ತಮಿಳುನಾಡು: ತಂಜಾವೂರಿನ ಪಾನಗಲ್ ಕಟ್ಟಡದ ಬಳಿ ನಡೆದ ಪ್ರತಿಭಟನೆಯಲ್ಲಿ ಕಾವೇರಿ ನದಿ ನೀರು ವಿಚಾರವಾಗಿ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಮಾತನಾಡುವಾಗ ನಟಿ ತ್ರಿಶಾ ಕುರಿತು ಪರೋಕ್ಷ ಹೇಳಿಕೆ ನೀಡುವ ಮೂಲಕ ಮಹಿಳೆಯೊಬ್ಬರ ಘನತೆಗೆ ಭಂಗ ತರುವ ಆರೋಪ ಮಾಡಿದ್ದಾರೆ ಎಂಬ ದೂರು ಹಿನ್ನೆಲೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ತಮಿಳುನಾಡು ವಿಧಾನಸಭೆಯ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ವಿಚಾರಣೆಯ ನಂತರ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್ ಇಂದು ಪೊಲೀಸರಿಗೆ ನಿರ್ದೇಶನ ನೀಡಿತ್ತು. ಬೆಳಿಗ್ಗೆ ಬಂಧನಕ್ಕೊಳಗಾಗಿದ್ದ ಅವರನ್ನು ಹೆಚ್ಚಿನ ವಿಚಾರಣೆಗಾಗಿ ತಂಜಾವೂರಿಗೆ ಕರೆದೊಯ್ಯಲಾಗಿತ್ತು. ಬಂಧಿಸಲ್ಪಟ್ಟ 4 ಗಂಟೆಯ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ.
ನ್ಯಾ. ಜೆಕೆ ಇಲ್ಲಂತಿರೈಯನ್ ಅವರ ಪೀಠದ ಮುಂದೆ, ಉದಯನಿಧಿ ಸ್ಟಾಲಿನ್ ಜಾಮೀನು ಅರ್ಜಿ ವಿಚಾರಣೆಗೆ ಬಂದಿತು. ಈ ವೇಳೆ ತಮಿಳುನಾಡು ಅಡ್ವೋಕೇಟ್ ಜನರಲ್ ವಿಜಯ್ ನಾರಾಯಣ್, ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕರನ್ನು ಬಂಧನಕ್ಕೆ ಒಳಪಡಿಸುವ ಯಾವುದೇ ಉದ್ದೇಶವಿಲ್ಲ. ತಂಜಾವೂರು ಪ್ರಕರಣ ಸಂಬಂಧ ಅವರನ್ನು ಪ್ರಶ್ನಿಸಲು ವಶಕ್ಕೆ ಪಡೆಯಲಾಗಿದೆ. ಈ ವಿಚಾರಣೆ ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದು ಎಂದರು.
ಈ ವೇಳೆ ಸರ್ಕಾರ ಈ ವಿಚಾರಣೆಗೆ ಡಿಎಂಕೆ ನಾಯಕರು ಪೊಲೀಸರ ವಿಚಾರಣೆಯಲ್ಲಿ ಸಂಪೂರ್ಣ ತನಿಖೆಗೆ ಸಹಕಾರ ನೀಡಬೇಕು. ಅವರ ಮೇಲೆ ಪರೋಕ್ಷ ನಿಂದನೆ ಮತ್ತು ಮಹಿಳೆಯೊಬ್ಬಳ ಮರ್ಯಾದೆಗೆ ಭಂಗ ತರುವಂತಹ ಆರೋಪಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಪ್ರಕರಣ ಸಂಬಂಧ ಅಡ್ವೋಕೇಟ್ ಜನರಲ್ ಮನವಿ ಸಲ್ಲಿಸಿದ ಬಳಿಕ ಉದಯನಿಧಿ ಜಾಮೀನು ಅರ್ಜಿಯನ್ನು ಮುಕ್ತಾಯಗೊಳಿಸಲಾಯಿತು. ತಂಜಾವೂರಿನಲ್ಲಿ ಸೋಮವಾರ ನಡೆದ ಕಾವೇರಿ ವಿಷಯದ ಕುರಿತಾದ ಪ್ರತಿಭಟನಾ ಸಭೆಯೊಂದರಲ್ಲಿ ಉದಯನಿಧಿ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಪೊಲೀಸರು ಇಂದು ಬೆಳಗ್ಗೆ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ನೀಲಂಕರೈ ನಿವಾಸಕ್ಕೆ ಆಗಮಿಸಿ ಬಂಧಿಸಿದರು. ಈ ಬೆನ್ನಲ್ಲೇ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.
Discover more from Coastal Times Kannada
Subscribe to get the latest posts sent to your email.








Discussion about this post