• About us
  • Contact us
  • Disclaimer
Wednesday, February 4, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ವ್ಯಾಪಕ ಜನವಿರೋಧ ಹಿನ್ನೆಲೆ ಕುಂಬಳೆ ಟೋಲ್ ಗೇಟ್ ರದ್ದುಪಡಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

Coastal Times by Coastal Times
February 4, 2026
in ರಾಷ್ಟ್ರೀಯ ಸುದ್ದಿ
ವ್ಯಾಪಕ ಜನವಿರೋಧ ಹಿನ್ನೆಲೆ ಕುಂಬಳೆ ಟೋಲ್ ಗೇಟ್ ರದ್ದುಪಡಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
8
VIEWS
WhatsappTelegramShare on FacebookShare on Twitter

ಕಾಸರಗೋಡು, ಫೆ.3: ರಾಷ್ಟ್ರೀಯ ಹೆದ್ದಾರಿ 66ರ ಕುಂಬ್ಳೆಯ ಅರಿಕ್ಕಾಡಿಯಲ್ಲಿ ಆರಂಭಿಸಲಾಗಿದ್ದ ಟೋಲ್ ಪ್ಲಾಜಾವನ್ನು ಮುಚ್ಚುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ಆದೇಶಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ವಸೂಲಿ ಆರಂಭಿಸಿದ 22 ದಿನಗಳ ಬಳಿಕ ವ್ಯಾಪಕ ಜನವಿರೋಧ ಹಿನ್ನೆಲೆಯಲ್ಲಿ ಈ ನಿರ್ಧಾರ ಹೊರಬಿದ್ದಿದೆ.

​ಜನವರಿ 12 ರಂದು ಟೋಲ್ ಸಂಗ್ರಹ ಆರಂಭವಾದ ದಿನದಿಂದಲೇ ಅರಿಕ್ಕಾಡಿ ಟೋಲ್ ಪ್ಲಾಜಾ ವಿರುದ್ಧ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ನೇತೃತ್ವದ ಕ್ರಿಯಾ ಸಮಿತಿ ಎರಡನೇ ದಿನದಿಂದಲೇ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿತ್ತು. ಬಿಜೆಪಿಯನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಈ ಆಂದೋಲನಕ್ಕೆ ಬೆಂಬಲ ನೀಡಿದ್ದವು. ಜನವರಿ 14ರಂದು ರಾತ್ರಿ ಸಾವಿರಾರು ಮಂದಿ ಏಕಾಏಕಿ ನುಗ್ಗಿ ಬಂದು ಟೋಲ್ ಗೇಟನ್ನು ಒದ್ದು ದಾಂಧಲೆ ನಡೆಸಿದ್ದರು.

ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮದ ಪ್ರಕಾರ, ಎರಡು ಟೋಲ್ ಪ್ಲಾಜಾಗಳ ನಡುವೆ ಕನಿಷ್ಠ 60 ಕಿ.ಮೀ. ಅಂತರವಿರಬೇಕು. ಆದರೆ ಅರಿಕ್ಕಾಡಿ ಟೋಲ್ ಪ್ಲಾಜಾವು ತಲಪಾಡಿ ಟೋಲ್‌ನಿಂದ 22 ಕಿ.ಮೀ. ಅಂತರದಲ್ಲಿದೆ. ಹೀಗಾಗಿ ಇದು ಜನರ ಮೇಲಿನ ಹೊರೆ ಎಂಬ ನೆಲೆಯಲ್ಲಿ ವಿರೋಧ ವ್ಯಕ್ತವಾಗಿತ್ತು.

​ಕುಂಬ್ಳೆ ಪೇಟೆಗೆ ಕೇವಲ 1 ಕಿ.ಮೀ. ದೂರದಲ್ಲಿ ಈ ಪ್ಲಾಜಾ ಇರುವುದರಿಂದ ಮತ್ತು ಸ್ಥಳೀಯ ಪ್ರಯಾಣಿಕರಿಗೆ ಇದು ದೊಡ್ಡ ಹೊರೆಯಾಗಿದ್ದರಿಂದ ಜನರು ಪಕ್ಷ ಭೇದ ಮರೆತು ವಿರೋಧಿಸಿದ್ದರು.‌ ಇದೇ ವೇಳೆ, ಕ್ರಿಯಾ ಸಮಿತಿ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿ ಹೋರಾಟ ಆರಂಭಿಸಿದ್ದರು. ಇದರ ಜೊತೆಗೆ, ಬಿಜೆಪಿ ಜಿಲ್ಲಾ ಸಮಿತಿ ಮುಖಂಡರು ಕೇಂದ್ರ ಸಾರಿಗೆ ಸಚಿವರಿಗೂ ಮನವಿ ಮಾಡಿ ಟೋಲ್ ಅಕ್ರಮದ ಬಗ್ಗೆ ಮನವರಿಕೆ ಮಾಡಿಸಿದ್ದರು. ಇಂದು ಸಾರಿಗೆ ಇಲಾಖೆ ಟೋಲ್ ಗೇಟ್ ಬಂದ್ ಮಾಡುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಬಿಜೆಪಿ ಮುಖಂಡ ಸುರೇಂದ್ರನ್ ತನ್ನ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಸಚಿವ ಗಡ್ಕರಿಯವರನ್ನು ಅಭಿನಂದಿಸಿದ್ದಾರೆ.‌

ಇದೇ ವೇಳೆ, ಬಿಜೆಪಿಯಲ್ಲು ಕ್ರೆಡಿಟ್ ಪಡೆಯಲು ಜಿಲ್ಲಾ ಸಮಿತಿ ಮುಖಂಡರು ಜಿಲ್ಲಾಧ್ಯಕ್ಷೆ ಅಶ್ವಿನಿ ನೇತೃತ್ವದಲ್ಲಿ ಕುಂಬಳೆಯಿಂದ ಟೋಲ್ ಗೇಟ್ ವರೆಗೆ ಮಾರ್ಚ್ ನಡೆಸಿ ಜೈಕಾರ ಹಾಕಿದ್ದಾರೆ.  ಟೋಲ್ ಕೇಂದ್ರವನ್ನು ಮುಚ್ಚಿರುವುದರಿಂದ ಕಾಸರಗೋಡು ಮತ್ತು ಮಂಗಳೂರು ನಡುವೆ ಸಂಚರಿಸುವ ಸಾವಿರಾರು ವಾಹನ ಸವಾರರಿಗೆ ನಿರಾಳತೆ ಸಿಕ್ಕಂತಾಗಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಜೇಶ್ವರ ; ತಂದೆಯ ಇರಿತದಿಂದ ಮಗಳು ಬಲಿ, ತಡೆಯಲು ಬಂದಿದ್ದ ತಂಗಿ ಗಂಡನೂ ಆಸ್ಪತ್ರೆಯಲ್ಲಿ ಸಾವು

Related Posts

Padma Awards 2026: ಧರ್ಮೇಂದ್ರ, ವಿ.ಎಸ್.ಅಚ್ಯುತಾನಂದನ್ ಗೆ ಮರಣೋತ್ತರ ಪದ್ಮವಿಭೂಷಣ; ಮಮ್ಮುಟ್ಟಿಗೆ ಪದ್ಮಭೂಷಣ ಘೋಷಣೆ
ರಾಷ್ಟ್ರೀಯ ಸುದ್ದಿ

Padma Awards 2026: ಧರ್ಮೇಂದ್ರ, ವಿ.ಎಸ್.ಅಚ್ಯುತಾನಂದನ್ ಗೆ ಮರಣೋತ್ತರ ಪದ್ಮವಿಭೂಷಣ; ಮಮ್ಮುಟ್ಟಿಗೆ ಪದ್ಮಭೂಷಣ ಘೋಷಣೆ

January 25, 2026
42
ಬಸ್‌ನಲ್ಲಿ ಲೈಂಗಿಕ ಕಿರುಕುಳ ಆರೋಪ, ತನ್ನದೇ ವೈರಲ್‌ ವಿಡಿಯೋ ನೋಡಿ ವ್ಯಕ್ತಿ ಆತ್ಮಹತ್ಯೆ; ಯೂಟ್ಯೂಬರ್ ಮಹಿಳೆ ವಿರುದ್ಧ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ
ರಾಷ್ಟ್ರೀಯ ಸುದ್ದಿ

ಬಸ್‌ನಲ್ಲಿ ಲೈಂಗಿಕ ಕಿರುಕುಳ ಆರೋಪ, ತನ್ನದೇ ವೈರಲ್‌ ವಿಡಿಯೋ ನೋಡಿ ವ್ಯಕ್ತಿ ಆತ್ಮಹತ್ಯೆ; ಯೂಟ್ಯೂಬರ್ ಮಹಿಳೆ ವಿರುದ್ಧ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

January 20, 2026
180

Discussion about this post

Recent News

ವ್ಯಾಪಕ ಜನವಿರೋಧ ಹಿನ್ನೆಲೆ ಕುಂಬಳೆ ಟೋಲ್ ಗೇಟ್ ರದ್ದುಪಡಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ವ್ಯಾಪಕ ಜನವಿರೋಧ ಹಿನ್ನೆಲೆ ಕುಂಬಳೆ ಟೋಲ್ ಗೇಟ್ ರದ್ದುಪಡಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

February 4, 2026
8
ಮಂಜೇಶ್ವರ ; ತಂದೆಯ ಇರಿತದಿಂದ ಮಗಳು ಬಲಿ, ತಡೆಯಲು ಬಂದಿದ್ದ ತಂಗಿ ಗಂಡನೂ ಆಸ್ಪತ್ರೆಯಲ್ಲಿ ಸಾವು

ಮಂಜೇಶ್ವರ ; ತಂದೆಯ ಇರಿತದಿಂದ ಮಗಳು ಬಲಿ, ತಡೆಯಲು ಬಂದಿದ್ದ ತಂಗಿ ಗಂಡನೂ ಆಸ್ಪತ್ರೆಯಲ್ಲಿ ಸಾವು

February 4, 2026
28
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ವ್ಯಾಪಕ ಜನವಿರೋಧ ಹಿನ್ನೆಲೆ ಕುಂಬಳೆ ಟೋಲ್ ಗೇಟ್ ರದ್ದುಪಡಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ವ್ಯಾಪಕ ಜನವಿರೋಧ ಹಿನ್ನೆಲೆ ಕುಂಬಳೆ ಟೋಲ್ ಗೇಟ್ ರದ್ದುಪಡಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

February 4, 2026
ಮಂಜೇಶ್ವರ ; ತಂದೆಯ ಇರಿತದಿಂದ ಮಗಳು ಬಲಿ, ತಡೆಯಲು ಬಂದಿದ್ದ ತಂಗಿ ಗಂಡನೂ ಆಸ್ಪತ್ರೆಯಲ್ಲಿ ಸಾವು

ಮಂಜೇಶ್ವರ ; ತಂದೆಯ ಇರಿತದಿಂದ ಮಗಳು ಬಲಿ, ತಡೆಯಲು ಬಂದಿದ್ದ ತಂಗಿ ಗಂಡನೂ ಆಸ್ಪತ್ರೆಯಲ್ಲಿ ಸಾವು

February 4, 2026
ತೀವ್ರ ರಕ್ತದೊತ್ತಡ ; ಮಂಗಳೂರು ಸಿಎಆರ್ ಹೆಡ್ ಕಾನ್ಸ್ ಟೇಬಲ್ ಕುಸಿದು ಬಿದ್ದು ಸಾವು

ತೀವ್ರ ರಕ್ತದೊತ್ತಡ ; ಮಂಗಳೂರು ಸಿಎಆರ್ ಹೆಡ್ ಕಾನ್ಸ್ ಟೇಬಲ್ ಕುಸಿದು ಬಿದ್ದು ಸಾವು

February 3, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d