ಬೆಂಗಳೂರಿನ ಸಂತ ಜೋಸೆಫ್ ಯೂನಿವರ್ಸಿಟಿಯ ವಾರ್ಷಿಕ ಕಾರ್ಯಕ್ರಮವಾದ ‘ಸಿಂಟಾಕ್ಸಿಯಾ’ ಮಾರ್ಚ್ 12 ಮತ್ತು 13ರಂದು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ನಡೆಯಿತು. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚಿನ ಈವೆಂಟ್ ಗಳು ನಡೆದವು.
ಎಐ ನೆಕ್ಸಸ್ ಹೆಲ್ತ್ಕೇರ್ನ ಭಾರತ ಮತ್ತು ಉಪಖಂಡದ ವ್ಯವಸ್ಥಾಪಕ ಮತ್ತು ಸಂಸ್ಥಾಪಕ ಪೀಟರ್ ಪುಷ್ಪರಾಜ್ ಅವರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಐಟಿ ವಿದ್ಯಾರ್ಥಿಗಳ ಪರಿಶ್ರಮದ ಪ್ರಯತ್ನಗಳನ್ನು ಶ್ಲಾಘಿಸಿ ಅವರ ಸಾಧನೆಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಸ್ಕೂಲ್ ಆಫ್ ಇನ್ಪರ್ಮೆಶನ್ ಟೆಕ್ನಾಲಜಿ, ಕಾಲೇಜಿನ ಡೀನ್, ರೆ| ಫಾ| ಡೆನ್ಜಿಲ್ ಲೋಬೊ ಎಸ್.ಜೆ, ಐಬಿಎಮ್ ಸಂಶೋಧನೆಯನ್ನು ಉಲ್ಲೇಖಿಸಿ, ಕ್ಷಿಪ್ರ ತಾಂತ್ರಿಕ ಪ್ರಗತಿಗಳ ಮೇಲೆ ಬೆಳಕು ಚೆಲ್ಲಿದರು ಮತ್ತು ಯಶಸ್ಸಿಗೆ ಕಾರಣವಾಗುವ ಸೃಜನಶೀಲತೆಯ ಮಹತ್ವವನ್ನು ಒತ್ತಿ ಹೇಳಿದರು. ಕೇವಲ ಪರೀಕ್ಷೆಯ ಅಂಕಗಳ ಮೇಲೆ ಕೇಂದ್ರಿಕರಿಸುವ ಬದಲು, ಕೌಶಲ್ಯವನ್ನು ಬೆಳೆಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ತಾಂತ್ರಿಕ ಪ್ರವೃತ್ತಿಗಳ ಮಹತ್ವವನ್ನು ತಿಳಿಸಿದರು.
ಮಾರ್ಚ್ 13ರಂದು ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಮಾಣಪತ್ರ ಮತ್ತು ಸ್ಮರಣಿಕೆಗಳನ್ನು ನೀಡಲಾಯಿತು. ಟ್ರೋಫಿಯನ್ನು ನೀಡಿದರು. ಕರ್ನಾಟಕ ಮತ್ತು ತಮಿಳುನಾಡಿನ ಕಾಲೇಜುಗಳಿಂದ ಸುಮಾರು 250 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಡಾ| ಶಶಿಕಲಾ ಮತ್ತು ಡಾ| ಮೃಣ್ಮಯೀ ಸಿಂಟಾಕ್ಸಿಯಾದ ಅಧ್ಯಾಪಕ ಸಂಯೋಜಕರಾಗಿದ್ದರು. ಎರಡನೇ ವರ್ಷದ ಬಿ.ಎಸ್ಸಿಯ ನಿಖಿಲ್, ವಿದ್ಯಾರ್ಥಿ ಸಂಯೋಜಕರಾಗಿದ್ದು, ಬಿಸಿಎ, ಎಮ್ಎಸ್ಸಿ ಮತ್ತು ಎಮ್ ಸಿಎಯ ವಿದ್ಯಾರ್ಥಿಗಳ ತಂಡ ಅವರಿಗೆ ಸಹಾಯ ಮಾಡಿತು.
ಸೇಂಟ್ ಜೋಸೆಫ್ ವಿಶ್ವವಿದ್ಯಾಲಯವು ಬಿಸಿಎ, ಬಿಸಿಎ-ಡೇಟಾ ಅನಾಲಿಟಿಕ್ಸ್, ಮ್ಯಾಥ್ಸ್, ಸ್ಟೆಟಿಸ್ಟಿಕ್ಸ್ ಮತ್ತು ಇಲೆಕ್ಟ್ರಾನಿಕ್ಸ್ ಜೊತೆಗೆ ಬಿಸಿಎ ಕಂಪ್ಯೂಟರ್ ಸೈನ್ಸ್, ಸ್ನಾತಕೋತ್ತರದಲ್ಲಿ ಕಂಪ್ಯೂಟರ್ ಸೈನ್ಸ್, ಎಮ್ಎಸ್ಸಿ-ಬಿಗ್ ಡೇಟಾ, ಎಮ್ ಸಿಎ ವಿಭಾಗಗಳನ್ನು ಹೊಂದಿದೆ. ಎಮ್ಎಸ್ಸಿ-ಸೈಬರ್ ಸೆಕ್ಯುರಿಟಿ ಮತ್ತು ಎಐ ತರಬೇತಿಯನ್ನು 2024-25ರ ಅವಧಿಯಲ್ಲಿ ಪರಿಚಯಿಸಲಾಗುವುದು ಎಂದು ಯೂನಿವರ್ಸಿಟಿಯ ಪ್ರಕಟಣೆ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post