ಮಂಗಳೂರು, ಫೆ 01 : ನೆತ್ತಿಲಪದವು ಎಂಬಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು 27 ಲಕ್ಷ ರೂ. ಮೌಲ್ಯದ ಗಾಂಜಾ ಸೇರಿದಂತೆ ಒಟ್ಟು 32,07,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಿನಾಂಕ 31-01-2023 ರಂದು ಬಂದ ಖಚಿತ ಮಾಹಿತಿಯಂತೆ ನೆತ್ತಿಲಪದವು ಎಂಬ ಅಕ್ರಮವಾಗಿ ಮಾದಕ ದ್ರವ್ಯ ಗಾಂಜಾವನ್ನು ಸಾಗಾಟ ಮಾಡುತ್ತಿದ KA-21-M-4973 ನೇ ಫೋರ್ಡ್ ಕಂಪೆನಿಯ ನೇರಳೆ ಬಣ್ಣದ ಕಾರನ್ನು ವಶಕ್ಕೆ ಪಡೆದು ಸುಮಾರು 27 ಲಕ್ಷ ಮೌಲ್ಯದ ಮಾದಕ ದ್ರವ್ಯ ಗಾಂಜಾವನ್ನು ಸ್ವಾಧೀನಪಡಿಸಿ ಆರೋಪಿಗಳಾದ ಅಬೂಬಕ್ಕರ್ ಸಿದ್ದೀಕ್ ಅಲಿಯಾಸ್ ಹ್ಯಾರೀಸ್ (35), ಕುಂಬ್ಳೆ ಮಂಬ್ರಾನ್ ಗ್ರಾಮದ ಆರಿಕ್ಕಾಡಿ ಬೀರಂಟಿಕಾರ ನಿವಾಸಿ ಅಖಿಲ್ ಎಂ. (25), ಹಾಗೂ ಹೈದರ್ ಆಲಿ ಅಲಿಯಾಸ್ ಗಾಡಿ ಹೈದರ್ (39) ಬಂಧಿತ ಆರೋಪಿಗಳು ವಶಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ 32,07,000/- ಆಗಬಹುದು.
ಈ ಕಾರ್ಯಾಚರಣೆಯನ್ನು ಮಾನ್ಯ ಪೊಲೀಸ್ ಆಯುಕ್ತರಾದ ಶಶಿಕುಮಾರ್, ಐಪಿಎಸ್ ಹಾಗೂ ಶ್ರೀ ಅಂಶು ಕುಮಾರ್, ಉಪ ಪೊಲೀಸ್ ಆಯುಕ್ತರು ಕಾನೂನು ಮತ್ತು ಸುವ್ಯಸ್ಥೆ ಹಾಗೂ ದಿನೇಶ್ ಕುಮಾರ್, ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರ ನಿರ್ದೇಶನದಂತೆ, ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಧನ್ಯ ನಾಯಕ್ ರವರ ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ ರವರ ನೇತೃತ್ಯದಲ್ಲಿ ಪಿ.ಎಸ್.ಐ ರವರಾದ ಶರಣಪ್ಪ ಭಂಡಾರಿರವರು ಸಿಬಂದಿಗಳಾದ ಶೈಲೇಂದ್ರ, ನವೀನ್, ವಿನ್ಸೆಂಟ್ ರೊಡ್ರಿಗಸ್, ಸುರೇಶ್, ಬರಮ ಬಡಿಗೇರ, ಹೇಮಂತ್ ಪುರುಷೋತ್ತಮ, ದೇವರಾಜ್, ಶಿವ ಕುಮಾರ್, ದೀಪಕ್, ಸುನೀತಾ, ಮಹಮ್ಮದ್ ಗೌಸ್ ಹಾಗೂ ತಾಂತ್ರಿಕ ವಿಭಾಗದ ಮನೋಜ್ ರವರೊಂದಿಗೆ ಕಾರ್ಯಚರಣೆ ನಡೆಸಿರುತ್ತಾರೆ.
Discover more from Coastal Times Kannada
Subscribe to get the latest posts sent to your email.
Discussion about this post