• About us
  • Contact us
  • Disclaimer
Tuesday, July 28, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ರೂ.1 ಕೋಟಿ ಸಂಬಳದ AI ಉದ್ಯೋಗ ಗಿಟ್ಟಿಸಿಕೊಂಡ ಯುವಕ: ಕಿವುಡ ಮತ್ತು ಮೂಕ ತಂದೆಯ ಕನಸನ್ನು ನನಸಾಗಿಸಿದ ಮಗ

Coastal Times by Coastal Times
July 28, 2026
in ರಾಷ್ಟ್ರೀಯ ಸುದ್ದಿ
ರೂ.1 ಕೋಟಿ ಸಂಬಳದ AI ಉದ್ಯೋಗ ಗಿಟ್ಟಿಸಿಕೊಂಡ ಯುವಕ: ಕಿವುಡ ಮತ್ತು ಮೂಕ ತಂದೆಯ ಕನಸನ್ನು ನನಸಾಗಿಸಿದ ಮಗ
33
VIEWS
WhatsappTelegramShare on FacebookShare on Twitter

ಆಂಧ್ರಪ್ರದೇಶ : ವಿಶೇಷಚೇತನ ಸಿಂಪಿಗ (ಟೇಲರ್) ರೊಬ್ಬರ ಪುತ್ರ ರೂ.1.06 ಕೋಟಿ ಸಂಬಳದ AI ಉದ್ಯೋಗ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಕೋತಪಲ್ಲಿ ತಾಲೂಕಿನ ಕುತ್ತುಕುಡಿಮಿಲ್ಲಿ ಮೂಲದ ಮಾಲ್ತಿ ಅಖಿಲೇಶ್ ಕೋಟಿ ರೂಪಾಯಿ ಸಂಬಳದ ಉದ್ಯೋಗ ಗಿಟ್ಟಿಸಿಕೊಂಡಿರುವ ಯುವ ಇಂಜಿನಿಯರ್.

ಮೇ ತಿಂಗಳಲ್ಲಿ ಸುರಂಪಲೆಮ್‌ನ ಆದಿತ್ಯ ವಿಶ್ವವಿದ್ಯಾಲಯದಲ್ಲಿ ನಡೆದ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳಲ್ಲಿ AI ಎಂಜಿನಿಯರ್ ಆಗಿ ಅಖಿಲೇಶ್ ಉದ್ಯೋಗ ಪಡೆದಿದ್ದಾರೆ. ಕೆನಡಾ ಕಂಪನಿಯಾದ ಫ್ಯಾಬ್ರಾಂಟಿಕ್ AI ಜೂನ್ 20 ರಂದು ಯುವಕನಿಗೆ ರೂ.1.06 ಕೋಟಿ ವಾರ್ಷಿಕ ಪ್ಯಾಕೇಜ್​ನ​ ಆಫರ್ ಲೆಟರ್​ ಕಳುಹಿಸಿದೆ. ಅಖಿಲೇಶ್ ಈಗಾಗಲೇ ಮನೆಯಿಂದಲೇ ಕೆಲಸ ಆರಂಭಿಸಿದ್ದು, ಮೊದಲು ಮೂರರಿಂದ ಆರು ತಿಂಗಳವರೆಗೆ ರೂ.30,000 ಸ್ಟೈಫಂಡ್ ಸಿಗಲಿದೆ. ಬಳಿಕ ಪೂರ್ಣ ಪ್ಯಾಕೇಜ್​ ಪಡೆಯಲಿದ್ದಾರೆ.

ಟೈಲರಿಂಗ್ ವೃತ್ತಿಯಲ್ಲೇ ಮಕ್ಕಳ ಭವಿಷ್ಯ ಕಟ್ಟಿದ ಪೋಷಕರು: ಕಾಕಿನಾಡ ಜಿಲ್ಲೆಯ ಕುತುಕುಡುಮಿಲ್ಲಿ ಎಂಬ ಸಣ್ಣ ಗ್ರಾಮದ ಗಂಗಾಧರ ರಾವ್ ಮತ್ತು ಮಾಲತಿ ದಂಪತಿ ಅತ್ಯಂತ ಸರಳ ಜೀವನ ನಡೆಸುತ್ತಿದ್ದರು. ಕಿವುಡ ಮತ್ತು ಮೂಕರಾಗಿರುವ ಗಂಗಾಧರ ರಾವ್ ಟೈಲರಿಂಗ್ ವೃತ್ತಿಯ ಮೂಲಕ ಕುಟುಂಬವನ್ನು ಪೋಷಿಸುತ್ತಿದ್ದರು. ಅವರ ಪತ್ನಿ ಮಾಲತಿ ಕೂಡ ಬಟ್ಟೆಗಳಿಗೆ ಕರಕುಶಲ ಕೆಲಸ ಮಾಡಿ ಕುಟುಂಬದ ಆದಾಯಕ್ಕೆ ಕೈಜೋಡಿಸುತ್ತಿದ್ದರು. ಆರ್ಥಿಕ ಸವಾಲುಗಳ ನಡುವೆಯೂ ತಮ್ಮ ಇಬ್ಬರು ಮಕ್ಕಳ ಶಿಕ್ಷಣಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡ ಈ ದಂಪತಿಯ ಪರಿಶ್ರಮಕ್ಕೆ ಇಂದು ಅದ್ಭುತ ಪ್ರತಿಫಲ ದೊರೆತಿದೆ.

ಇದಕ್ಕೂ ಮೊದಲು ಅಖಿಲೇಶ್ ಎರಡ್ಮೂರು ಸಂದರ್ಶನಗಳಿಗೆ ಹಾಜರಾಗಿದ್ದರು. ಆದರೆ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಆದರೂ ಛಲ ಬಿಡದೆ ಸಿದ್ಧತೆ ನಡೆಸಿದ್ದರು. ಮೇ ತಿಂಗಳಲ್ಲಿ ನಡೆದ ಸಂದರ್ಶನದಲ್ಲಿ ಭಾಗವಹಿಸಿದ 243 ಅಭ್ಯರ್ಥಿಗಳಲ್ಲಿ, ಅಖಿಲೇಶ್ ಮತ್ತು ಇನ್ನೊಬ್ಬ ಯುವಕ ಯಶಸ್ವಿಯಾಗಿದ್ದಾರೆ. ಕೋಟಿ ರೂಪಾಯಿ ಸಂಬಳದ ಈ ಪ್ರತಿಷ್ಠಿತ ಉದ್ಯೋಗವನ್ನು ಪಡೆದ ಅಖಿಲೇಶ್ ಸಾಧನೆಯಿಂದ ಪೋಷಕರ ಆನಂದಕ್ಕೆ ಪಾರವೇ ಇಲ್ಲ. ನುರಿತ AI ಎಂಜಿನಿಯರ್ ಆಗಿ ಬೆಳೆಯುವುದು ಮತ್ತು AI ತಜ್ಞ ಆಗುವುದು ನನ್ನ ಮಹತ್ವಾಕಾಂಕ್ಷೆಯಾಗಿದೆ ಎಂದು ಯುವ ಎಂಜಿನಿಯರ್ ಅಖಿಲೇಶ್ ತಿಳಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಚೇತನ್ 11 ದಿನಗಳ ಚಿಕಿತ್ಸೆಯ ಬಳಿಕ ಪೊಲೀಸ್ ವಶಕ್ಕೆ

Related Posts

ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ; ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
ರಾಷ್ಟ್ರೀಯ ಸುದ್ದಿ

ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ; ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

July 25, 2026
33
ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ
ರಾಷ್ಟ್ರೀಯ ಸುದ್ದಿ

ಪ್ರಧಾನಿ ಮೋದಿ ಭರವಸೆ ಬೆನ್ನಲ್ಲೇ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

July 24, 2026
47

Discussion about this post

Recent News

ರೂ.1 ಕೋಟಿ ಸಂಬಳದ AI ಉದ್ಯೋಗ ಗಿಟ್ಟಿಸಿಕೊಂಡ ಯುವಕ: ಕಿವುಡ ಮತ್ತು ಮೂಕ ತಂದೆಯ ಕನಸನ್ನು ನನಸಾಗಿಸಿದ ಮಗ

ರೂ.1 ಕೋಟಿ ಸಂಬಳದ AI ಉದ್ಯೋಗ ಗಿಟ್ಟಿಸಿಕೊಂಡ ಯುವಕ: ಕಿವುಡ ಮತ್ತು ಮೂಕ ತಂದೆಯ ಕನಸನ್ನು ನನಸಾಗಿಸಿದ ಮಗ

July 28, 2026
33
ಬಂಟ್ವಾಳ ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಪೊಲೀಸ್ ಬಲೆಗೆ; ಸಿಕ್ಕಿಬೀಳುವ ಭೀತಿಯಲ್ಲಿ ಇಲಿ ಪಾಷಾಣ ಸೇವಿಸಿ ಆಸ್ಪತ್ರೆ ಪಾಲು!

ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಚೇತನ್ 11 ದಿನಗಳ ಚಿಕಿತ್ಸೆಯ ಬಳಿಕ ಪೊಲೀಸ್ ವಶಕ್ಕೆ

July 28, 2026
0
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ರೂ.1 ಕೋಟಿ ಸಂಬಳದ AI ಉದ್ಯೋಗ ಗಿಟ್ಟಿಸಿಕೊಂಡ ಯುವಕ: ಕಿವುಡ ಮತ್ತು ಮೂಕ ತಂದೆಯ ಕನಸನ್ನು ನನಸಾಗಿಸಿದ ಮಗ

ರೂ.1 ಕೋಟಿ ಸಂಬಳದ AI ಉದ್ಯೋಗ ಗಿಟ್ಟಿಸಿಕೊಂಡ ಯುವಕ: ಕಿವುಡ ಮತ್ತು ಮೂಕ ತಂದೆಯ ಕನಸನ್ನು ನನಸಾಗಿಸಿದ ಮಗ

July 28, 2026
ಬಂಟ್ವಾಳ ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಪೊಲೀಸ್ ಬಲೆಗೆ; ಸಿಕ್ಕಿಬೀಳುವ ಭೀತಿಯಲ್ಲಿ ಇಲಿ ಪಾಷಾಣ ಸೇವಿಸಿ ಆಸ್ಪತ್ರೆ ಪಾಲು!

ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಚೇತನ್ 11 ದಿನಗಳ ಚಿಕಿತ್ಸೆಯ ಬಳಿಕ ಪೊಲೀಸ್ ವಶಕ್ಕೆ

July 28, 2026
ಕಾಪು: ಟೈಮಿಂಗ್‌ ವಿಚಾರಕ್ಕೆ ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟ, ಬಸ್‌ಗಳ ನಡುವೆ ಡಿಕ್ಕಿ, ಗುದ್ದಾಟ, ನಾಲ್ವರ ಬಂಧನ

ಕಾಪು: ಟೈಮಿಂಗ್‌ ವಿಚಾರಕ್ಕೆ ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟ, ಬಸ್‌ಗಳ ನಡುವೆ ಡಿಕ್ಕಿ, ಗುದ್ದಾಟ, ನಾಲ್ವರ ಬಂಧನ

July 28, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d