ನವದೆಹಲಿ: ಎರಡು ವರ್ಷಗಳ ಕಾಲ ಶೇ 7.5ರಷ್ಟು ಸ್ಥಿರಬಡ್ಡಿಯೊಂದಿಗೆ ಮಹಿಳೆಯರಿಗಾಗಿ ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ’ ಎನ್ನುವ ಹೊಸ ಉಳಿತಾಯ ಯೋಜನೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಮಹಿಳೆ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ ಈ ಯೋಜನೆಯಲ್ಲಿ ಗರಿಷ್ಠ ರೂ. 2 ಲಕ್ಷ ಮೊತ್ತದ ಹಣವನ್ನು ಠೇವಣಿಯಾಗಿ ಇರಿಸಬಹುದು. ಭಾಗಶಃ ಹಿಂಪಡೆಯುವ ಸೌಲಭ್ಯವೂ ಯೋಜನೆಯಲ್ಲಿದೆ. ‘ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ದೀನ್‌ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಜೀವನೋಪಾಯ ಮಿಷನ್ ಅಡಿಯಲ್ಲಿ 81 ಲಕ್ಷ ಸ್ವ-ಸಹಾಯ ಮಹಿಳಾ ಗುಂಪುಗಳನ್ನು ರಚಿಸಲಾಗಿದೆ. ಹಲವು ಸಾವಿರ ಸದಸ್ಯರನ್ನು ಹೊಂದಿರುವ ದೊಡ್ಡ ಉತ್ಪಾದಕ ಉದ್ಯಮಗಳು ಅಥವಾ ಸಮೂಹಗಳ ರಚನೆಯ ಮೂಲಕ ಈ ಗುಂಪುಗಳನ್ನು ಆರ್ಥಿಕ ಸಬಲೀಕರಣದ ಮುಂದಿನ ಹಂತವನ್ನು ತಲುಪಲು ಸಕ್ರಿಯಗೊಳಿಸಲಾಗುವುದು’ ಎಂದು ನಿರ್ಮಲಾ ಹೇಳಿದ್ದಾರೆ.
‘ಪಿಎಂ-ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸಣ್ಣ ರೈತರಿಗೆ ರೂ. 2.25 ಲಕ್ಷ ಕೋಟಿಗೂ ಹೆಚ್ಚು ಆರ್ಥಿಕ ನೆರವು ನೀಡಲಾಗಿದೆ. ಈ ಯೋಜನೆಯಡಿ ಸುಮಾರು 3 ಕೋಟಿ ಮಹಿಳಾ ರೈತರಿಗೆ ರೂ. 54 ಸಾವಿರ ಕೋಟಿ ಒದಗಿಸಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಮಿತಿಯನ್ನು ರೂ.15 ಲಕ್ಷದಿಂದ ರೂ. 30ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮಾಸಿಕ ಆದಾಯ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು ರೂ.4.5 ಲಕ್ಷದಿಂದ ರೂ.9 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಜಂಟಿ ಖಾತೆಯ ಮಿತಿ ರೂ.9 ಲಕ್ಷದಿಂದ ರೂ.15 ಲಕ್ಷಕ್ಕೆ ಹೆಚ್ಚಿಸಲಾಗಿದೆ
Discover more from Coastal Times Kannada
Subscribe to get the latest posts sent to your email.








Discussion about this post