ಬೆಂಗಳೂರು: ರಾಷ್ಟ್ರೀಯ ಟೆಕ್ ಶೃಂಗಸಭೆ, ಟೆಕ್‌ಎಕ್ಸ್: 2023, ಮಾರ್ಚ್ 30ರಂದು ಬೆಂಗಳೂರಿನ ಸೈಂಟ್ ಜೋಸೆಫ್ಟ್ ವಿಶ್ವವಿದ್ಯಾಲಯದಲ್ಲಿ ರ. ಡೆನ್ಸಿಲ್ ಲೋಬೊ, ಎಸ್.ಜೆ. ಇವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಸೈಂಟ್ ಜೋಸೆಫ್ಟ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಟೆಕ್ನಾಲಜಿಯಿಂದ ಮೊದಲ ಬಾರಿಗೆ ಡಿಕೋಡಿಂಗ್ ‘ದಿ ಫ್ಯಾಚರ್ ಆಫ್ , ಐಟಿ ಮತ್ತು ಇನ್ನೋವೇಶನ್’ ಅನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಪ್ರಮುಖ ತಂತ್ರಜ್ಞಾನ ತಜ್ಞರು, ಶಿಕ್ಷಣ ತಜ್ಞರು, ಉದ್ಯಮ ನಾಯಕರು ಮತ್ತು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಇತ್ತೀಚಿನ ಪ್ರವೃತ್ತಿಗಳು, ಪ್ರಗತಿಗಳು ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರಗಳ ಬಗ್ಗೆ ಚರ್ಚಿಸಿತು.

2023ರ ರಾಷ್ಟ್ರೀಯ ಟೆಕ್ ಶೃಂಗಸಭೆ, ಟೆಕ್‌ಎಕ್ಸ್ ವಿವಿಧ ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿದ ತಜ್ಞರಿಂದ ವಿಷಯಮಂಡನೆಯನ್ನು ಏರ್ಪಡಿಸಲಾಗಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯುಳ್ಳವರಿಗೆ ಈ ಉದ್ಯಮದಲ್ಲಿನ ತಜ್ಞರಿಂದ ಇತ್ತೀಚಿನ ಪ್ರವೃತ್ತಿಗಳು, ಆವಿಷ್ಕಾರಗಳು ಮತ್ತು ಉತ್ತಮ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಲು ಇದು ಅತ್ಯುತ್ತಮ ಅವಕಾಶವಾಗಿದೆ. ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ವಿವಿಧ ಕಾಲೇಜುಗಳ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಎಸ್‌ಜೆಐಐಟಿಯ ನಿರ್ದೇಶಕರಾದ ರ. ಡೆನ್ಸಿಲ್ ಲೋಬೊ ಎಸ್ ಪ್ರಾಸ್ತಾವಿಕದಲ್ಲಿ ಮಾತನಾಡಿ ಯುವಕರಲ್ಲಿ ಸೃಜನಶೀಲತೆಯನ್ನು ಉತ್ತೇಜಿಸುವುದರಿಂದ ಆವಿಷ್ಕಾರಕ್ಕೆ ಕಾರಣವಾಗುತ್ತದೆ. ಪಪಂಚವು ಇನ್ನೂ ಮುಂದುವರಿಯುದರಿಂದ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ಇದನ್ನು ಎದುರಿಸಲು ತಮ್ಮನ್ನು ತಾವು ಚೆನ್ನಾಗಿ ಸಿದ್ಧಪಡಿಸಿಕೊಳ್ಳಬೇಕು ಎಂದು ಹೇಳಿದರು. ಗೇಮಿಂಗ್ ಸಂಸ್ಥೆಯಾದ ದ್ರುವ ಇಂಟರಾಕ್ಟಿವ್‌ನ ಸಂಸ್ಥಾಪಕರಾದ ಶ್ರೀ ರಾಜೇಶ್ ರಾವ್ ಅವರು ಕಂಪ್ಯೂಟರ್ ಗೇಮ್‌ಗಳ ಪಾತ್ರ ಮತ್ತು ನುರಿತ ಗ್ರಾಫಿಕ್ಸ್ ಡಿಸೈನರ್‌ಗಳಿಗೆ ಇರುವ ಅಪಾರ ಪ್ರಮಾಣದ ಉದ್ಯೋಗಗಳ ಸಾಧ್ಯತೆಗಳ ಬಗ್ಗೆ ಮಾತನಾಡಿದರು. ಶ್ರೀ ನಿಖಿಲ್ ಭಟ್, ಉಪಾಧ್ಯಕ್ಷರು, ಸಂಶೋಧನೆ ಮತ್ತು ಅಭಿವೃದ್ಧಿ, ನೋಕಿಯಾ ಇವರು 5ಜಿ ಸ್ಪೆಕ್ಟಮ್ ಮತ್ತು ಇದರ ಮುಂದುವರಿಕೆಯ ಬಗ್ಗೆ ಮಾತನಾಡಿದರು. ಶ್ರೀ ಬ್ರಾಯನ್ ಪಾಯ್ಸ್, ಸಹ-ಸಂಸ್ಥಾಪಕರು, ಡಿಜಿಜುರಾ ಟೆಕ್ನಾಲಜೀಸ್ ಮತ್ತು ಹಿರಿಯ ಎಸ್‌ಪಿ ಸಲಹೆಗಾರರು, ವಿಶೇಷವಾಗಿ ವಿಶ್ವಾದ್ಯಂತ ಎಸ್‌ಪಿ ಪ್ರಾಮುಖ್ಯತೆಯನ್ನು ಪ್ರಸ್ತಾಪಿಸಿದರು ಮತ್ತು ಈ ಸಾಫ್ಟ್‌ವೇರ್ ಬಳಸುವಲ್ಲಿ ಪ್ರವೀಣರಾದವರಿಗೆ ಹಲವಾರು ಅವಕಾಶಗಳಿವೆ ಎಂದು ನುಡಿದರು.
Discover more from Coastal Times Kannada
Subscribe to get the latest posts sent to your email.








Discussion about this post