ಮೂಲ್ಕಿ: ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಮತ್ತು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಅಂತರ್ ಜಿಲ್ಲಾ ಆರೋಪಿಗಳನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದು ಚಿನ್ನಾಭರಣ ಸಹಿತ 7.63 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ದಾವಣಗೆರೆ ಜಿಲ್ಲೆಯವರಾಗಿದ್ದು, ಹೊನ್ನೂರು ಮಲಟ್ಟೆ ಹಳ್ಳಿ ಬಾಪೂಜಿ ಬಡಾವಣೆ ನಿವಾಸಿಗಳಾದ ರಘು ಎಸ್.(30), ಮಂಜುನಾಥ (28), ವಿನೋಬ ನಗರ ನಿವಾಸಿ ಪ್ರಮೋದ್ ವಿ.(23), ಅವರಗೆರೆ ಗೋಶಾಲೆ ಬಳಿಯ ನಿವಾಸಿ ಎಚ್.ರವಿಕಿರಣ್ (23), ಅವರಗೆರೆ ಪಿ.ಬಿ.ಬಡಾವಣೆ ನಿವಾಸಿ ದಾವಲ ಸಾಬ್ ಎಚ್. (25) ಬಂಧಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂಲ್ಕಿ ಠಾಣಾ ಪೊಲೀಸ್ ನಿರೀಕ್ಷಕ ವಿದ್ಯಾಧರ ಡಿ. ಬಾಯ್ಕರಿಕರ್, ಅವರು ಸಿಬಂದಿ ಜತೆ ಪುನರೂರು ಚೆಕ್‌ಪೋಸ್ಟ್ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಸಂಶಯಾಸ್ಪದವಾಗಿ ಬಂದ ಎರಡು ಬೈಕ್ ಮತ್ತು ಕಾರನ್ನು ನಿಲ್ಲಿಸಿ ವಿಚಾರಣೆಗೊಳಪಡಿಸಿದಾಗ ದರೋಡೆ ಮತ್ತು ಕಳ್ಳತನ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳಿಂದ ಕಳವು ಮಾಡಿದ್ದ ಒಂದು ಹೋಂಡಾ, 1 ರಾಯಲ್ ಎನ್ ಫೀಲ್ಡ್, 1 ಕಾರು ಮತ್ತು ತುಂಡಾದ ಕರಿಮಣಿ ಸರ ಸೇರಿ ಒಟ್ಟು 7.63 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣ ಇನ್ನೋರ್ವ ಆರೋಪಿ ದಾವಣಗೆರೆಯ ರಘುನನ್ನು ಈ ಹಿಂದೆ ಬಂಧಿಸಲಾಗಿತ್ತು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಇತರ ಆರೋಪಿಗಳ ಮಾಹಿತಿ ನೀಡಿದ್ದ. ದಾವಣಗೆರೆಯ ಪ್ರಮೋದ್, ಎಚ್. ರವಿಕಿರಣ್, ದಾವಲ ಸಾಬ್ ಎಚ್. ಮತ್ತು ಮಂಜುನಾಥ್‌ನನ್ನು ಮಂಗಳವಾರ ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಅವರಲ್ಲಿ ಇಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವಿದ್ಯಾಧರ ಡಿ ಬಾಯ್ಕರಿಕರ್, ಪಿ.ಎಸ್.ಐಗಳಾದ ವಿನಾಯಕ ಬಾವಿಕಟ್ಟಿ, ಮಾರುತಿ ಪಿ., ಎ.ಎಸ್.ಐ.ಗಳಾದ ಸಂಜೀವ, ಉಮೇಶ್, ಸುರೇಶ್ ಕುಂದರ್ ಎಚ್.ಸಿ.ಗಳಾದ ಕಿಶೋರ್ ಕುಮಾರ್, ಶಶಿಧರ, ಮಹೇಶ್, ಪ್ರಮೋದ್, ಚಂದ್ರಶೇಖರ್, ವಿಶ್ವನಾಥ, ಉದಯ್, ಜಯರಾಮ್, ಸತೀಶ್, ಪವನ್ ಮತ್ತು ಪಿ.ಸಿ.ಗಳಾದ ಅರುಣ್ ಕುಮಾರ್, ವಾಸುದೇವ, ವಿನಾಯಕ, ಶಂಕರ, ಚಿತ್ರಾ, ಚೆಲುವರಾಜ್, ಶೇಖರ, ಯಶವಂತ್, ಬಸವರಾಜ್, ಸುರೇಂದ್ರ, ಅಂಜಿನಪ್ಪ, ಇಮಾಮ್, ಶರಣಪ್ಪ ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post