ಕಾಸರಗೋಡು: ಕಾಞಂಗಾಡ್‌ನ ಹೊಸದುರ್ಗದ ಭಗವಾನ್ ಶ್ರೀ ನಿತ್ಯಾನಂದ ಆಶ್ರಮದಲ್ಲಿ ಸೆ.19ರಂದು ಬೆಳಿಗ್ಗೆ 10:45 ಕ್ಕೆ ಪೂಜ್ಯ ಶ್ರೀ ಅವಧೂತಾನಂದ ಸ್ವಾಮೀಜಿ ಅವರ ಅನುಭವ ಕಥನ ಕುರಿತ ಪುಸ್ತಕವೊಂದರ ಬಿಡುಗಡೆ ಸಮಾರಂಭ ನಡೆಯಲಿದೆ. ಮುಂಬೈಯ ಸ್ವಾಮಿ ಅವಧೂತಾನಂದ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಪೂಜ್ಯ ಶ್ರೀ ಅವಧೂತಾನಂದ ಸ್ವಾಮೀಜಿ ಅವರ ಅನುಭವಗಳು, ಜೀವನ, ಕಾರ್ಯಗಳನ್ನೊಳಗೊಂಡ ಈ ಕೃತಿಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಬಿಡುಗಡೆಗೊಳ್ಳಲಿದೆ.

ಕಾರ್ಯಕ್ರಮವು ಬೆಳಿಗ್ಗೆ 10:45 ರಿಂದ ಮಧ್ಯಾಹ್ನ 01ರವರೆಗೆ ನಡೆಯಲಿದೆ. ದೀಪ ಪ್ರಜ್ವಲನ, ವೇದಘೋಷ, ಪುಸ್ತಕ ಬಿಡುಗಡೆ, ಸ್ವಾಮಿ ಅವಧೂತಾನಂದರ ಜೀವನ ಮತ್ತು ಕಾರ್ಯಗಳ ಕುರಿತ ಸಾಕ್ಷ್ಯಚಿತ್ರವೊಂದರ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಗೌರವ ಅತಿಥಿಗಳಾಗಿ ಶ್ರೀ ಶಿವ ಲಿಂಗಪ್ಪ ಸ್ವಾಮೀಜಿ ಪಾಲ್ಗೊಳ್ಳುವರು ಎಂದು ಮುಂಬೈಯ ಸ್ವಾಮಿ ಅವಧೂತಾನಂದ ಟ್ರಸ್ಟ್‌ನ ಪ್ರಕಟನೆ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.








Discussion about this post