ಮುಂಬಯಿ: ಮಹಾರಾಷ್ಟ್ರ ರಾಜಧಾನಿಯಲ್ಲಿ ಬೈಕ್‌ನಲ್ಲಿ ಒಬ್ಬ ಯುವತಿಯನ್ನು ಹಿಂಬದಿ ಸೀಟಿನಲ್ಲಿ ಹಾಗೂ ಮತ್ತೊಬ್ಬಳನ್ನು ಮುಂದಿನ ಟ್ಯಾಂಕ್ ಮೇಲೆ ಕೂರಿಸಿಕೊಂಡು ಯುವಕನೊಬ್ಬ ಅಪಾಯಕಾರಿ ವ್ಹೀಲಿಂಗ್ (Bike Wheeling) ಮಾಡಿರುವ ಘಟನೆಯ ವಿಡಿಯೋ ಹಾಗೂ ಫೋಟೊಗಳು ವೈರಲ್ ಆಗಿವೆ. ಅಪಾಯಕಾರಿಯಾಗಿ ಸ್ಟಂಟ್ ಮಾಡುತ್ತಾ ಸಾಗುತ್ತಿರುವ 13 ಸೆಕೆಂಡುಗಳ ವಿಡಿಯೋ ವೀಕ್ಷಿಸಿದ ಸಾಮಾಜಿಕ ಜಾಲತಾಣದ ಅನೇಕ ಬಳಕೆದಾರರು ಕೂಡಲೇ ಮುಂಬಯಿ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಇಂಥ ವಿಡಿಯೊಗಳನ್ನು ಹಂಚಿಕೆ ಮಾಡುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಡಿಯೋ ಮೂಲದ ಬೆನ್ನತ್ತಿದ ಮುಂಬಯಿ ಪೊಲೀಸರು ಬೈಕ್ ಸವಾರನನ್ನು ಪತ್ತೆ ಮಾಡಿ , ಆತನ ಹಾಗೂ ಇಬ್ಬರು ಯುವತಿಯರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
A case has been registered with BKC Police Station. Investigation into identifying the accused is underway.
If anyone has any information about persons in this video, you can DM us directly. https://t.co/CWGoqzSuaP
— Mumbai Traffic Police (@MTPHereToHelp) March 31, 2023
ಟ್ಯಾಂಕ್ ಮೇಲೆ ಕುಳಿತಿದ್ದ ಯುವತಿ, ಬೈಕ್ ಸವಾರನನ್ನು ಮುಂದಿನಿಂದ ಅಪ್ಪಿಕೊಂಡಿದ್ದರೆ, ಹಿಂದಿನಿಂದ ಮತ್ತೊಬ್ಬ ಯುವತಿ ಅಪ್ಪಿಕೊಂಡು ಕುಳಿತಿದ್ದಳು. ಬೈಕ್ ಸವಾರ ಏಕಾಏಕಿ ಮುಂದಿನ ಚಕ್ರ ಎತ್ತಿ ವ್ಹೀಲಿಂಗ್ ಮಾಡುತ್ತಾ ಹಲವು ಮೀಟರ್‌ಗಳಷ್ಟು ದೂರ ಸಾಗಿದ್ದಾನೆ. ಆ ಇಬ್ಬರೂ ಯುವತಿಯರು ಖುಷಿಯಿಂದ ಕೂಗುತ್ತಾ, ನಕ್ಕಿದ್ದಾರೆ. ಟ್ಯಾಂಕ್ ಮೇಲೆ ಕುಳಿತಿದ್ದ ಯುವತಿ ರಸ್ತೆಯಲ್ಲಿ ಹಿಂದೆ ಬರುತ್ತಿದ್ದ ವಾಹನಗಳ ಕಡೆ ಕೈಬೀಸಿದ್ದಾಳೆ. 13 ಸೆಕೆಂಡುಗಳ ಈ ವಿಡಿಯೋವನ್ನು ‘ಪಾತ್‌ಹೋಲ್ ವಾರಿಯರ್ಸ್ ಫೌಂಡೇಷನ್ #ರೋಡ್‌ಸೇಫ್ಟಿ ಎಂಬ ಟ್ವಿಟ್ಟರ್ ಖಾತೆ ಪೋಸ್ಟ್ ಮಾಡಿದ್ದು, ಅದನ್ನು ಸಾವಿರಾರು ಮಂದಿ ರೀಟ್ವೀಟ್ ಮಾಡಿದ್ದಾರೆ
ವಾಹನ ಸವಾರಿಯ ಕಾನೂನು ಸುರಕ್ಷತಾ ನಿಯಮಗಳನ್ನು ಮೀರಿ ಮೂವರು ಬೈಕ್ ಸ್ಟಂಟ್‌ನಲ್ಲಿ ಮಾಡಿದ್ದಾರೆ. ಅಲ್ಲದೆ ಹೆಲ್ಮೆಟ್ ಕೂಡ ಧರಿಸಿಲ್ಲ. ಅಪಾಯಕಾರಿಯಾಗಿ ವ್ಹೀಲಿಂಗ್ ಸ್ಟಂಟ್ಸ್ ಮಾಡುವಾಗ ಸ್ವಲ್ಪ ಎಡವಿದರೂ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇಂಥ ಸಾಹಸಕ್ಕೆ ಯಾರೂ ಮುಂದಾಗಬಾರದು ಎಂದು ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.
ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸರು ಐಪಿಸಿ ಸೆಕ್ಷನ್‌ಗಳಾದ 279 (ಅಜಾಗರೂಕತೆಯ ಚಾಲನೆ), 336 (ಜೀವಗಳಿಗೆ ಅಪಾಯ ಉಂಟುಮಾಡುವುದು) ಹಾಗೂ ಮೋಟಾರು ವಾಹನ ಕಾಯ್ದೆ ಅಡಿ ಮೂವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post