ಬೆಂಗಳೂರು,: ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಹು ನಿರೀಕ್ಷಿತ ಕಾಂತಾರ ಭಾಗ- 2ರ ಟೀಸರ್ ರಿಲೀಸ್ ಆಗಿದೆ. ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ಮೂಡಿಬರಲಿರುವ ಚಿತ್ರದ ಫಸ್ಟ್ ಲುಕ್ ಭಾರೀ ಕುತೂಹಲ ಮೂಡಿಸಿದೆ. ಅಘೋರಿ ಅವತಾರದಲ್ಲಿ ರಿಷಬ್ ಶೆಟ್ಟಿ ಘೋರ ರೂಪದಲ್ಲಿ ಕಂಡಿದ್ದಾರೆ. ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ ಕೊಡಲಿಯನ್ನು ಹಿಡಿದಿರುವ ರಿಷಬ್ ಪೋಸ್ಟರ್ ನಾನಾ ರೀತಿಯ ಚರ್ಚೆಗಳನ್ನು ಹುಟ್ಟು ಹಾಕಿದೆ.
‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಕಾರಣದಿಂದ ‘ಕಾಂತಾರ’ ಪ್ರಿಕ್ವೆಲ್ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ನವೆಂಬರ್ 27ರಂದು ರಿಲೀಸ್ ಆದ ‘ಕಾಂತಾರ ಚಾಪ್ಟರ್ 1’ ಫಸ್ಟ್ ಲುಕ್ ಟೀಸರ್ ಕಂಡ ವೀಕ್ಷಣೆಯೇ ಇದಕ್ಕೆ ಸಾಕ್ಷಿ. ಏಳು ಭಾಷೆಗಳಲ್ಲಿ ರಿಲೀಸ್ ಆಗಿರುವ ಈ ಟೀಸರ್ ಬರೋಬ್ಬರಿ 12 ಮಿಲಿಯನ್ ಅಂದರೆ 1.2 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಈ ಮೂಲಕ ಹಲವು ದಾಖಲೆಗಳನ್ನು ಇದು ಸರಿಗಟ್ಟಿದೆ.
ಕಳೆದ ವರ್ಷ ‘ಕಾಂತಾರ’ ಸಿನಿಮಾ ರಿಲೀಸ್ ಆಯಿತು. ಇದಾದ ಬಳಿಕ ಎರಡನೇ ಪಾರ್ಟ್ ಮಾಡಲು ರಿಷಬ್ ಶೆಟ್ಟಿ ಮುಂದಾದರು. ಸ್ಕ್ರಿಪ್ಟ್ ಕೆಲಸಕ್ಕೆ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ಬಹಳ ಶ್ರದ್ಧೆಯಿಂದ ಕುಳಿತು ಅವರು ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದಾರೆ. ನವೆಂಬರ್ 27ರಂದು ಕುಂದಾಪುರ ಆನೆಗುಡ್ಡೆ ದೇವಾಲಯದಲ್ಲಿ ಚಿತ್ರತಂಡ ಸ್ಕ್ರಿಪ್ಟ್ ಪೂಜೆ ಮಾಡಿದೆ. ಜೊತೆಗೆ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.
ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಬಂಗಾಳಿ ಭಾಷೆಯಲ್ಲಿ ಟೀಸರ್ ಬಿಡುಗಡೆಯಾಗಿದ್ದು ಹೊಂಬಾಳೆ ಫಿಲ್ಮ್ಸ್ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದೆ. ಯುಟ್ಯೂಬ್ನಲ್ಲಿ ಟೀಸರ್ ಬಿಡುಗಡೆಯಾಗಿದ್ದು ಕಾಂತಾರ ಎರಡರ ಚಿತ್ರಕಥೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಏಳುನೂರು ವರ್ಷಗಳ ಹಿಂದೆ ಆಳಿದ್ದ ಕದಂಬರ ಕಾಲಕ್ಕೆ ಕರೆದುಕೊಂಡು ಹೋಗಲಿದೆ. ದೈವಿಕ ಭೂಮಿ ಕಡೆಗೆ ಹೆಜ್ಜೆ ಎಂದು ಕಾಂತಾರ ಪ್ರೀಕ್ವೆಲ್ ಅನ್ನು ಹೊಂಬಾಳೆ ತಂಡ ಬಣ್ಣಿಸಿದೆ.
ರಿಷಬ್ ಶೆಟ್ಟಿ ಅವರು ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದಿದ್ದಾರೆ. ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ‘ಇದು ಬೆಳಕಲ್ಲ ದರ್ಶನ’ ಎನ್ನುವ ಡೈಲಾಗ್ ಕೇಳಿದೆ. ‘ಕಾಂತಾರ’ ಸಿನಿಮಾದಲ್ಲಿ ಈ ಡೈಲಾಗ್ ಹೆಚ್ಚು ಹೈಲೈಟ್ ಆಗಿತ್ತು. ಆ ಡೈಲಾಗ್ ಇಲ್ಲಿಯೂ ಇದೆ. ಕದಂಬರ ಕಾಲದ ಕಥೆ ಸಿನಿಮಾದಲ್ಲಿ ಇದೆ.
ಸದ್ಯ ರಿಷಬ್ ಶೆಟ್ಟಿ ಅವರು ಕಥೆಯ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ‘ಈ ಹಿಂದೆ ಏನಾಗಿತ್ತು ಎಂಬುದನ್ನು ಹೇಳ ಹೊರಟಿದ್ದೇವೆ. ಜವಾಬ್ದಾರಿ ಹೆಚ್ಚಿದೆ. ಕಥೆ ಹೇಳಲ್ಲ, ಸಿನಿಮಾನೇ ಮಾತನಾಡುತ್ತದೆ’ ಎಂದಿದ್ದರು ರಿಷಬ್ ಶೆಟ್ಟಿ. ‘ಕಾಂತಾರ’ ಸಿನಿಮಾದ ಆರಂಭದಲ್ಲಿ ರಾಜನ ಕಥೆ ಬರುತ್ತದೆ. ಅದೇ ‘ಕಾಂತಾರ ಚಾಪ್ಟರ್ 1’ ಚಿತ್ರದ ಜೀವಾಳವೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ.
12 Million views and counting ❤️🔥
The magic of #Kantara1Teaser continues to enchant hearts of the audience!▶️ https://t.co/WQ2PyKOCwK#KantaraChapter1 #Kantara1FirstLook #Kantara @shetty_rishab @VKiragandur @hombalefilms @HombaleGroup @AJANEESHB @Banglan16034849… pic.twitter.com/QxnyVcteQY
— Hombale Films (@hombalefilms) November 28, 2023
Discover more from Coastal Times Kannada
Subscribe to get the latest posts sent to your email.
Discussion about this post