ಬೆಳ್ತಂಗಡಿ : ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮಾಡಿ ಲಾರಿಯಲ್ಲಿ ತುಂಬಿಸುತ್ತಿದ್ದ ವೇಳೆ ತಹಶೀಲ್ದಾರ್ ಮತ್ತು ಆಹಾರ ನಿರೀಕ್ಷಕ ಜಂಟಿಯಾಗಿ ನಿನ್ನೆ ಸಂಜೆ ದಾಳಿ ಮಾಡಿ, 14 ಕ್ವಿಂಟಾಲ್ ಪಡಿತರ ವಶಕ್ಕೆ ಪಡೆದ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆಯಲ್ಲಿ ನಡೆದಿದೆ.
ಗೇರುಕಟ್ಟೆ ಬಸ್ ನಿಲ್ದಾಣದ ಬಳಿ ಇರುವ ಎಸ್.ವಿ. ಟ್ರೇಡರ್ಸ್ನಲ್ಲಿ ಸರ್ಕಾರದಿಂದ ಸಿಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಲಾರಿಯಲ್ಲಿ ಸಾಗಿಸಲು ಲೋಡ್ ಮಾಡುತ್ತಿದ್ದ ವೇಳೆ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್.ಜೆ ಮತ್ತು ಆಹಾರ ನಿರೀಕ್ಷಕ ವಿಶ್ವ.ಕೆ ಜಂಟಿಯಾಗಿ ದಾಳಿ ಮಾಡಿ, ಪತ್ತೆ ಹಚ್ಚಿದ್ದಾರೆ. ಲಾರಿಯಲ್ಲಿ ಒಟ್ಟು 14 ಕ್ವಿಂಟಾಲ್ ಪಡಿತರ ಪತ್ತೆಯಾಗಿದ್ದು, ಬೆಳ್ತಂಗಡಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ಮಹೇಶ್. ಜೆ , ಆಹಾರ ನಿರೀಕ್ಷಕ ವಿಶ್ವ. ಕೆ, ಕೊಕ್ಕಡ ಕಂದಾಯ ನಿರೀಕ್ಷಕ ಪವಡಪ್ಪ ದೊಡ್ಡಮಣಿ, ಕಳಿಯ ಗ್ರಾಮ ಪಂಚಾಯತ್ ಗ್ರಾಮಲೆಕ್ಕಿಗ ಪೃಥ್ವಿರಾಜ್, ಚಾಲಕ ಸಂತೋಷ್ ಕುಮಾರ್ ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post