ಉಳ್ಳಾಲ: ಪಡಿಬಿಡಾರ ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರ ಶ್ರೀ ಚೀರುಂಭ ಭಗವತಿ ತೀಯಾ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ “ತೀಯರೆ ಚೇರ್‌ಲಿ ಒರುನಾಳ್”-2026 ಕೆಸರುಗದ್ದೆ ಕ್ರೀಡಾಕೂಟ ಆ. 9ರಂದು ಮಾಡೂರು ಶ್ರೀ ಪಾಡಂಗಾರ ಭಗವತಿ ಕ್ಷೇತ್ರದ ಬಳಿಯ ನೀಲಿಪಾಲು ಗದ್ದೆಯಲ್ಲಿ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ ಹೇಳಿದರು
ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಸಭಾಭವನದಲ್ಲಿ ಸೋಮವಾರ ಶ್ರೀಕ್ಷೇತ್ರದ ಆಡಳಿತ ಸಮಿತಿ, ಸೇವಾ ಸಮಿತಿ, ಆಚಾರಪಟ್ಟವರು, ಗುರಿಕಾರರು, ಮಹಿಳಾ ಸಮಿತಿ, ತೀಯಾ ಸಮಾಜ ಉಳ್ಳಾಲ ವಲಯ ಪ್ರಮುಖರ ಉಪಸ್ಥಿತಿಯಲ್ಲಿ ನಡೆದ ಸಮೋಲೋಚನಾ ಸಭೆಯಲ್ಲಿ ಮಾತನಾಡಿದರು

ಕ್ಷೇತ್ರದ ಅಧ್ಯಕ್ಷ ಚಿದಾನಂದ ಗುರಿಕಾರ ನಂದ್ಯ ಮಾತನಾಡಿ ಕ್ರೀಡಾಕೂಟದ ಪ್ರಯುಕ್ತ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಬಾಲ್ ಪಾಸಿಂಗ್, ಒಂದು ಮತ್ತು ಎರಡನೆಯ ತರಗತಿಯ ಮಕ್ಕಳಿಗೆ ಬಕೆಟ್‌ಗೆ ಬಾಲ್ ಹಾಕುವುದು, 50 ಮೀಟರ್ ಓಟ, ಬಾಲ್ ಪಾಸಿಂಗ್, ಬಕೆಟ್‌ಗೆ ಬಾಲ್ ಹಾಕುವುದು, ಮೂರನೆಯ ಮತ್ತು ನಾಲಕು ತರಗತಿಯ ಮಕ್ಕಳಿಗೆ 75 ಮೀ. ಓಟ, ಬಲೂನ್ ರೇಸ್, ಬನಾನಾ ರೇಸ್, ಐದು ಮತ್ತು ಆರನೆಯ ತರಗತಿಯ ಮಕ್ಕಳಿಗೆ 75 ಮೀಟರ್ ಓಟ, ಬಲೂನ್ ರೇಸ್, ಬನಾನಾ ರೇಸ್, ಏಳು ಮತ್ತು ಎಂಟನೆಯ ತರಗತಿಯ ಮಕ್ಕಳಿಗೆ 100ಮೀ. ಓಟ, ಹಿಮ್ಮುಖ ಓಟ, ಅಡಿಕೆ ಹಾಳೆಯೊಂದಿಗೆ ಓಟ, ಒಂಬತ್ತು ಮತ್ತು 10ನೆಯ ತರಗತಿ ಮಕ್ಕಳಿಗೆ 100ಮೀ. ಓಟ, ಉಪ್ಪು ಮೂಟೆ ಓಟ ಆಯೋಜಿಸಲಾಗಿದ್ದು ಈ ಎಲ್ಲ ಆಟದಲ್ಲಿ ಬಾಲಕ ಬಾಲಕಿಯರಿಗೆ ಅವಕಾಶ ನೀಡಲಾಗಿದೆ ಎಂದರು.
ಪದವಿಪೂರ್ವ ಕಾಲೇಜು ಹಾಗೂ ಪದವಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 100 ಮೀ. ಓಟ, ತೆಂಗಿನಕಾಯಿ ಓಟ, ಮತ್ತಿತರ ಸ್ಪರ್ಧೆಗಳು ನಡೆಯಲಿವೆ. 40ವರ್ಷ ಮೇಲ್ಪಟ್ಟ ಪುರುಷರು ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದರು.
ಸಮಾಲೋಚನಾ ಸಭೆಯಲ್ಲಿ ಕೋಶಾಧಿಕಾರಿ ಜಗದೀಶ್, ತೀಯಾ ಸಮಾಜ ಉಳ್ಳಾಲ ವಲಯ ಅಧ್ಯಕ್ಷ ಜಯಂತ್ ಕೊಂಡಾಣ, ಕ್ಷೇತ್ರ ಸಮಿತಿ ಉಪಾಧ್ಯಕ್ಷ ಎಂ. ದಿನೇಶ್ ಕುಂಪಲ, ಆಚಾರಪಟ್ಟವರು, ಗುರಿಕಾರರು, ತೀಯಾ ಸಮಾಜ, ಮಹಿಳಾ ಸಮಿತಿ ಸೇರಿದಂತೆ ಪದಾಧಿಕಾರಿಗಳು ಪ್ರತಿನಿಧಿಗಳು ಸಮಾಜ ಬಾಂಧವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post