• About us
  • Contact us
  • Disclaimer
Friday, August 14, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಶಾಲಾ ವಿದ್ಯಾರ್ಥಿಗೆ ಟಾಯ್ಲೆಟ್ ಸೀಟ್ ನೆಕ್ಕಿಸಿದರು, ಕಮೋಡ್​ನಲ್ಲಿ ತಲೆ ಮುಳುಗಿಸಿದರು: ಮಗನ ಆತ್ಮಹತ್ಯೆಯ ಹಿಂದಿನ ಕರಾಳತೆ ಬಿಚ್ಚಿಟ್ಟ ತಾಯಿ

Coastal Times by Coastal Times
February 3, 2025
in ರಾಷ್ಟ್ರೀಯ ಸುದ್ದಿ
ಶಾಲಾ ವಿದ್ಯಾರ್ಥಿಗೆ ಟಾಯ್ಲೆಟ್ ಸೀಟ್ ನೆಕ್ಕಿಸಿದರು, ಕಮೋಡ್​ನಲ್ಲಿ ತಲೆ ಮುಳುಗಿಸಿದರು: ಮಗನ ಆತ್ಮಹತ್ಯೆಯ ಹಿಂದಿನ ಕರಾಳತೆ ಬಿಚ್ಚಿಟ್ಟ ತಾಯಿ
181
VIEWS
WhatsappTelegramShare on FacebookShare on Twitter

ಕೊಚ್ಚಿ, ಫೆ 2: ಕೇರಳದ ಕೊಚ್ಚಿಯ ತ್ರಿಪುಣಿತರಾದಲ್ಲಿ ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸುದ್ದಿಯಾಗಿತ್ತು. ಆದರೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದ್ದು, ಬಾಲಕನಿಗೆ ಶಾಲೆಯಲ್ಲಿ ಭಯಾನಕವಾಗಿ ರ‍್ಯಾಗಿಂಗ್ ಮಾಡಲಾಗಿತ್ತು ಎಂದು ಆತನ ತಾಯಿ ಆರೋಪಿಸಿದ್ದಾರೆ. ಟಾಯ್ಲೆಟ್ ಸೀಟ್ ನೆಕ್ಕುವಂತೆ ಮಾಡಿದ್ದಲ್ಲದೆ, ಫ್ಲಷ್ ಮಾಡುವಾಗ ಕಮೋಡ್​ನಲ್ಲಿ ಆತನ ತಲೆಯನ್ನು ಮುಳುಗಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. 15 ವರ್ಷದ ವಿದ್ಯಾರ್ಥಿ ಮಿಹಿರ್ ಅಹ್ಮದ್ ಕೆಲವು ದಿನಗಳ ಹಿಂದೆ 26ನೇ ಮಹಡಿಯ ಫ್ಲಾಟ್​​​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಗ್ಗೆ ಇದೀಗ ಆತನ ತಾಯಿ ಗಂಭೀರ ಆರೋಪ ಮಾಡಿದ್ದಾರೆ.

ಇದೀಗ ತನ್ನ ಮಗನ ಸಾವಿಗೆ ನ್ಯಾಯಬೇಕೆಂದು ತಾಯಿ ಸಿಎಂ ಹಾಗೂ ಪೊಲೀಸ್‌ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ಘಟನೆ ಹಿಂದಿನ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. ತನ್ನ ಮಗನ ಸಾವಿಗೆ ಕಾರಣವೇನು ಎನ್ನುವುದನ್ನು ತಾಯಿ ರತ್ನಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡು ಬರೆದುಕೊಂಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ? : ಮಗನ ಮರಣದ ನಂತರ, ಮಿಹಿರ್ ಏಕೆ ಅಂತಹ ಕಠಿಣ ಹೆಜ್ಜೆಯನ್ನು ತೆಗೆದುಕೊಂಡಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ನನ್ನ ಪತಿ ಮತ್ತು ನಾನು ಮಾಹಿತಿಯನ್ನು ಸಂಗ್ರಹಿಸಲು ಪ್ರಾರಂಭಿಸಿದೆವು. ಅವರ ಸ್ನೇಹಿತರು, ಸಹಪಾಠಿಗಳು ಮತ್ತು ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ಪರಿಶೀಲಿಸುವ ಮೂಲಕ ನಾವು ಅವನು ಅನುಭವಿಸಿದ ಭಯಾನಕ ವಾಸ್ತವ ನಮಗೆ ತಿಳಿಯಿತು. ಅವನು ಶಾಲೆಯಲ್ಲಿ ಮತ್ತು ಶಾಲಾ ಬಸ್‌ನಲ್ಲಿನ ವಿದ್ಯಾರ್ಥಿಗಳ ಗುಂಪಿನಿಂದ ಕ್ರೂರವಾಗಿ ರಾಗಿಂಗ್‌, ಬೆದರಿಸುವಿಕೆ ಮತ್ತು ದೈಹಿಕ ಹಲ್ಲೆಗೆ ಒಳಗಾಗಿದ್ದ ಎಂದು ತಾಯಿ ಆರೋಪಿಸಿದ್ದಾರೆ.

ನನ್ನ ಮಗನನ್ನು ಅವಾಚ್ಯವಾಗಿ ನಿಂದಿಸಲಾಗಿತ್ತು. ಅವನ ಕೊನೆಯ ದಿನವೂ ಊಹಿಸಲಾಗದ ಅವಮಾನವನ್ನು ಎದುರಿಸಿದ್ದ. ಅವನನ್ನು ಬಲವಂತವಾಗಿ ವಾಶ್ ರೂಂಗೆ ಕರೆದೊಯ್ದು, ಟಾಯ್ಲೆಟ್ ಸೀಟನ್ನು ನೆಕ್ಕುವಂತೆ ಮಾಡಿದ್ದರು. ಟಾಯ್ಲೆಟ್ ಫ್ಲಶ್ ಮಾಡುವಾಗ ತಲೆಯನ್ನು ಟಾಯ್ಲೆಟ್ ಕಮೋಡ್ ಒಳಕ್ಕೆ ತಳ್ಳಲಾಗಿತ್ತು. ಈ ಕ್ರೌರ್ಯದ ಕೃತ್ಯಗಳು ಅವನನ್ನು ಕುಗ್ಗಿಸಿತ್ತು. ಈ ಎಲ್ಲಾ ಕಾರಣದಿಂದ ಅವನು ಈ ರೀತಿಯ ನಿರ್ಧಾರಕ್ಕೆ ಬಂದಿದ್ದ ಎಂದು ಮಿಹಿರ್‌ನ ತಾಯಿ ಆರೋಪಿಸಿದ್ದಾರೆ.

ಮಗನ ಸಾವಿನ ಬಳಿಕವೂ ಆತನ ಇನ್ಸಾಗ್ರಾಮ್ ಖಾತೆಗೆ ಅಶ್ಲೀಲ ಮೆಸೇಜ್ ಕಳುಹಿಸಿ ಸಾವನ್ನು ಸಂಭ್ರಮಿಸಿದ್ದಾರೆ ಎಂದು ಬಾಲಕನ ತಾಯಿ ಹೇಳಿದ್ದಾರೆ. ಈ ಕುರಿತು ಸ್ಟ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಮಿಹಿರ್‌ ತಾಯಿ ಶಾಲೆಯ ಉಪ ಪ್ರಾಂಶುಪಾಲರು ಮಿಹಿರ್‌ಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಪಿಣರಾಯಿ ವಿಜಯನ್​ಗೆ ಪತ್ರ : ಘಟನೆ ಸಂಬಂಧ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಮಿಹಿರ್ ತಾಯಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿ ಮತ್ತು ಕೇರಳ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ತಮ್ಮ ಮಗನ ಸಾವಿನ ಬಗ್ಗೆ ತಕ್ಷಣದ ಮತ್ತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ. ಮಿಹಿರ್ ಜನವರಿ 15 ರಂದು ಶಾಲೆಯಿಂದ ಮರಳಿದ ಕೇವಲ ಒಂದು ಗಂಟೆಯ ನಂತರ ಕೊಚ್ಚಿಯ ತ್ರಿಪುಣಿತರಾದಲ್ಲಿನ ತಮ್ಮ 26 ನೇ ಮಹಡಿಯ ಫ್ಲಾಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

13 ಅಪರಾಧ ಚಟುವಟಿಕೆಗಳಲ್ಲಿ ಭಾಗಿ: ಸುರತ್ಕಲ್‌ನ ಭರತ್‌ ಶೆಟ್ಟಿ ಗೂಂಡಾ ಕಾಯ್ದೆಯಡಿ ಅರೆಸ್ಟ್

Next Post

ಫೆ. 4 ಇಂದು ಮಂಗಳೂರು ‘ಕೊಡಿಯಾಲ್‌ ತೇರು’

Related Posts

ಬಂಧನಕ್ಕೊಳಗಾದ ಕೆಲವೇ ಗಂಟೆಯಲ್ಲಿ ಉದಯನಿಧಿ ಸ್ಟಾಲಿನ್ ಬಿಡುಗಡೆ ಮಾಡಿ ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಆದೇಶ
ರಾಷ್ಟ್ರೀಯ ಸುದ್ದಿ

ಬಂಧನಕ್ಕೊಳಗಾದ ಕೆಲವೇ ಗಂಟೆಯಲ್ಲಿ ಉದಯನಿಧಿ ಸ್ಟಾಲಿನ್ ಬಿಡುಗಡೆ ಮಾಡಿ ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಆದೇಶ

August 4, 2026
41
ರೂ.1 ಕೋಟಿ ಸಂಬಳದ AI ಉದ್ಯೋಗ ಗಿಟ್ಟಿಸಿಕೊಂಡ ಯುವಕ: ಕಿವುಡ ಮತ್ತು ಮೂಕ ತಂದೆಯ ಕನಸನ್ನು ನನಸಾಗಿಸಿದ ಮಗ
ರಾಷ್ಟ್ರೀಯ ಸುದ್ದಿ

ರೂ.1 ಕೋಟಿ ಸಂಬಳದ AI ಉದ್ಯೋಗ ಗಿಟ್ಟಿಸಿಕೊಂಡ ಯುವಕ: ಕಿವುಡ ಮತ್ತು ಮೂಕ ತಂದೆಯ ಕನಸನ್ನು ನನಸಾಗಿಸಿದ ಮಗ

July 28, 2026
68
Next Post
ಫೆ. 4 ಇಂದು ಮಂಗಳೂರು ‘ಕೊಡಿಯಾಲ್‌ ತೇರು’

ಫೆ. 4 ಇಂದು ಮಂಗಳೂರು ‘ಕೊಡಿಯಾಲ್‌ ತೇರು’

Discussion about this post

Recent News

ರಾಜ್ಯದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಬಲಿಪಶುವಾಗದಂತೆ ಸ್ಪಷ್ಟ ಚೌಕಟ್ಟು ರಚಿಸುವಂತೆ ಕ್ಯಾಂಪ್ಕೋ ಆಗ್ರಹ

ರಾಜ್ಯದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಬಲಿಪಶುವಾಗದಂತೆ ಸ್ಪಷ್ಟ ಚೌಕಟ್ಟು ರಚಿಸುವಂತೆ ಕ್ಯಾಂಪ್ಕೋ ಆಗ್ರಹ

August 13, 2026
14
ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

August 12, 2026
37
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ರಾಜ್ಯದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಬಲಿಪಶುವಾಗದಂತೆ ಸ್ಪಷ್ಟ ಚೌಕಟ್ಟು ರಚಿಸುವಂತೆ ಕ್ಯಾಂಪ್ಕೋ ಆಗ್ರಹ

ರಾಜ್ಯದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಬಲಿಪಶುವಾಗದಂತೆ ಸ್ಪಷ್ಟ ಚೌಕಟ್ಟು ರಚಿಸುವಂತೆ ಕ್ಯಾಂಪ್ಕೋ ಆಗ್ರಹ

August 13, 2026
ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

August 12, 2026
ಆಪರೇಷನ್ ತೂಫಾನ್: ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಎಂಡಿಎಂಎ ಸಾಗಿಸಲು ಯತ್ನಿಸಿದ ಯುವಕ-ಯುವತಿಯ ಬಂಧನ

ಆಪರೇಷನ್ ತೂಫಾನ್: ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಎಂಡಿಎಂಎ ಸಾಗಿಸಲು ಯತ್ನಿಸಿದ ಯುವಕ-ಯುವತಿಯ ಬಂಧನ

August 12, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d