ಉಳ್ಳಾಲ, ಎ.3: 2024ರ ಮೇ, ತಿಂಗಳಲ್ಲಿ ಅಮರಿಕಾದ ನ್ಯೂಯಾರ್ಕ್ನಲ್ಲಿ ಜರಗುವ ವಲ್ಡ್ ಸೈನ್ಸ್ ಸ್ಕಾಲರ್ ಕಾರ್ಯಕ್ರಮಕ್ಕೆ ಉಳ್ಳಾಲದ ಮೊಗವೀರ ಸಮಾಜದ ಬಾಲಕಿ ಸಿಂಧೂರ (15)ಳಿಗೆ ಆಹ್ವಾನ ಬಂದಿದ್ದು, ಮುಂದಿನ ತಿಂಗಳು ತಾಯಿ ಮಗಳು ಇಬ್ಬರು ಭಾಗಿಯಾಗಲಿದ್ದಾರೆ ಎಂದು ಬಾಲಕಿಯ ತಾಯಿ ಶಿಬಾನಿ ರಾಜಾ ಹೇಳಿದರು.
ಸಿಂಧೂರ ಅವರ ತಾಯಿ ಶಿಬಾನಿ ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ನ್ಯೂಯಾರ್ಕ್ ನಲ್ಲಿ ನಡೆಯುವ ವರ್ಲ್ಡ್ ಸೈನ್ಸ್ ಸ್ಕಾಲರ್ ಅನ್ನುವ ಕಾರ್ಯಕ್ರಮಕ್ಕೆ ಹಾಜರಾಗಲು ಹಲವು ಪ್ರಬಂಧ ಮಂಡಿಸಲು ಹೇಳಿದ್ದರು. ಆ ಪ್ರಬಂಧಗಳ ಆಧಾರದಂತೆ ಸಂದರ್ಶನ ನಡೆಸುತ್ತಾರೆ. ಆನಂತರ ಮತ್ತೆ ವಿಜ್ಞಾನ , ಗಣಿತ ವಿಷಯಗಳ ಪ್ರಬಂಧ ಮಂಡಿಸಿದ ನಂತರ ವಲ್ಡ್ ಸೈನ್ಸ್ ಸ್ಕಾಲರ್ ಆಗಿ ಆಯ್ಕೆಯಾಗಿ, ಕಾರ್ಯಕ್ರಮದಲ್ಲಿ ಭಾಗವಹಿ ಸಲು ಆಹ್ವಾನ ಬಂದಿದೆ .
ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ 19 ದೇಶದ 33 ಆವಿಷ್ಕಾರಗಳನ್ನು ಕೊನೆಯ ಹಂತದಲ್ಲಿ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಸಿಂಧೂರ ರಾಜ ಮಂಡಿಸಿದ್ದ “ಆರ್ಟಿಫಿಷಿಯಲ್ ಇಂಟೆಲಿಜೆಂಟ್ಸ್ ಮಾಡೆಲ್ ಸಿಬಿ ಫ್ಲೋ” ಆವಿಷ್ಕಾರವು ಪ್ರಥಮ ಸ್ಥಾನ ಪಡೆದಿದೆ. ಈ ಆವಿಷ್ಕಾರವು ಮನುಷ್ಯನ ಮೆದುಳಿನ ಪ್ರಾಯವನ್ನು ಲೆಕ್ಕ ಹಾಕಿ ಡಿಮೆನ್ಸಿಯಾ, ಆಲ್ಝೈಮರ್ ಮುಂತಾದ ನ್ಯೂರೋ ಡಿ ಜನರೇಟಿವ್ ಕಾಯಿಲೆಗಳು ಬರುವ
ಸಾಧ್ಯತೆಯನ್ನು ಅಂದಾಜಿಸುತ್ತದೆ. ಸಿಂಧೂರ “ವರ್ಲ್ಡ್ ಸೈನ್ಸ್ ಸ್ಕಾಲರ್ 2023″ ಆಗಿ ಆಯ್ಕೆಯಾಗಿ 2024 ಮೇ 29 ರಿಂದ ಜೂನ್ 2ರ ವರೆಗೆ ಅಮೇರಿಕಾದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಫೆಸ್ಟಿವಲ್‌ನಲ್ಲಿ
ಭಾಗವಹಿಸಲಿದ್ದಾರೆ. 22 ದೇಶಗಳ ಒಟ್ಟು 52 ವಿದ್ಯಾರ್ಥಿಗಳಿಗೆ ಈ ಅವಕಾಶ ದೊರೆತಿದೆ. ಅಲ್ಲಿ ಇವರು ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳ ಜೊತೆ ವಿಚಾರ ವಿನಿಮಯ ನಡೆಸಲಿದ್ದಾರೆ ಎಂದು ಶಿಬಾನಿ ಹೇಳಿದರು.
ಉಳ್ಳಾಲದ ಮೊಗವೀರ ಮುಖಂಡ ಬಾಬು ಬಂಗೇರ ಹಾಗೂ ಶಶಿಕಾಂತಿ ಅವರ ಮೊಮ್ಮಗಳಾಗಿ ರುವ ಸಿಂಧೂರ ಬೆಂಗಳೂರಿನ ನ್ಯೂ ಅರೈಸಿಂಗ್ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ. ಇಳಿ ವಯಸ್ಸಿನಿಂದಲೇ ಟಿ.ವಿ ನೋಡುವುದು ಕಡಿಮೆ, ಚಿತ್ರಕಲೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಾಕೆ. ಸ್ಮರಣಶಕ್ತಿ ಜಾಸ್ತಿಯಿತ್ತು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಚಾರದ ಕುರಿತು ಆಸಕ್ತಿ ಹೊಂದಿದ್ದ ಸಿಂಧೂರ ಕೊರೊನಾ ಸಂದರ್ಭ ಯೂಟ್ಯೂಬ್, ಸಾಮಾಜಿಕ ಜಾಲತಾಣಗಳ , ಶಿಕ್ಷಕರ ಮೂಲಕ ಶಿಕ್ಷಣ ಪಡೆಯುತ್ತಾ ಹೋದಂತೆ ಆಸಕ್ತಿ ಇನ್ನಷ್ಟು ಹೆಚ್ಚಾಗಿಸಿದ್ದಳು. ಮಾನವ ಜನಾಂಗಕ್ಕೆ ಉಪಯುಕ್ತವಾಗುವ ವಿಜ್ಞಾನ ಸಂಶೋಧನೆ ಪ್ರಾಜೆಕ್ಟ್ ವರದಿಯನ್ನು ಸಲ್ಲಿಸಿದ್ದ ಈಕೆ ಸದ್ಯ ವೈದ್ಯಕೀಯ ಜಗತ್ತಿನಲ್ಲಿ ದೇಹದಲ್ಲಿರುವ ಗೆಡ್ಡೆಗಳು ಯಾವುದು ಅನ್ನುವುದು ಪತ್ತೆಹಚ್ಚುವುದರ ಒಳಗೆ ಬೇರೆ ಹಂತ ವನ್ನು ದಾಟಿರುತ್ತೇವೆ. ಅದಕ್ಕಾಗಿ ಸಾಧ್ಯವಾದಷ್ಟು ಬೇಗ ಪತ್ತೆಹಚ್ಚಿದಲ್ಲಿ ರೋಗಿ ಗುಣಮುಖರಾಗುವ ಸಾಧ್ಯತೆಗಳು ತುಂಬಾ ಜಾಸ್ತಿಯಿರುವುದು. ಈ ನಿಟ್ಟಿನಲ್ಲಿ ರೇಡಿಯಾ ಅನ್ನುವ ಪ್ರಾಜೆಕ್ಟ್ ಸಂಶೋಧಿಸುವ ಮೂಲಕ ಗೆಡ್ಡೆಯ ಕುರಿತು ಶೀಘ್ರ ಮಾಹಿತಿಯನ್ನು ಸಂಗ್ರಹಿಸುತ್ತದೆ. ಈ ಪ್ರಬಂಧ ಮಂಡಿಸಿದ ಹಿನ್ನೆಲೆಯಲ್ಲಿ ಪುರಸ್ಕಾರ ದೊರೆತಿದೆ.
ಸಿಂಧೂರ ಅವರು “ಯುರೋಪಿಯನ್ ಮೆಥಮ್ಯಾಟಿಕಲ್ ಸೊಸೈಟಿ” ಹಾಗೂ “ಕ್ಯಾಂಪ್ ಯೆಲ್ಲೋ” ಇವರು ನಡೆಸಿದ 2022ನೇ ಸಾಲಿನ ಅಂತರಾಷ್ಟ್ರೀಯ ಮೆಥಮ್ಯಾಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. “ಸ್ಟೆಮ್ ಪೀಡಿಯಾ” ಇವರು ನಡೆಸಿದ “ಕೋಡೆವಾರ್” 2022 ಇಂಟರ್ ನ್ಯಾಶನಲ್ ಸ್ಪರ್ಧೆಯಲ್ಲಿ “ಪೀಪಲ್ ಚಾಯ್ಸ್” ಅವಾರ್ಡ್ ಪಡೆದಿದ್ದಾರೆ. ಸಿಂಧೂರ ಮಾಡಿರುವ ಪ್ರಾಜೆಕ್ಟ್ X-Ray, MRI – Scan ಗಳಲ್ಲಿ ಕಂಡುಬರುವ ಗಡ್ಡೆಗಳು ಯಾವ ಗುಂಪಿಗೆ ಸೇರುತ್ತವೆ ಎಂಬುದನ್ನು ಶೇಕಡಾ 95 ರಿಂದ 98 ಪರ್ಸೆಂಟ್ ವರೆಗೆ ನಿಖರವಾಗಿ ತಿಳಿಸುತ್ತದೆ. ಇದು ವೈದ್ಯರಿಗೆ ರೋಗ ಪತ್ತೆ ಹಚ್ಚಲು ಸಹಕಾರಿಯಾಗಿದೆ ಎಂದರು.
ವಿದ್ಯಾರ್ಥಿನಿ ಸಿಂಧೂರ ಮಾತನಾಡಿ, ಹಿರಿಯರ ಹಾಗೂ ಹೆತ್ತವರ ಮಾರ್ಗದರ್ಶನದಿಂದ ಯಶಸ್ಸು ಸಾಧ್ಯವಾಗಿದೆ. ಕೊರೊನಾ ಸಂದರ್ಭ ಆಳವಾಗಿ ಅಧ್ಯಯನ ನಡೆಸಿದ ಹಿನ್ನೆಲೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಚಾರ ತಿಳಿದು ಯಶಸ್ಸು ಸಾಧ್ಯವಾಗಿದೆ, ಭವಿಷ್ಯದಲ್ಲಿ ವಿಜ್ಞಾನಿಯಾಗುವ ಕನಸು ಹೊಂದಿದ್ದು, ಹುಟ್ಟಿ ಬೆಳೆದ ಉಳ್ಳಾಲವನ್ನು ಮರೆಯದೇ ದೇಶದ ತಾಂತ್ರಿಕತೆ ಹಾಗೂ ವೈಜ್ಞಾನಿಕತೆಯ ಬಹುತೇಕ ಸವಾಲುಗಳಿಗೆ ಉತ್ತರವಾಗಲು ಪ್ರಯತ್ನಿಸುತ್ತೇನೆ ಎಂದರು. ಈ ಸಂದರ್ಭ ಸಿಂಧೂರ ತಂದೆ ರಾಜಾ ದಯಾಳನ್, ಅಜ್ಜ ಬಾಬು ಬಂಗೇರ, ಅಜ್ಜಿ ಶಶಿಕಾಂತಿ ಉಳ್ಳಾಲ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post