ಬೆಂಗಳೂರು: ಕಳೆದ 16 ದಿನಗಳಿಂದ ರಾಜ್ಯ ಆರೋಗ್ಯ ಇಲಾಖೆಯಲ್ಲಿ ‘ಎನ್ ಹೆಚ್ ಎಂ’ ( Karnataka Health Department ) ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕೆಲಸ ಮಾಡುತ್ತಿರುವಂತ ಒಳಗುತ್ತಿಗೆ ನೌಕರರು ಖಾಯಂಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹ ಅವರನ್ನು ವಿವಿಧ ರಾಜ್ಯಗಳಲ್ಲಿ ಖಾಯಂ ಮಾಡಿದಂತೆ ಕರ್ನಾಟಕದಲ್ಲೂ ಖಾಯಂ ಮಾಡಬೇಕು ಎಂಬುದಾಗಿ ನಟ ಅನಿರುದ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತಂತೆ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ‘ಎನ್ ಹೆಚ್ ಎಂ ‘ ಒಳಗುತ್ತಿಗೆ ನೌಕರರನ್ನು ( NHM Worker ) ಖಾಯಂ ಮಾಡಲು ಕಾನೂನಿನಲ್ಲಿ ಅವಕಾಶವಿದೆ ಎಂದರೂ, ಮಾಡುವ ಇಚ್ಛಾಶಕ್ತಿ ಕೊರತೆಯಿಂದ ಸರ್ಕಾರ ಅವಕ ಕಡೆ ಗಮನ ಹರಿಸುತ್ತಿಲ್ಲ ಎಂಬುದಾಗಿ ಕಿಡಿಕಾರಿದ್ದಾರೆ.
ಇನ್ನೂ ಈಗಾಗಲೇ 5 ರಾಜ್ಯಗಳಲ್ಲಿ ಎನ್ ಹೆಚ್‌ಎಂ ನೌಕರರನ್ನು ಖಾಯಂ ಮಾಡಿರುವ ಸೂಕ್ತ ದಾಖಲೆಗಳನ್ನು ಕರ್ನಾಟಕ ಸರ್ಕಾರ ಪರಿಶೀಲಿಸಬಹುದು. ಮಣಿಪುರದ ಮಾದರಿಯಲ್ಲಿ ಅವರನ್ನು ಖಾಯಂ ಮಾಡಿ ಎಂಬುದು ಎನ್ ಹೆಚ್ಎಂ ಅವರ ಬೇಡಿಕೆ.ಈ ಬಗ್ಗೆ ರಾಜ್ಯ ಸರ್ಕಾರ ಗಮನಿಸಿ ಕ್ರಮ ವಹಿಸುವಂತೆ ಕಳ ಕಳಿಯ ಮನವಿ ಮಾಡಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post