• About us
  • Contact us
  • Disclaimer
Tuesday, May 26, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಜಿಮ್‌ಗಳಲ್ಲಿ ನಕಲಿ ಬ್ರ್ಯಾಂಡ್‌ನ ಪ್ರೊಟೀನ್‌ಯುಕ್ತ ಪೌಡರ್‌ ಮಾರಾಟ ಪತ್ತೆ

Coastal Times by Coastal Times
February 1, 2023
in ಆರೋಗ್ಯ
ಜಿಮ್‌ಗಳಲ್ಲಿ ನಕಲಿ ಬ್ರ್ಯಾಂಡ್‌ನ ಪ್ರೊಟೀನ್‌ಯುಕ್ತ ಪೌಡರ್‌ ಮಾರಾಟ ಪತ್ತೆ
50
VIEWS
WhatsappTelegramShare on FacebookShare on Twitter

ಬೆಂಗಳೂರು: ರಾಜ್ಯದ ಜಿಮ್‌ಗಳಲ್ಲಿ ಮಾರಾಟ ಮಾಡುತ್ತಿರುವ ಪೌಷ್ಟಿಕಾಂಶ ಪುಡಿಯ ಮಾದರಿ ಅನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಅಧಿಕಾರಿಗಳು ಸಂಗ್ರಹಿಸಿ ಪರಿಶೀಲಿಸಿದ್ದು, ಹಲವು ಕಡೆ ನಕಲಿ ಬ್ರ್ಯಾಂಡ್‌ನ ಪೌಡರ್‌ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.

ರಾಜ್ಯದಲ್ಲಿ ಒಟ್ಟು 81 ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಆ ಪೈಕಿ 54 ನೈಜ ಬ್ರ್ಯಾಂಡ್‌ನ ಪುಡಿಗಳೇ ಅಲ್ಲ ಎಂಬುದು ದೃಢಪಟ್ಟಿದೆ. ಚಿಕ್ಕಮಗಳೂರಿನ ಜಿಮ್‌ನಲ್ಲಿ ಮಾರುತ್ತಿದ್ದ ಪುಡಿ ಬಳಕೆಗೇ ಯೋಗ್ಯ ಆಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಎಚ್ಚೆತ್ತಿರುವ ಸರ್ಕಾರ ಮಾರಾಟ ಹಾಗೂ ತಯಾರಕ ಕೇಂದ್ರಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಫಿಟ್‌ನೆಸ್‌ ಕಾಪಾಡಿಕೊಳ್ಳುವ ಉತ್ಸಾಹಿಗಳು ಈ ರೀತಿಯ ನಕಲಿ ಪುಡಿ ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜತೆಗೆ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

‘ಎಫ್‌ಎಸ್‌ಎಸ್‌ಎಐ ಮಾನದಂಡದ ಪ್ರಕಾರ ಯಾವುದೇ ಲೇಬಲ್‌ ಹಾಕಿರಲಿಲ್ಲ. ಸಾವಯವ ಉತ್ಪನ್ನ, ಕೊಬ್ಬು ಮುಕ್ತವಾದ ಪುಡಿ ಎಂದು ನಮೂದಿಸಿದ್ದರೂ ಯಾವುದೇ ಅಧಿಕೃತ ಪ್ರಮಾಣಪತ್ರ ಇರಲಿಲ್ಲ. ತಯಾರಿಕೆ ದಿನಾಂಕ, ಅವಧಿ ಮುಗಿಯುವ ದಿನದ ವಿವರವೂ ಇರಲಿಲ್ಲ’ ಎಂದು ಪ್ರಾಧಿಕಾರದ ಜಂಟಿ ಆಯುಕ್ತ ಡಾ.ಹರೀಶ್ವರ ಹೇಳಿದರು.

54 ನಕಲಿ ಮಾದರಿಗಳ ಪೈಕಿ ಬೆಂಗಳೂರು ವ್ಯಾಪ್ತಿಯಲ್ಲೇ 17 ನಕಲಿ ಬ್ರ್ಯಾಂಡ್‌ ಪದಾರ್ಥಗಳು ಸಿಕ್ಕಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 27 ಮಾದರಿ ಸಂಗ್ರಹಿಸಲಾಗಿತ್ತು. ‘ಈ ರೀತಿ ನಕಲಿ ಪದಾರ್ಥಗಳ ಮಾರಾಟ ಹಾಗೂ ತಯಾರಕರ ವಿರುದ್ಧ ಕ್ರಮಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ₹ 2 ಲಕ್ಷದ ವರೆಗೆ ದಂಡ ಹಾಕಲು ಅವಕಾಶವಿದೆ. ಗಂಭೀರ ಸ್ವರೂಪದ ಅಪರಾಧ ಪ್ರಕರಣ ಪತ್ತೆಯಾದರೆ ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದೆ’ ಎಂದೂ ತಿಳಿಸಿದ್ದಾರೆ.

‘ಬಳಕೆಗೆ ಯೋಗ್ಯವಲ್ಲದ ಉತ್ಪನ್ನ ಮಾರಾಟಗಾರರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು. ಈ ಪ್ರಕರಣದಲ್ಲಿ ₹ 5 ಲಕ್ಷ ದಂಡ ಹಾಗೂ 6 ತಿಂಗಳ ತನಕ ಜೈಲು ಶಿಕ್ಷೆ ಆಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಈ ಪದಾರ್ಥಗಳನ್ನು ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಪರೀಕ್ಷೆಗೆ ಒಳಪಡಿಸಬಹುದು. ಅಲ್ಲಿನ ತಜ್ಞರು ನೀಡುವ ವರದಿಯನ್ನು ಅಂತಿಮಗೊಳಿಸಿ, ನಕಲಿ ಬ್ರ್ಯಾಂಡ್‌ ತಯಾರಕರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ನಕಲಿ ಪುಡಿ ಪತ್ತೆಯಾದ ಸ್ಥಳ ಸಂಖ್ಯೆ:ಬೆಂಗಳೂರು 17, ಉಡುಪಿ 5, ಮೈಸೂರು 3, ಬಾಗಲಕೋಟೆ 2

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಶಕ್ತಿನಗರದಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಿಂದ 1 ಲಕ್ಷ ಪಡೆದು ವಂಚನೆ

Next Post

ಮಂಗಳೂರು: ಅಕ್ರಮ ಗಾಂಜಾ ಸಾಗಾಟ-ಮೂವರ ಬಂಧನ, 32 ಲಕ್ಷ ರೂ. ಮೌಲ್ಯದ ಸೊತ್ತು ವಶ

Related Posts

ಆಫ್ರಿಕಾದಲ್ಲಿ ಎಬೋಲಾ ವೈರಸ್ ಹರಡುತ್ತಿರುವ ಹಿನ್ನೆಲೆ: ಮಾರ್ಗಸೂಚಿ ಬಿಡುಗಡೆ, ಬೆಂಗಳೂರಿಗೆ ಬರುವವರಿಗೆ 21 ದಿನ ಕ್ವಾರಂಟೈನ್
ಆರೋಗ್ಯ

ಆಫ್ರಿಕಾದಲ್ಲಿ ಎಬೋಲಾ ವೈರಸ್ ಹರಡುತ್ತಿರುವ ಹಿನ್ನೆಲೆ: ಮಾರ್ಗಸೂಚಿ ಬಿಡುಗಡೆ, ಬೆಂಗಳೂರಿಗೆ ಬರುವವರಿಗೆ 21 ದಿನ ಕ್ವಾರಂಟೈನ್

May 23, 2026
47
ಮಂಗಳೂರು: ಅಪರೂಪದ ಶ್ವಾಸಕೋಶ ಸಂಬಂಧಿತ ಸ್ಥಿತಿಗೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ
ಆರೋಗ್ಯ

ಮಂಗಳೂರು: ಅಪರೂಪದ ಶ್ವಾಸಕೋಶ ಸಂಬಂಧಿತ ಸ್ಥಿತಿಗೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ

February 9, 2026
60
Next Post
ಮಂಗಳೂರು: ಅಕ್ರಮ ಗಾಂಜಾ ಸಾಗಾಟ-ಮೂವರ ಬಂಧನ, 32 ಲಕ್ಷ ರೂ. ಮೌಲ್ಯದ ಸೊತ್ತು ವಶ

ಮಂಗಳೂರು: ಅಕ್ರಮ ಗಾಂಜಾ ಸಾಗಾಟ-ಮೂವರ ಬಂಧನ, 32 ಲಕ್ಷ ರೂ. ಮೌಲ್ಯದ ಸೊತ್ತು ವಶ

Discussion about this post

Recent News

ಆರೀಫ್ ಕೊಲೆ ಪ್ರಕರಣ ; ಹಣಕಾಸು ನೆರವು ನೀಡಿದ್ದ ಟೋಪಿ ನೌಫಾಲ್ ಸೋದರ ಇಬ್ರಾಹಿಂ ಸಿನಾನ್ ಬಂಧನ,

ಆರೀಫ್ ಕೊಲೆ ಪ್ರಕರಣ ; ಹಣಕಾಸು ನೆರವು ನೀಡಿದ್ದ ಟೋಪಿ ನೌಫಾಲ್ ಸೋದರ ಇಬ್ರಾಹಿಂ ಸಿನಾನ್ ಬಂಧನ,

May 26, 2026
51
ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

May 25, 2026
44
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಆರೀಫ್ ಕೊಲೆ ಪ್ರಕರಣ ; ಹಣಕಾಸು ನೆರವು ನೀಡಿದ್ದ ಟೋಪಿ ನೌಫಾಲ್ ಸೋದರ ಇಬ್ರಾಹಿಂ ಸಿನಾನ್ ಬಂಧನ,

ಆರೀಫ್ ಕೊಲೆ ಪ್ರಕರಣ ; ಹಣಕಾಸು ನೆರವು ನೀಡಿದ್ದ ಟೋಪಿ ನೌಫಾಲ್ ಸೋದರ ಇಬ್ರಾಹಿಂ ಸಿನಾನ್ ಬಂಧನ,

May 26, 2026
ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

May 25, 2026
ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೋರ್ವರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ ಐವರ ಬಂಧನ

ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೋರ್ವರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ ಐವರ ಬಂಧನ

May 25, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d