• About us
  • Contact us
  • Disclaimer
Friday, November 6, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸಲಿಂಗಕಾಮಿಯ ಹತ್ಯೆ : ಹಣ ಕೊಡದ ಕಾರಣಕ್ಕೆ ಕೊಲೆ, ಆರೋಪಿಗೆ ನ್ಯಾಯಾಲಯದಿಂದ ಜಾಮೀನು

Coastal Times by Coastal Times
April 2, 2023
in ಕ್ರೈಮ್ ನ್ಯೂಸ್
ಸಲಿಂಗಕಾಮಿಯ ಹತ್ಯೆ : ಹಣ ಕೊಡದ ಕಾರಣಕ್ಕೆ ಕೊಲೆ, ಆರೋಪಿಗೆ ನ್ಯಾಯಾಲಯದಿಂದ ಜಾಮೀನು
133
VIEWS
WhatsappTelegramShare on FacebookShare on Twitter

ಮಂಗಳೂರು: ಸಲಿಂಗ ಕಾಮ ನಡೆಸಿದ ಹಿನ್ನೆಲೆಯಲ್ಲಿ ಜಯಾನಂದ ಆಚಾರ್ಯ ಎಂಬ ವ್ಯಕ್ತಿಯ ಹತ್ಯೆ ಮಾಡಿದ್ದ ಆರೋಪಿ ರಾಜೇಶ್ ಪೂಜಾರಿ ಆಲಿಯಾಸ್ ರಾಜಾ ಎಂಬಾತನಿಗೆ ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿ ಆದೇಶ ಹೊರಡಿಸಿದೆ. ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಎಂ. ಜೋಷಿ ಈ ಆದೇಶ ಹೊರಡಿಸಿದ್ದಾರೆ. ಆರೋಪಿಯ ಪರವಾಗಿ ಮಂಗಳೂರಿನ ನ್ಯಾಯವಾದಿ ಹರ್ಷಕುಮಾರ್ ಅವರು ವಾದಿಸಿದ್ದರು.

ಪ್ರಕರಣದ ವಿವರ: 2022ರ ಅಕ್ಟೋಬರ್ 7ರಂದು ಜಯಾನಂದ ಆಚಾರ್ಯ ಅವರು ಆರೋಪಿಯನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡಿದ್ದರು. ಆದರೆ, ತಾವು ನೀಡಿದ ಭರವಸೆಯಂತೆ ಅನೈಸರ್ಗಿಕ ಲೈಂಗಿಕ ಕ್ರಿಯೆಯ ನಂತರ ಆರೋಪಿಗೆ ಹಣ ನೀಡಿರಲಿಲ್ಲ. ಇದರಿಂದ ಕೋಪೋದ್ರಿಕ್ತನಾದ ಆರೋಪಿ ರಾಜೇಶ್ ಪೂಜಾರಿ ಆಲಿಯಾಸ್ ರಾಜಾ ಪ್ಲಾಸ್ಟಿಕ್ ದಾರದಿಂದ ಕುತ್ತಿಗೆಗೆ ಬಿಗಿದು ಉಸಿರುಕಟ್ಟಿಸಿ ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು.

ಜಯಾನಂದ ಆಚಾರ್ಯ ಅವರನ್ನು ಹತ್ಯೆ ಮಾಡಿದ ಬಳಿಕ ಮೃತ ದೇಹದ ಮೇಲೆ ಲುಂಗಿ ಹೊದಿಸಿ ಆರೋಪಿ ಪರಾರಿಯಾಗಿರುವುದು ತನಿಖೆ ಮತ್ತು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ ಎಂದು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿ ವಿರುದ್ಧದ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿದ್ದು, ಸಿಸಿಟಿವಿ ದೃಶ್ಯಾವಳಿ ಮತ್ತು ಆರೋಪಿಯ ತಪ್ಪೊಪ್ಪಿಗೆ ಹೇಳಿಕೆಯೂ ಇದಕ್ಕೆ ಪೂರಕವಾಗಿದೆ. ಮರಣದಂಡನೆ ಶಿಕ್ಷೆ ವಿಧಿಸುವ ಪ್ರಕರಣ ಇದಾಗಿದ್ದು, ಆರೋಪಿಗೆ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಷನ್ ಪರ ಸರ್ಕಾರಿ ವಕೀಲರು ವಾದ ಮಂಡಿಸಿದ್ದರು. ಆರೋಪಿಯು ಅಪರಾಧಿಕ ಹಿನ್ನೆಲೆ ಹೊಂದಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಇಂಥದ್ದೇ ಅಪರಾಧಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ಅವರು ವಾದಿಸಿದ್ದರು.

ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಪೊಲೀಸರು ಆರೋಪಪಟ್ಟಿಯನ್ನೂ ಸಲ್ಲಿಸಿದ್ದಾರೆ. ಲಭ್ಯ ಸಾಕ್ಷ್ಯಾಧಾರಗಳನ್ನು ಪೊಲೀಸರು ಈಗಾಗಲೇ ಸಂಗ್ರಹಿಸಿದ್ದು, ಆರೋಪಿಯು ಸ್ಥಳೀಯವನಾಗಿದ್ದ ಕಾರಣ ನ್ಯಾಯವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಆರೋಪ ಪರ ವಕೀಲರು ವಾದಿಸಿದ್ದರು. ಇದನ್ನು ಪರಿಗಣಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಎಂ. ಜೋಷಿ ಅವರ ನೇತೃತ್ವದ ನ್ಯಾಯಪೀಠ, ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಹಿಂದೊಬ್ಬಳು ಮುಂದೊಬ್ಬಳನ್ನು ಕೂರಿಸಿಕೊಂಡು ಬೈಕ್ ನಲ್ಲಿ ವ್ಹೀಲಿಂಗ್ – ಯುವತಿಯರು ಹಾಗೂ ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲು

Next Post

ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ಳಿಹಬ್ಬ ಸಂಭ್ರಮಾಚರಣೆ, ನೂತನ ಕಟ್ಟಡ ಉದ್ಘಾಟನೆ

Related Posts

ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ
ಕ್ರೈಮ್ ನ್ಯೂಸ್

ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ

November 5, 2026
18
ಮೂಡುಬಿದ್ರೆ: ರಸ್ತೆ ಗುಂಡಿ ಬಿದ್ದ ನೆಪದಲ್ಲಿ ರಾಜ್ಯ ಹೆದ್ದಾರಿ ಮೇಲೆ ತನ್ನ ಬೈಕ್ ಇಟ್ಟು ಸಂಚಾರಕ್ಕೆ ತಡೆ, ಮೂಡುಬಿದ್ರೆ ಬಳಿ ಹೈಡ್ರಾಮಾ ನಡೆಸಿದ ಆರೋಪಿ ಬಂಧನ
ಕ್ರೈಮ್ ನ್ಯೂಸ್

ಮೂಡುಬಿದ್ರೆ: ರಸ್ತೆ ಗುಂಡಿ ಬಿದ್ದ ನೆಪದಲ್ಲಿ ರಾಜ್ಯ ಹೆದ್ದಾರಿ ಮೇಲೆ ತನ್ನ ಬೈಕ್ ಇಟ್ಟು ಸಂಚಾರಕ್ಕೆ ತಡೆ, ಮೂಡುಬಿದ್ರೆ ಬಳಿ ಹೈಡ್ರಾಮಾ ನಡೆಸಿದ ಆರೋಪಿ ಬಂಧನ

November 4, 2026
73
Next Post
ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ಳಿಹಬ್ಬ ಸಂಭ್ರಮಾಚರಣೆ, ನೂತನ ಕಟ್ಟಡ ಉದ್ಘಾಟನೆ

ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ಳಿಹಬ್ಬ ಸಂಭ್ರಮಾಚರಣೆ, ನೂತನ ಕಟ್ಟಡ ಉದ್ಘಾಟನೆ

Discussion about this post

Recent News

ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ

ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ

November 5, 2026
18
ಬೆಂಗಳೂರಿನಲ್ಲಿ ರೋಹನ್ ಕಾರ್ಪೋರೇಶನ್‌ನ ನೂತನ ಕಚೇರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟನೆ- ನ. 6ರಿಂದ ಮೂರು ದಿನಗಳ ಪ್ರಾಜೆಕ್ಟ್ ಎಕ್ಸಿಬಿಷನ್; ವಿಶೇಷ ದರಗಳಲ್ಲಿ ಖರೀದಿಗೆ ಅವಕಾಶ

ಬೆಂಗಳೂರಿನಲ್ಲಿ ರೋಹನ್ ಕಾರ್ಪೋರೇಶನ್‌ನ ನೂತನ ಕಚೇರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟನೆ- ನ. 6ರಿಂದ ಮೂರು ದಿನಗಳ ಪ್ರಾಜೆಕ್ಟ್ ಎಕ್ಸಿಬಿಷನ್; ವಿಶೇಷ ದರಗಳಲ್ಲಿ ಖರೀದಿಗೆ ಅವಕಾಶ

November 5, 2026
47
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ

ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ

November 5, 2026
ಬೆಂಗಳೂರಿನಲ್ಲಿ ರೋಹನ್ ಕಾರ್ಪೋರೇಶನ್‌ನ ನೂತನ ಕಚೇರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟನೆ- ನ. 6ರಿಂದ ಮೂರು ದಿನಗಳ ಪ್ರಾಜೆಕ್ಟ್ ಎಕ್ಸಿಬಿಷನ್; ವಿಶೇಷ ದರಗಳಲ್ಲಿ ಖರೀದಿಗೆ ಅವಕಾಶ

ಬೆಂಗಳೂರಿನಲ್ಲಿ ರೋಹನ್ ಕಾರ್ಪೋರೇಶನ್‌ನ ನೂತನ ಕಚೇರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟನೆ- ನ. 6ರಿಂದ ಮೂರು ದಿನಗಳ ಪ್ರಾಜೆಕ್ಟ್ ಎಕ್ಸಿಬಿಷನ್; ವಿಶೇಷ ದರಗಳಲ್ಲಿ ಖರೀದಿಗೆ ಅವಕಾಶ

November 5, 2026
ಮುಡಾದಿಂದ ಎರಡು ಅಂತಸ್ತಿನ ಸಾಮಾನ್ಯ ಮನೆಗಳಿಗೆ 1.5 ಮೀಟರ್ ಸೆಟ್ ಬ್ಯಾಕ್, ಏಳು ಅಂತಸ್ತಿನ ಕಟ್ಟಡಗಳಿಗೆ ಒಂದು ಮೀಟರ್, ಅವೈಜ್ಞಾನಿಕ ನೀತಿ ಬದಲಿಸಲು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಆಗ್ರಹ.!

ಮುಡಾದಿಂದ ಎರಡು ಅಂತಸ್ತಿನ ಸಾಮಾನ್ಯ ಮನೆಗಳಿಗೆ 1.5 ಮೀಟರ್ ಸೆಟ್ ಬ್ಯಾಕ್, ಏಳು ಅಂತಸ್ತಿನ ಕಟ್ಟಡಗಳಿಗೆ ಒಂದು ಮೀಟರ್, ಅವೈಜ್ಞಾನಿಕ ನೀತಿ ಬದಲಿಸಲು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಆಗ್ರಹ.!

November 5, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d