• About us
  • Contact us
  • Disclaimer
Sunday, May 10, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಲ್ಯಾಂಡಿಂಗ್​ ವೇಳೆ ರನ್​ವೇನಲ್ಲಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ ; 100ಕ್ಕೂ ಹೆಚ್ಚು ಜನರಿಗೆ ಗಾಯ

Coastal Times by Coastal Times
March 24, 2026
in ರಾಷ್ಟ್ರೀಯ ಸುದ್ದಿ
ಲ್ಯಾಂಡಿಂಗ್​ ವೇಳೆ ರನ್​ವೇನಲ್ಲಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ ; 100ಕ್ಕೂ ಹೆಚ್ಚು ಜನರಿಗೆ ಗಾಯ
46
VIEWS
WhatsappTelegramShare on FacebookShare on Twitter

ನ್ಯೂಯಾರ್ಕ್(ಯುಎಸ್‌ಎ)​: ಭಾನುವಾರ ರಾತ್ರಿ ಇಲ್ಲಿನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆದ ಏರ್​ ಕೆನಡಾ ವಿಮಾನ, ಬಂದರು ಪ್ರಾಧಿಕಾರದ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಕನಿಷ್ಠ 100 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ನ್ಯೂಯಾರ್ಕ್​ ಪೊಲೀಸ್​ ಇಲಾಖೆ ವಿಮಾನ ಡಿಕ್ಕಿಯಾಗಿರುವ ಬಗ್ಗೆ ದೃಢಪಡಿಸಿದೆ. ಆದರೆ ಈ ಬಗ್ಗೆ ತಕ್ಷಣಕ್ಕೆ ಹೆಚ್ಚುವರಿ ಮಾಹಿತಿಯನ್ನು ನೀಡಿಲ್ಲ. ರಾತ್ರಿ 11.38ಕ್ಕೆ ರನ್​ವೇಯಲ್ಲಿ ವಿಮಾನ ವಾಹನಕ್ಕೆ ಡಿಕ್ಕಿ ಹೊಡೆದಿರುವುದಾಗಿ ವರದಿಯಾಗಿದೆ. ತಕ್ಷಣ ಅಗ್ನಿಶಾಮಕ ದಳ ಪ್ರತಿಕ್ರಿಯಿಸಿದೆ ಎಂದು ನ್ಯೂಯಾರ್ಕ್​ ನಗರದ ಅಗ್ನಿಶಾಮಕ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ವಿಮಾನದ ಮುಂಭಾಗಕ್ಕೆ ತೀವ್ರ ಹಾನಿಯಾಗಿರುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗುತ್ತಿವೆ. ಸ್ಥಳದಲ್ಲಿದ್ದವರು ಸೆರೆ ಹಿಡಿದಿರುವ ವಿಡಿಯೋಗಳಲ್ಲಿ ವಿಮಾನವು ತೀವ್ರವಾಗಿ ಹಾನಿಗೊಳಗಾಗಿರುವುದನ್ನು ಗಮನಿಸಬಹುದು. ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್‌ನ ನ್ಯಾಷನಲ್ ಏರ್‌ಸ್ಪೇಸ್ ಸಿಸ್ಟಮ್ ವೆಬ್‌ಸೈಟ್, ಲಾಗಾರ್ಡಿಯಾ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ವರದಿ ಮಾಡಿದೆ. ಸೋಮವಾರ ಮುಂಜಾನೆ ಲಾಗಾರ್ಡಿಯಾದಿಂದ ಹೊರಡುವ ಎಲ್ಲಾ ವಿಮಾನಗಳು ವಿಳಂಬವಾಗಿವೆ ಅಥವಾ ರದ್ದಾಗಿವೆ ಎಂದು ವಿಮಾನ ನಿಲ್ದಾಣದ ವೆಬ್‌ಸೈಟ್​ನಲ್ಲಿ ಹೇಳಲಾಗಿದೆ.

ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನ ಲ್ಯಾಂಡಿಂಗ್ ಆಗುವಾಗ ವಿಮಾನ ನಿಲ್ದಾಣದ ರಕ್ಷಣಾ ಮತ್ತು ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ವಿಮಾನ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ FlightRadar24 ಹೇಳಿದೆ. ಏರ್ ಕೆನಡಾದ ಪ್ರಾದೇಶಿಕ ಪಾಲುದಾರ ಜಾಝ್ ಏವಿಯೇಷನ್ ​​ನಿರ್ವಹಿಸುವ CRJ-900 ವಿಮಾನ ಮಾಂಟ್ರಿಯಲ್‌ನಿಂದ ಹೊರಟು ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು ಎಂದು ವೆಬ್​ಸೈಟ್​ ಹೇಳಿದೆ.

ಫ್ಲೈಟ್‌ರಾಡರ್ 24 ಪ್ರಕಾರ, ವಿಮಾನ ರನ್​ವೇನಲ್ಲಿನ ಸಾಗುತ್ತಿದ್ದ ವೇಳೆ, ವಾಹನ ತನ್ನ ಮಾರ್ಗದಿಂದ ತಪ್ಪಿ ಬಂದಿದೆ. ಆಗ ವಿಮಾನ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಏರ್ ಕೆನಡಾ ವಿಮಾನದ ಮುಂಭಾಗ ಹಾಗೂ ಕಾಕ್‌ಪಿಟ್ ಪ್ರದೇಶ ತೀವ್ರವಾಗಿ ಹಾನಿಗೊಳಗಾಗಿದೆ. ಅಪಘಾತ ಸಂಭವಿಸಿದ ತಕ್ಷಣವೇ ತುರ್ತು ವಾಹನಗಳು ಸ್ಥಳಕ್ಕಾಗಮಿಸಿವೆ. ಕ್ವೀನ್ಸ್ ಪ್ರಾಂತ್ಯದ ಪ್ರಮುಖ ಸಾರಿಗೆ ಕೇಂದ್ರದ ಬಳಿ ರಸ್ತೆ ಮುಚ್ಚಿರುವ ಬಗ್ಗೆ, ಸಂಚಾರ ವಿಳಂಬ ಮತ್ತು ತುರ್ತು ಸಿಬ್ಬಂದಿ ವ್ಯವಸ್ಥೆ ಮಾಡಿರುವುದಾಗಿ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ನ್ಯೂಯಾರ್ಕ್‌ನ ತುರ್ತು ನಿರ್ವಹಣಾ ಪ್ರಾಧಿಕಾರವು ಜನರಿಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹೇಳಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಬೆಂದೂರ್: ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿಯಿಂದ ಸಂವಾದಾತ್ಮಕ ವಿಚಾರ ಸಂಕಿರಣ

Next Post

ಈಶಾನ್ಯ ಭಾರತಕ್ಕೆ ಭಾರತ್ ಗೌರವ್ ಬೇಸಿಗೆ ವಿಶೇಷ ಪ್ರವಾಸಿ ರೈಲು, ಮೂರು ಪ್ಯಾಕೇಜ್‌, 14 ದಿನಗಳ ಪ್ರವಾಸ

Related Posts

ವಿಜಯ್‌ಗೆ ಬೆಂಬಲ ನೀಡಿದ ಸಿಪಿಐ, ಸಿಪಿಐ(ಎಂ), ವಿಸಿಕೆ; ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸಾಧ್ಯತೆ
ರಾಜಕೀಯ

ವಿಜಯ್‌ಗೆ ಬೆಂಬಲ ನೀಡಿದ ಸಿಪಿಐ, ಸಿಪಿಐ(ಎಂ), ವಿಸಿಕೆ; ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸಾಧ್ಯತೆ

May 8, 2026
54
ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ
ರಾಜಕೀಯ

ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ

May 7, 2026
50
Next Post
ಈಶಾನ್ಯ ಭಾರತಕ್ಕೆ ಭಾರತ್ ಗೌರವ್ ಬೇಸಿಗೆ ವಿಶೇಷ ಪ್ರವಾಸಿ ರೈಲು, ಮೂರು ಪ್ಯಾಕೇಜ್‌, 14 ದಿನಗಳ ಪ್ರವಾಸ

ಈಶಾನ್ಯ ಭಾರತಕ್ಕೆ ಭಾರತ್ ಗೌರವ್ ಬೇಸಿಗೆ ವಿಶೇಷ ಪ್ರವಾಸಿ ರೈಲು, ಮೂರು ಪ್ಯಾಕೇಜ್‌, 14 ದಿನಗಳ ಪ್ರವಾಸ

Discussion about this post

Recent News

ತ್ರಿಶೂರ್ ನಲ್ಲಿ ಚಿನ್ನಾಭರಣ ಕದ್ದು ಬಂದ ಕುಖ್ಯಾತ ಮನೆಗಳ್ಳತನ ಆರೋಪಿ ಮಂಗಳೂರು ಪೊಲೀಸರ ಬಲೆಗೆ

ತ್ರಿಶೂರ್ ನಲ್ಲಿ ಚಿನ್ನಾಭರಣ ಕದ್ದು ಬಂದ ಕುಖ್ಯಾತ ಮನೆಗಳ್ಳತನ ಆರೋಪಿ ಮಂಗಳೂರು ಪೊಲೀಸರ ಬಲೆಗೆ

May 10, 2026
38
ಕಡಬ: ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತೆಯರು ನದಿಯಲ್ಲಿ ಮುಳುಗಿ ಸಾವು

ಕಡಬ: ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತೆಯರು ನದಿಯಲ್ಲಿ ಮುಳುಗಿ ಸಾವು

May 9, 2026
72
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ತ್ರಿಶೂರ್ ನಲ್ಲಿ ಚಿನ್ನಾಭರಣ ಕದ್ದು ಬಂದ ಕುಖ್ಯಾತ ಮನೆಗಳ್ಳತನ ಆರೋಪಿ ಮಂಗಳೂರು ಪೊಲೀಸರ ಬಲೆಗೆ

ತ್ರಿಶೂರ್ ನಲ್ಲಿ ಚಿನ್ನಾಭರಣ ಕದ್ದು ಬಂದ ಕುಖ್ಯಾತ ಮನೆಗಳ್ಳತನ ಆರೋಪಿ ಮಂಗಳೂರು ಪೊಲೀಸರ ಬಲೆಗೆ

May 10, 2026
ಕಡಬ: ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತೆಯರು ನದಿಯಲ್ಲಿ ಮುಳುಗಿ ಸಾವು

ಕಡಬ: ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತೆಯರು ನದಿಯಲ್ಲಿ ಮುಳುಗಿ ಸಾವು

May 9, 2026
ವಿಜಯ್‌ಗೆ ಬೆಂಬಲ ನೀಡಿದ ಸಿಪಿಐ, ಸಿಪಿಐ(ಎಂ), ವಿಸಿಕೆ; ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸಾಧ್ಯತೆ

ವಿಜಯ್‌ಗೆ ಬೆಂಬಲ ನೀಡಿದ ಸಿಪಿಐ, ಸಿಪಿಐ(ಎಂ), ವಿಸಿಕೆ; ನಾಳೆ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸಾಧ್ಯತೆ

May 8, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d