ಮಂಗಳೂರು: ‘ಕೊಡಿಯಾಲ್ ತೇರು’ ಎಂದೇ ಪ್ರಸಿದ್ಧಿಯಾಗಿರುವ ಮಂಗಳೂರು ರಥೋತ್ಸವ ಫೆ. 4ರಂದು ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ. ಶ್ರೀ ಸಂಸ್ಥಾನ ಕಾಶೀಮಠಾ ಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಪ್ರಾತಃ ಕಾಲ ಮಹಾಪ್ರಾರ್ಥನೆ ಬಳಿಕ ಪ್ರಧಾನ ಶ್ರೀ ವೀರ ವೆಂಕಟೇಶ ದೇವರ ಸಹಿತ ಪರಿವಾರ ದೇವರಿಗೆ ಶತಕಲಶಾಭಿಷೇಕ, ಗಂಗಾಭಿಷೇಕ, ಕನಕಾಭಿಷೇಕ ನಡೆಯಲಿದೆ.
ಬಳಿಕ ಯಜ್ಞ ಮಂಟಪದಲ್ಲಿ ಪೂರ್ಣಾಹುತಿ, ಸಂಜೆ 5ಕ್ಕೆ ಶ್ರೀ ದೇವರು ಸ್ವರ್ಣ ಪಲ್ಲಕಿಯಲ್ಲಿ ವಿರಾಜಮಾನರಾಗಿ ರಥಾರೂಡಲಾಗಲಿರುವರು. ರಥಾರೋಹಣದ ಬಳಿಕ ಶ್ರೀಗಳಿಂದ ಪೂಜೆ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 11ಕ್ಕೆ ನೆರೆದ ಭಜಕರಿಂದ ಬ್ರಹ್ಮರಥ ಎಳೆಯುವ ಮೂಲಕ ರಥೋತ್ಸವ ಸಂಪನ್ನಗೊಳ್ಳಲಿದೆ. ರಾತ್ರಿ ದೇಗುಲದ ಪ್ರಕಾರದಲ್ಲಿ ಪ್ರಾಕಾರೋತ್ಸವ ನಡೆದು ಮರುದಿನ ಬೆಳಗ್ಗೆ ಅವಭೃಥೋತ್ಸವ (ಓಕುಳಿ) ನಡೆಯಲಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post