ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2: ದಿ ರೂಲ್’ ಚಿತ್ರಕ್ಕಾಗಿ ಎಲ್ಲಾ ಸಿನಿಪ್ರೇಮಿಗಳು ಕಾಯುತ್ತಿದ್ದಾರೆ. ಪ್ಯಾನ್ ಇಂಡಿಯಾ ಬ್ಲಾಕ್ಬಸ್ಟರ್ ಪುಷ್ಪ ಸಿನಿಮಾ ಸೀಕ್ವೆನ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಅಲ್ಲು ಅರ್ಜುನ್ಗೆ ಜೋಡಿಯಾಗಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸುಕುಮಾರ್ ನಿರ್ದೇಶನದಲ್ಲಿ ಪುಷ್ಪ 2 ಅದ್ಧೂರಿಯಾಗಿ ತಯಾರಾಗುತ್ತಿದೆ. ಇದೀಗ ಈ ಸಿನಿಮಾದ ಹೊಸ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ಈ ಸಿನಿಮಾದ ಟೀಸರ್ ರಿಲೀಸ್ ಡೇಟ್ ಕೂಡ ರಿವೀಲ್ ಆಗಿದೆ. ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಡಬಲ್ ಧಮಾಕ ಸಿಗಲಿದೆ.
ಏಪ್ರಿಲ್ 8 ಟೀಸರ್ ರಿಲೀಸ್ : ಸಿನಿಮಾ ತಂಡ ‘ಪುಷ್ಪ 2’ ಸಿನಿಮಾ ಹೊಸ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟರ್‌ನಲ್ಲಿ ಕಾಲಿಗೆ ಗೆಜ್ಜೆ ಕಟ್ಟಿರುವ ಫೋಟೋ ಇದೆ. ‘ಪುಷ್ಪ 2’ ಚಿತ್ರದ ಟೀಸರ್ ಏಪ್ರಿಲ್ 8 ರಂದು ಬಿಡುಗಡೆಯಾಗಲಿದೆ ಎನ್ನುವ ಬಿಗ್ ಅಪ್ಡೇಟ್ ನೀಡಿದೆ. ಪೋಸ್ಟರ್ ನೋಡಿ ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ ಈ ಚಿತ್ರದಲ್ಲಿ ಅರ್ಜುನ್ ಅವರ ಪುಷ್ಪರಾಜ್ ಅವತಾರವನ್ನು ನೋಡಲು ಅಲ್ಲು ಫ್ಯಾನ್ಸ್ ಕಾತುರರಾಗಿದ್ದಾರೆ.
ಅಲ್ಲು ಅರ್ಜುನ್ ಬರ್ತ್ ಡೇ ಬಿಗ್ ಗಿಫ್ಟ್ : ಅಲ್ಲು ಅರ್ಜುನ್ ಹುಟ್ಟು ಹಬ್ಬದ ದಿನವೇ ಪುಷ್ಪ ಸಿನಿಮಾ ಟೀಸರ್ ರಿಲೀಸ್ ಆಗ್ತಿದ್ದು, ಅಭಿಮಾನಿಗೆ ಬಿಗ್ ಗಿಫ್ಟ್ ಆಗಿದೆ. ಈಗಾಗಲೇ ಹೊರ ಬಿದ್ದಿರುವ ಒಂದು ಸಿನಿಮಾ ಝಲಕ್ ಕೂಡ ಭಾರೀ ಕ್ರೇಜ್ ಕ್ರಿಯೇಟ್ ಮಾಡಿದೆ. ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ಫಸ್ಟ್ ಲುಕ್ ವೈರಲ್ ಆಗಿದೆ. ಈಗ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿದ್ರೆ, ‘ಪುಷ್ಪ 2’ ಸೂಪರ್-ಡ್ಯೂಪರ್ ಹಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗ್ತಿದೆ.
2021 ರಲ್ಲಿ ಬಿಡುಗಡೆಯಾದ ಪುಷ್ಪ ಚಿತ್ರವು ದೇಶಾದ್ಯಂತ ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿ ಬ್ಲಾಕ್ಬಸ್ಟರ್ ಆಯಿತು. ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಈ ಚಿತ್ರದಲ್ಲಿ, ಬನ್ನಿ ಮಾರಿಸಂಸ್, ಆಕ್ಷನ್, ನಟನೆ ಮತ್ತು ಶೈಲಿಯಿಂದ ಎಲ್ಲರೂ ಮೆಚ್ಚಿದರು. ಇದರೊಂದಿಗೆ ಪುಷ್ಪ 2 ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.
ಪುಷ್ಪರಾಜ್ಗೆ ನಟಿ ರಶ್ಮಿಕಾ ಮಂದಣ್ಣ ನಾಯಕಿ : ಪುಷ್ಪ 2 ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದರೆ, ಫಹಾದ್ ಫಾಜಿಲ್, ಜಗಪತಿ ಬಾಬು, ಪ್ರಕಾಶ್ ರಾಜ್, ಸುನೀಲ್ ಮತ್ತು ಅನಸೂಯಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದೇವಿ ಶ್ರೀಪ್ರಸಾದ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಪುಷ್ಪ 2 ಸಿನಿಮಾವನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಚಿತ್ರದ ಆ್ಯಕ್ಷನ್ ಸೀನ್ಗಳನ್ನು ಚಿತ್ರೀಕರಿಸಲಾಗ್ತಿದೆ. ಸಿನಿಮಾದ ಇಂಟರ್ವಲ್ ನಲ್ಲಿ ಬರುವ 25 ನಿಮಿಷದ ಸೀನ್ಗೆ ನಿರ್ಮಾಪಕರು 50 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಹೇಳಲಾಗ್ತಿದೆ. 25 ನಿಮಿಷಗಳ ಈ ಒಂದು ಸಂಚಿಕೆಗಾಗಿ ತಂಡವು ಶೂಟ್ ಮಾಡಿದೆ. ಭಾರೀ ನಿರೀಕ್ಷೆಗಳ ನಡುವೆ ಮೂಡಿಬರುತ್ತಿರುವ ಈ ಸಿನಿಮಾ ಎಷ್ಟರಮಟ್ಟಿಗೆ ಅದ್ಧೂರಿಯಾಗಿ ತೆರೆಕಾಣಲಿದೆ ಎಂದು ನೋಡಲು ಜನರು ಕಾಯ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post