್ನು ಚಲಿಸುವ ರೈಲಿನಿಂದ ತಳ್ಳಿದ್ದಾರೆ. ರಾತ್ರಿಯಿಡೀ, ಗಾಯಾಳುಗಳು ಬರೋಡಿ ಗ್ರಾಮದ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಕಳೆದಿದ್ದಾರೆ.
ಆರೋಪಿಗಳಿಗಾಗಿ ತೀವ್ರ ಶೋಧ : ಇವರನ್ನು ಕಂಡ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಹಿಳೆಯ ಹೇಳಿಕೆ ಪಡೆದ ಬಿಲುವಾ ಪೊಲೀಸರು ಐವರು ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ತನಿಖೆಯಾಗಿ ಪ್ರತ್ಯೇಕ ತಂಡವನ್ನು ರಚಿಸಿದ್ದಾರೆ. ಜೊತೆಗೆ ಆರೋಪಿಗಳನ್ನು ಪತ್ತೆ ರೈಲ್ವೇ ಸ್ಟೇಷನ್ನ ಸಿಸಿಟಿವಿ ಪರೀಕ್ಷೆ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Discussion about this post