ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಔಷಧ ವ್ಯಾಪಾರಸ್ವರ ಸಂಘದ ವಾರ್ಷಿಕ ಮಹಾಸಭೆಯು ಮಂಗಳೂರಿನ ನಾಗುರಿಯಲ್ಲಿರುವ ಗಣೇಶೋತ್ಸವ ಸಭಾಭವನದಲ್ಲಿ ದಿನಾಂಕ 29.10.2023 ನೇ ಆದಿತ್ಯವಾರ ಬೆಳಿಗ್ಗೆ 10.00 ಗಂಟೆಗೆ ಜರಗಿತು. ಸಂಘದ ಅಧ್ಯಕ್ಷ ಶ್ರೀ ಸುಜಿತ್ ಭಿಡೆ ಸಬಾಧ್ಯಕ್ಷತೆ ವಹಿಸಿದರು, ಗೌರವಾಧ್ಯಕ್ಷರಾದ ಶ್ರೀ ಚಿತ್ತರಂಜನ್, ಉಪಾಧ್ಯಕ್ಷರಾದ ಯು. ಸುನೀಲ್ ನಾಯಕ್, ಕಾರ್ಯದರ್ಶಿ ಗುರುಚರಣ್ ರಾವ್, ಜೊತೆಕಾರ್ಯದರ್ಶಿ ವಾಲ್ಟರ್ ಡಿ’ಕುನ್ನ, ಕೋಶಾಧಿಕಾರಿಯವರಾದ ವಿನಯ್ ರೈ ಮತ್ತು ವೇದಿಕೆಯಲ್ಲಿ ಸದಸ್ಯರಾದ ಪ್ರಶಾಂತ್ ಶೆಟ್ಟಿ, ಶರತ್ ಆಳ್ವ, ಸಂತೋಷ್ ಲೋಬೋ, ಅಮ್ಮತ್ ಕಿರಣ್ ರೈ, ಯು, ಹೆಚ್ ಹಮೀದ್, ನರೇಂದ್ರ ಪ್ರಭು, ಚಂದ್ರಶೇಖರ್ ಭಟ್, ವಾಸುದೇವ ಭಟ್, ಅಜಿತ್ ಶೆಟ್ಟಿ, ಸಿ. ಹೆಚ್ ಗಫೂರ್ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ಪ್ರಫುಲ್ ಮೆಡಿಕಲ್ಸ್ ಕುಲಶೇಖರ ಇದರ ಮಾಲಕರಾದ ಶ್ರೀ ಆರುಣ್ ಶೆಟ್ಟಿ ಅವಿರೋಧವಾಗಿ ಆಯ್ಕೆಗೊಂಡರು, ಉಪಾಧ್ಯಕ್ಷರಾಗಿ ಅಮ್ಮತ್ ರೈ, ಕಾರ್ಯದರ್ಶಿಯಾಗಿ ಡಾ. ಎ.ಕೆ ಜಮಾಲ್, ಕೋಶಾಧಿಕಾರಿಯಾಗಿ ಚಂದ್ರಶೇಖರ್ ಭಟ್, ಜೊತೆ ಕಾರ್ಯದರ್ಶಿಯಾಗಿ ಶ್ರೀನಿವಾಸ್ ಭಟ್, ಹಾಗೂ ಆಡಳಿತ ಮಂಡಳಿಯ ಸದಸ್ಯರಾಗಿ ನವೀನ್ ಟಿ.ಆರ್, ಶ್ರೀಕಾಂತ್ ಶೆಟ್ಟಿ, ರಾಮ್ ದಾಸ್ ಶೆಣೈ, ಸುಧಾಕರ್ ಪೈ, ಸುನೀಲ್ ಡೀಸೋಜಾ, ರೋಹಿತ್ ಕುಮಾರ್, ಉದಯ್ ಕುಮಾರ್ ಇವರನ್ನು ಆಯ್ಕೆಗೊಳಿಸಲಾಯಿತು. ಗೌರವಾಧ್ಯಕ್ಷರಾಗಿ ಚಿತ್ತರಂಜನ್ ಇವರು ಮುಂದುವರಿಯುವುದಾಗಿ ನಿರ್ಣಯಿಸಲಾಯಿತು.
ಹಿರಿಯ ಸದಸ್ಯರಾದ ಜ್ಞಾನೇಶ್ವರ ಹೆಗ್ಗಡೆ, ಮಹಮ್ಮದ್ ಕುಂಞ ಇವರು ಗೌರವಿಸಿದರು. ಅಧಿಕಾರ ಸ್ವೀಕಾರದ ನಂತರ ಮಾತನಾಡಿದ ಅರುಣ್ ಶೆಟ್ಟಿಯವರು ಸಂಘಟನೆ ಮತ್ತು ಸೇವೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ಇತ್ತರು. ಗೌರವಾಧ್ಯಕ್ಷರಾದ ಚಿತ್ತರಂಜನ್ ಹಾಗೂ SKDC & D A (R) ಯ ಹಿರಿಯ ಸದಸ್ಯರಾದ ಗಣೇಶ್ ಕಾಮತ್ ಶುಭ ಹಾರೈಸಿದರು. ಕಾರ್ಯದರ್ಶಿ ಡಾ. ಏಕೆ ಜಮಾಲ್ ಧನ್ಯವಾದ ಸಮರ್ಪಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಶಶಿಧರ್ ಪಾಳಂಗಾಯ ಕಾರ್ಯಕ್ರಮ ನಿರೂಪಣೆಗೈದರು. ರಾಷ್ಟ್ರಗೀತೆಯೊಂದಿಗೆ 58ನೇ ವಾರ್ಷಿಕ ಮಹಾಸಭೆಯು ಮುಕ್ತಾಯಗೊಂಡಿತು,
Discover more from Coastal Times Kannada
Subscribe to get the latest posts sent to your email.
Discussion about this post