• About us
  • Contact us
  • Disclaimer
Saturday, August 8, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ದೋಹಾ (ಕತಾರ್) ಅನಿಲ ಸ್ಥಾವರದಲ್ಲಿ ಭಾರಿ ಸ್ಫೋಟ : 54 ಜನರಿಗೆ ಗಾಯ, 18 ಮಂದಿ ನಾಪತ್ತೆ

Coastal Times by Coastal Times
June 22, 2026
in ರಾಷ್ಟ್ರೀಯ ಸುದ್ದಿ
ದೋಹಾ (ಕತಾರ್) ಅನಿಲ ಸ್ಥಾವರದಲ್ಲಿ ಭಾರಿ ಸ್ಫೋಟ : 54 ಜನರಿಗೆ ಗಾಯ, 18 ಮಂದಿ ನಾಪತ್ತೆ
31
VIEWS
WhatsappTelegramShare on FacebookShare on Twitter

ದೋಹಾ (ಕತಾರ್): ಕತಾರ್‌ನ ರಾಸ್ ಲಫಾನ್ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 54 ಜನರು ಗಾಯಗೊಂಡಿದ್ದು, 18 ಮಂದಿ ಕಾಣೆಯಾಗಿದ್ದಾರೆ ಎಂದು ಕತಾರ್ ಅಧಿಕಾರಿಗಳು ತಿಳಿಸಿದ್ದಾರೆ. ರಾಸ್ ಲಫಾನ್, ಕತಾರ್‌ನ ನೈಸರ್ಗಿಕ ಅನಿಲ ಮಾರಾಟದ ಪ್ರಮುಖ ರಫ್ತು ಟರ್ಮಿನಲ್ ಆಗಿದೆ. ಯುದ್ಧದ ಸಮಯದಲ್ಲಿ ಈ ಪ್ರದೇಶದ ಮೇಲೆ ಇರಾನ್ ವೈಮಾನಿಕ ದಾಳಿ ನಡೆಸಿತ್ತು. ಹಾಗಾಗಿ ಘಟಕವನ್ನು ವಾರಗಳ ಕಾಲ ಮುಚ್ಚಲಾಗಿತ್ತು.

“ಭಾನುವಾರ ತಡರಾತ್ರಿ ಬರ್ಜಾನ್ ಸ್ಥಾವರದಲ್ಲಿ ಕಾರ್ಯಾಚರಣೆಗಳನ್ನು ಮರು ಪ್ರಾರಂಭಿಸುವ ಪ್ರಯತ್ನಗಳು ನಡೆಯುತ್ತಿದ್ದ ಸಮಯದಲ್ಲಿ ಈ ದುರಂತ ಸಂಭವಿಸಿದೆ” ಎಂದು ಕತಾರ್ ಅಧಿಕಾರಿಗಳು ಎಕ್ಸ್​ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

“ಹಲವು ದಿನಗಳ ಬಳಿಕ ಬರ್ಜಾನ್ ಸ್ಥಾವರದಲ್ಲಿ ಕಾರ್ಯಾಚರಣೆಯನ್ನು ಕೈಗೊಳ್ಳುವ ಪ್ರಯತ್ನ ನಡೆಸಲಾಗುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ. ಬೆಂಕಿ ಕೂಡ ಕಾಣಿಸಿಕೊಂಡಿದೆ. ಘಟನೆಯಲ್ಲಿ ಹಲವು ಕಾರ್ಮಿಕರು ಗಾಯಗೊಂಡರೆ, ಇನ್ನೂ ಕೆಲವರು ಕಾಣೆಯಾಗಿರುವ ಮಾಹಿತಿ ಇದೆ. ಆದರೆ, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ” ಎಂದು ಕತಾರ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಇರಾನ್ ಮತ್ತು ಯುದ್ಧದ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿಯ ಮೇಲೆ ಉಂಟಾಗಿದ್ದ ಉದ್ವಿಗ್ನತೆಯಿಂದಾಗಿ ಕತಾರ್ ತನ್ನ ಅನಿಲ ನಿರ್ಬಂಧಗಳನ್ನು ಸಡಿಲಗೊಳಿಸಿದ ಹಿನ್ನೆಲೆಯಲ್ಲಿ, ಕತಾರ್ ಮತ್ತೆ ರಫ್ತು ಕಾರ್ಯಾಚರಣೆಗಳನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿತ್ತು. ಈ ವೇಳೆ ಭಾನುವಾರ ರಾತ್ರಿ ಬರ್ಜಾನ್ ಅನಿಲ ಪೂರೈಕೆ ಘಟಕದಲ್ಲಿ ಭಾರಿ ಸ್ಫೋಟ ಮತ್ತು ಅಗ್ನಿ ಅವಘಡ ಸಂಭವಿಸಿದೆ” ಎಂದು ಕತಾರ್ ಇಂಧನ ಇಲಾಖೆ ತಿಳಿಸಿದೆ. ಕತಾರ್‌ನ ಆಂತರಿಕ ಸಚಿವಾಲಯವು “ತಾಂತ್ರಿಕ ಸಮಸ್ಯೆಯಿಂದಾಗಿ ಈ ಘಟನೆ ಸಂಭವಿಸಿದೆ” ಎಂದು ಹೇಳಿದೆ.

“ಸ್ಫೋಟದ ವಿಚಾರ ತಿಳಿದ ತಕ್ಷಣ ರಕ್ಷಣಾ ಮತ್ತು ತುರ್ತು ಸೇವೆಗಳ ತಂಡಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಾಚರಣೆಗಳನ್ನು ಪ್ರಾರಂಭಿಸಿವೆ. ಸದ್ಯಕ್ಕೆ ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಯಾವುದೇ ಗಂಡಾಂತರವಾಗಲಿ ಅಥವಾ ಅನಿಲ ಸೋರಿಕೆಯಾಗಲಿ ಆಗಿಲ್ಲ” ಎಂದು ಸಚಿವಾಲಯ ತನ್ನ ಪ್ರಾಥಮಿಕ ಹೇಳಿಕೆಯಲ್ಲಿ ತಿಳಿಸಿತ್ತು. ಆದರೆ, ಕೆಲವೇ ಕ್ಷಣಗಳ ಬಳಿಕ “ಹಲವು ಜನರು ಗಾಯಗೊಂಡಿದ್ದಾರೆ. ಇನ್ನೂ ಕೆಲವರು ಕಾಣೆಯಾದ ಬಗ್ಗೆ ಮಾಹಿತಿ ಇದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ” ಅಂತಲೂ ಸಚಿವಾಲಯ ದೃಢಪಡಿಸಿದೆ.

ರಾಸ್ ಲಫಾನ್ ಕತಾರ್‌ನ ಪ್ರಮುಖ ಇಂಧನ ಕೇಂದ್ರಗಳಲ್ಲಿ ಒಂದಾಗಿದ್ದು, ದೇಶದ ಅನಿಲ ಉತ್ಪಾದನೆ ಮತ್ತು ರಫ್ತುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಸ್ಫೋಟವು ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಇಂಧನದ ಅವ್ಯವಸ್ಥೆಗೆ ಕಾರಣವಾಗಬಹುದು ಎಂದು ಅಂದಾಜು ಮಾಡಲಾಗಿದೆ. ಹಾಗಾಗಿ ದೇಶದ ಇಂಧನ ವಲಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ

Next Post

ಜೂ.25ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್

Related Posts

ಬಂಧನಕ್ಕೊಳಗಾದ ಕೆಲವೇ ಗಂಟೆಯಲ್ಲಿ ಉದಯನಿಧಿ ಸ್ಟಾಲಿನ್ ಬಿಡುಗಡೆ ಮಾಡಿ ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಆದೇಶ
ರಾಷ್ಟ್ರೀಯ ಸುದ್ದಿ

ಬಂಧನಕ್ಕೊಳಗಾದ ಕೆಲವೇ ಗಂಟೆಯಲ್ಲಿ ಉದಯನಿಧಿ ಸ್ಟಾಲಿನ್ ಬಿಡುಗಡೆ ಮಾಡಿ ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಆದೇಶ

August 4, 2026
38
ರೂ.1 ಕೋಟಿ ಸಂಬಳದ AI ಉದ್ಯೋಗ ಗಿಟ್ಟಿಸಿಕೊಂಡ ಯುವಕ: ಕಿವುಡ ಮತ್ತು ಮೂಕ ತಂದೆಯ ಕನಸನ್ನು ನನಸಾಗಿಸಿದ ಮಗ
ರಾಷ್ಟ್ರೀಯ ಸುದ್ದಿ

ರೂ.1 ಕೋಟಿ ಸಂಬಳದ AI ಉದ್ಯೋಗ ಗಿಟ್ಟಿಸಿಕೊಂಡ ಯುವಕ: ಕಿವುಡ ಮತ್ತು ಮೂಕ ತಂದೆಯ ಕನಸನ್ನು ನನಸಾಗಿಸಿದ ಮಗ

July 28, 2026
68
Next Post
ಜೂ.25ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್

ಜೂ.25ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್

Discussion about this post

Recent News

ಕಾರ್ಕಳ ಹೆಬ್ರಿ ಸಮೀಪ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೇ ಸಾವು

ಕಾರ್ಕಳ ಹೆಬ್ರಿ ಸಮೀಪ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೇ ಸಾವು

August 8, 2026
20
ಬಾಡಿಗೆ ಮನೆ ಇದೆಯೇ? ಹೇಳಿ ವೃದ್ಧೆಯ ಚಿನ್ನಾಭರಣ ದರೋಡೆ‌ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬಾಡಿಗೆ ಮನೆ ಇದೆಯೇ? ಹೇಳಿ ವೃದ್ಧೆಯ ಚಿನ್ನಾಭರಣ ದರೋಡೆ‌ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

August 8, 2026
31
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕಾರ್ಕಳ ಹೆಬ್ರಿ ಸಮೀಪ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೇ ಸಾವು

ಕಾರ್ಕಳ ಹೆಬ್ರಿ ಸಮೀಪ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೇ ಸಾವು

August 8, 2026
ಬಾಡಿಗೆ ಮನೆ ಇದೆಯೇ? ಹೇಳಿ ವೃದ್ಧೆಯ ಚಿನ್ನಾಭರಣ ದರೋಡೆ‌ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬಾಡಿಗೆ ಮನೆ ಇದೆಯೇ? ಹೇಳಿ ವೃದ್ಧೆಯ ಚಿನ್ನಾಭರಣ ದರೋಡೆ‌ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

August 8, 2026
ತ್ರಿಕೋನ ಪ್ರೇಮ ಪ್ರಕರಣ: ಆತ್ಮಹತ್ಯೆಗೂ ಮುನ್ನ ಹೊಸ ಲವ್ವರ್‌ಗೆ ವಿಡಿಯೋ ಕಾಲ್ ಮಾಡಿ ಯುವತಿ ಆತ್ಮಹತ್ಯೆ ,ಇಬ್ಬರು ಲವರ್‌ಗಳು ಪರಾರಿ

ತ್ರಿಕೋನ ಪ್ರೇಮ ಪ್ರಕರಣ: ಆತ್ಮಹತ್ಯೆಗೂ ಮುನ್ನ ಹೊಸ ಲವ್ವರ್‌ಗೆ ವಿಡಿಯೋ ಕಾಲ್ ಮಾಡಿ ಯುವತಿ ಆತ್ಮಹತ್ಯೆ ,ಇಬ್ಬರು ಲವರ್‌ಗಳು ಪರಾರಿ

August 7, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d