• About us
  • Contact us
  • Disclaimer
Saturday, February 28, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ನಿಂದ ಸಾಂತ್ವನದ ಸಂಚಾರ 3.0

Coastal Times by Coastal Times
December 4, 2025
in ಕರಾವಳಿ
ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ನಿಂದ ಸಾಂತ್ವನದ ಸಂಚಾರ 3.0
51
VIEWS
WhatsappTelegramShare on FacebookShare on Twitter

ಮಂಗಳೂರು, ಡಿ. 04 : ವರ್ಷಂಪ್ರತಿ ಆಯೋಜಿಸುವ ವಿಶೇಷ ಪರಿಕಲ್ಪನೆಯ ‘ಸಾಂತ್ವನದ ಸಂಚಾರ’ ಕಾರ್ಯಕ್ರಮವು ಡಿಸೆಂಬರ್ 7ರ ರವಿವಾರ ನಡೆಯಲಿದೆ ಎಂದು ಕೋಸ್ಟಲ್ ಫ್ರೆಂಡ್ಸ್ ಅಧ್ಯಕ್ಷ ಷರೀಫ್ ಅಬ್ಬಾಸ್ ವಳಾಲು ಹೇಳಿದ್ದಾರೆ. ಅವರು ಗುರುವಾರ ಮಧ್ಯಾಹ್ನ ಪಂಪ್ ವೆಲ್ ನಲ್ಲಿ ಖಾಸಗಿ ಹೊಟೇಲ್ ಹಾಲಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

2023ರಲ್ಲಿ ಮೊದಲ ವರ್ಷದ `ಸಾಂತ್ವನದ ಸಂಚಾರ’ (A Day with Bedridden) ಮತ್ತು 2024ರಲ್ಲಿ `ಸಾಂತ್ವನದ ಸಂಚಾರ’ (A day with orphans) ಯಶಸ್ವಿಯಾಗಿ ನಡೆದಿತ್ತು. ಎರಡು ವರ್ಷಗಳ ಹಿಂದೆ ಹಾಸಿಗೆ ಪೀಡಿತರ ಜೊತೆ ಆರಂಭವಾದ ನಮ್ಮ ಸಾಂತ್ವನದ ಸಂಚಾರವು ಕಳೆದ ಬಾರಿ ಅನಾಥ ಮಕ್ಕಳ ಜೊತೆ ಮುಂದುವರಿದು ಈ ಬಾರಿ ವಿಶೇಷ ಚೇತನ ಮಕ್ಕಳ ಜೊತೆ ಸಾಗಲಿದೆ ಅಂದರು. ಇನ್ನು ಸಾಂತ್ವನದ ಸಂಚಾರ 3.O ( A Day with Special Kids)’ ಹೆಸರಿನ ಕಾರ್ಯಕ್ರಮ ಡಿಸೆಂಬರ್ 7ರ ಭಾನುವಾರ ಮಂಗಳೂರಿನಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ 100 ವಿಶೇಷ ಚೇತನ ಮಕ್ಕಳನ್ನು ಸಾಂತ್ವನದ ಸಂಚಾರಕ್ಕೆ ಆಯ್ದುಕೊಂಡಿದ್ದೇವೆ. (ಎರಡು ಕೇಂದ್ರಗಳಿಂದ 90 ಮಕ್ಕಳು ಮತ್ತು ಹೊರಗಿನಿಂದ 10 ಮಕ್ಕಳು) ಎಂದು ಮಾಹಿತಿ ನೀಡಿದರು.

ಇಬ್ಬರು ಮಕ್ಕಳಿಗೆ ಒಬ್ಬರಂತೆ 100 ಮಕ್ಕಳಿಗೆ 50 ಮಂದಿ ಕೇರ್ ಟೇಕರ್ಸ್ ನಿಯೋಜಿಸಲಾಗಿದೆ ಮತ್ತು CFM ಸಂಸ್ಥೆಯ 60 ಮಂದಿ ಸದಸ್ಯರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. 4 ಬಸ್‌ಗಳಲ್ಲಿ ವಿಶೇಷ ಚೇತನ ಮಕ್ಕಳ ಸಂಚಾರ ನಡೆಯಲಿದ್ದು, ತುರ್ತು ಸೇವೆಗಾಗಿ ಎರಡು ಅಂಬುಲೆನ್ಸ್, ಇಬ್ಬರು ವೈದ್ಯರು ಮತ್ತು ಒಬ್ಬರು ಫಿಸಿಯೋ ಥೆರಪಿಸ್ಟ್ ಇರುತ್ತಾರೆ. ವಿಶೇಷ ಚೇತನ ಮಕ್ಕಳು ಮತ್ತು ಸಂಸ್ಥೆಯ ಸದಸ್ಯರಿಗೆ ಸಮವಸ್ತ್ರ ಮಾದರಿ ಟಿ-ಶರ್ಟ್ ವಿತರಿಸಲಾಗುವುದು ಎಂದರು.

ಸಮಾರೋಪ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯಾ ಜೋಕಟ್ಟೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಕೆ ಕುಕ್ಕಿಲ, ಝಿಯಾ ವೆಲ್‌ನೆಸ್, ಮಹಮ್ಮದ್ ಉಚ್ಷಿಲ, ಹಸೈನಾರ್ ತಾಳಿತ್ತನೂಜಿ ಮತ್ತು ಉಬಾರ್ ಡೋನರ್ಸ್ ಇವರನ್ನು ಸನ್ಮಾನಿಸಲಾಗುವುದು.

ಸುದ್ದಿಗೋಷ್ಠಿಯಲ್ಲಿ ಶೌಕತ್ ಅಲಿ, CFM ಪ್ರಧಾನ ಕಾರ್ಯದರ್ಶಿ, ಅಫ್ತಾಬ್ ಬಸ್ತಿಕಾರ್, ಕಾರ್ಯಕ್ರಮದ ಪ್ರಧಾನ ಸಂಚಾಲಕರು, ಮುನ್ನ ಕಮ್ಮರಡಿ, ಕಾರ್ಯಕ್ರಮದ ಸಂಚಾಲಕರು, ಜುನೈದ್ ಬಂಟ್ವಾಳ, CFM ಕಾರ್ಯದರ್ಶಿ, ಇಮ್ತಿಯಾಝ್ ಎಸ್.ಎಂ, CFM ಖಜಾಂಚಿ, ಸಮೀರ್ ಲಕ್ಕಿಸ್ಟಾರ್, CFM ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಸಾಂತ್ವನದ ಸಂಚಾರ 3.O ( A Day with Special Kids) ಕಾರ್ಯಕ್ರಮದ ವಿವರ :

8.30 -9.30 AM – ಉಪಹಾರ ಹೋಟೆಲ್ BMS, ಕುಂಟಿಕಾನ
🌸 Grand Welcome
🎺 Band Set Welcome
🧸 Big Dolls Parade
🎁 Gift Distribution ( Sunglasses & Caps)

9.30 AM – ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರಿಂದ
ಸಾಂತ್ವನದ ಸಂಚಾರಕ್ಕೆ ಚಾಲನೆ

10 AM to 12.30PM – ಪಿಲಿಕುಳ ನಿಸರ್ಗಧಾಮದಲ್ಲಿ ಸುತ್ತಾಟ

ಬಳಿಕ ಪಿಲಿಕುಳದಿಂದ ಜೆಪ್ಪು ಬೋಳಾರದಲ್ಲಿರುವ ಪಾಲೆಮಾರ್ ಗಾರ್ಡನ್‌ಗೆ ಪ್ರಯಾಣ

1 to 2 PM : ಲಂಚ್, ಪಾಲೇಮಾರ್ ಗಾರ್ಡನ್

2.30 – 3.30PM : ಸ್ವಿಮ್ಮಿಂಗ್ ಪೂಲ್‌ನಲ್ಲಿ ಚಟುವಟಿಕೆ

3.30 – 6.30 PM
ಗೇಮ್ಸ್, ಮನರಂಜನಾ ಚಟುವಟಿಕೆ, ವಿವಿಧ ಸ್ಪರ್ಧೆ ಮತ್ತು ಡ್ಯಾನ್ಸ್

🍕 Live Pizza Counter
🎆 Cracker Show
🍿 Popcorn & Sweet Corn Corner
💦 Water Balloon Fun
🎨 Drawing Zone
📸 Selfie Counter

6:30 – 7:30 pm : ಸಮಾರೋಪ ಕಾರ್ಯಕ್ರಮ

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಶಿವಗಿರಿ ಮಠಕ್ಕೆ 5 ಎಕರೆ ಜಮೀನು ಸಿಎಂ ಘೋಷಣೆ

Next Post

ಕಿನ್ನಿಗೋಳಿಯ ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಬ್ಯಾಂಕ್ ಮ್ಯಾನೇಜರ್ ಪ್ರಜ್ಞೆಯಿಂದ ಉಳಿಯಿತು 84 ಲಕ್ಷ ಹಣ !

Related Posts

ಎಪಿಕೆ ಫೈಲ್ ಡೌನ್ಲೋಡ್ ಮಾಡಿ ಆನ್‌ಲೈನ್ ಹೂಡಿಕೆ ಮಾಡಿ ಹೆಚ್ಚಿನ ಲಾಭದ ಆಮಿಷ ಮಂಗಳೂರಿನ ಮಹಿಳೆಗೆ 19.06 ಲಕ್ಷ ರೂ. ವಂಚನೆ
ಕರಾವಳಿ

ಎಪಿಕೆ ಫೈಲ್ ಡೌನ್ಲೋಡ್ ಮಾಡಿ ಆನ್‌ಲೈನ್ ಹೂಡಿಕೆ ಮಾಡಿ ಹೆಚ್ಚಿನ ಲಾಭದ ಆಮಿಷ ಮಂಗಳೂರಿನ ಮಹಿಳೆಗೆ 19.06 ಲಕ್ಷ ರೂ. ವಂಚನೆ

February 25, 2026
32
‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ
ಕರಾವಳಿ

‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ

February 24, 2026
29
Next Post
ಕಿನ್ನಿಗೋಳಿಯ ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಬ್ಯಾಂಕ್ ಮ್ಯಾನೇಜರ್ ಪ್ರಜ್ಞೆಯಿಂದ ಉಳಿಯಿತು 84 ಲಕ್ಷ ಹಣ !

ಕಿನ್ನಿಗೋಳಿಯ ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಬ್ಯಾಂಕ್ ಮ್ಯಾನೇಜರ್ ಪ್ರಜ್ಞೆಯಿಂದ ಉಳಿಯಿತು 84 ಲಕ್ಷ ಹಣ !

Discussion about this post

Recent News

ಬೆಳ್ತಂಗಡಿ: ಮನೆಯಲ್ಲೇ ಅಕ್ರಮ ಗೋಹತ್ಯೆ, 56 ಕೇಜಿ ಗೋಮಾಂಸ ಪತ್ತೆ ; ಪೊಲೀಸರಿಂದ ಆರೋಪಿಯ ಮನೆ ಜಪ್ತಿ

ಬೆಳ್ತಂಗಡಿ: ಮನೆಯಲ್ಲೇ ಅಕ್ರಮ ಗೋಹತ್ಯೆ, 56 ಕೇಜಿ ಗೋಮಾಂಸ ಪತ್ತೆ ; ಪೊಲೀಸರಿಂದ ಆರೋಪಿಯ ಮನೆ ಜಪ್ತಿ

February 27, 2026
39
ಅಮೆರಿಕನ್ ಕಮೊಡಿಟೀಸ್‌ ಹೆಸರಿನಲ್ಲಿ ಹೂಡಿಕೆ ; ಮಂಗಳೂರಿನ ಹಿರಿಯ ವ್ಯಕ್ತಿಗೆ 1.77 ಕೋಟಿ ರೂ. ಆನ್‌ಲೈನ್ ವಂಚನೆ

ಅಮೆರಿಕನ್ ಕಮೊಡಿಟೀಸ್‌ ಹೆಸರಿನಲ್ಲಿ ಹೂಡಿಕೆ ; ಮಂಗಳೂರಿನ ಹಿರಿಯ ವ್ಯಕ್ತಿಗೆ 1.77 ಕೋಟಿ ರೂ. ಆನ್‌ಲೈನ್ ವಂಚನೆ

February 27, 2026
9
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬೆಳ್ತಂಗಡಿ: ಮನೆಯಲ್ಲೇ ಅಕ್ರಮ ಗೋಹತ್ಯೆ, 56 ಕೇಜಿ ಗೋಮಾಂಸ ಪತ್ತೆ ; ಪೊಲೀಸರಿಂದ ಆರೋಪಿಯ ಮನೆ ಜಪ್ತಿ

ಬೆಳ್ತಂಗಡಿ: ಮನೆಯಲ್ಲೇ ಅಕ್ರಮ ಗೋಹತ್ಯೆ, 56 ಕೇಜಿ ಗೋಮಾಂಸ ಪತ್ತೆ ; ಪೊಲೀಸರಿಂದ ಆರೋಪಿಯ ಮನೆ ಜಪ್ತಿ

February 27, 2026
ಅಮೆರಿಕನ್ ಕಮೊಡಿಟೀಸ್‌ ಹೆಸರಿನಲ್ಲಿ ಹೂಡಿಕೆ ; ಮಂಗಳೂರಿನ ಹಿರಿಯ ವ್ಯಕ್ತಿಗೆ 1.77 ಕೋಟಿ ರೂ. ಆನ್‌ಲೈನ್ ವಂಚನೆ

ಅಮೆರಿಕನ್ ಕಮೊಡಿಟೀಸ್‌ ಹೆಸರಿನಲ್ಲಿ ಹೂಡಿಕೆ ; ಮಂಗಳೂರಿನ ಹಿರಿಯ ವ್ಯಕ್ತಿಗೆ 1.77 ಕೋಟಿ ರೂ. ಆನ್‌ಲೈನ್ ವಂಚನೆ

February 27, 2026
ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

February 26, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d