ಮಂಗಳೂರು: ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಶಿವಗಿರಿ ಮಠದ ಶಾಖೆ ನಿರ್ಮಾಣಕ್ಕೆ ಐದು ಎಕರೆ ಜಮೀನು ನೀಡಬೇಕೆಂದು ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿಯವರು ಪ್ರಸ್ತಾಪಿಸಿದ್ದು, ಸಂಬಂಧಪಟ್ಟವರು ಜಾಗ ಗುರುತಿಸಿದಲ್ಲಿ ಸರಕಾರದ ವತಿಯಿಂದ ಜಮೀನು ಮಂಜೂರು ಮಾಡಲಾಗುವುದೆಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಶಿವಗಿರಿ ಮಠ ವರ್ಕಲ ಮತ್ತು ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಆಶ್ರಯದಲ್ಲಿ ವಿ.ವಿ. ಕ್ಯಾಂಪಸ್ ನಲ್ಲಿ ಬುಧವಾರ ಆಯೋಜಿಸಲಾದ ಶತಮಾನದ ಮಹಾಪ್ರಸ್ಥಾನ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮಾಗಾಂಧಿ ಐತಿಹಾಸಿಕ ಗುರು-ಗಾಂಧಿ ಸಂವಾದ ಶತಮಾನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾರಾಯಣ ಗುರುಗಳು ಜಾತ್ಯಾತೀತರಾಗಿದ್ದು ಒಂದು ಜಾತಿ, ಒಂದು ಮತ, ಒಂದೇ ದೇವರೆಂಬ ಸಂದೇಶವನ್ನ ಜೀವನದುದ್ದಕ್ಕೂ ಸಾರಿದವರು. ಗುರುಗಳು ತಾವು ನಂಬಿರುವ ವಿಚಾರಗಳನ್ನ ಗಾಂಧಿ-ಗುರು ಸಂವಾದದಲ್ಲಿ ಗಾಂಧೀಜಿ ಮುಂದೆ ಮಂಡಿಸಿದ್ದರು. ಜಾತಿ ವ್ಯವಸ್ಥೆ ಎಂಬುದು ಈಗಲೂ ಸಮಾಜದಲ್ಲಿ ಚಾಲನೆಯಲ್ಲಿದೆ. ಈ ವ್ಯವಸ್ಥೆ ಬದಲಾವಣೆ ಆಗಬೇಕಾದರೆ ಮನುಷತ್ವ ಕೂಡಿದ ಸಮಾಜ ಕಟ್ಟುವ ಕೆಲಸ ಮಾಡಬೇಕಿದೆ. ಯಾವ ಧಾರ್ಮಿಕ ಕ್ಷೇತ್ರಕ್ಕೆ ಪ್ರವೇಶ ನಿರಾಕರಿಸುತ್ತಾರೋ ಅಂತಹ ಕ್ಷೇತ್ರಗಳಿಗೆ ಹೋಗದೆ, ನೀವೇ ದೇವಸ್ಥಾನ ಕಟ್ಟಿ ನೀವೇ ಪೂಜಾರಿ ಆಗಿಯೆಂದು ಸಮಾನತೆಯ ಸಂದೇಶ ಸಾರಿ ದೇಶದಲ್ಲೇ ಹೊಸ ಇತಿಹಾಸ ನಿರ್ಮಿಸಿದ ಮಹಾನ್ ವ್ಯಕ್ತಿ ನಾರಾಯಣ ಗುರುಗಳಾಗಿದ್ದಾರೆ.


ಶಿವಗಿರಿ ಮಠದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕೇರಳ ಹಾಗೂ ಇತರ ರಾಜ್ಯಗಳು ಮತ್ತು ವಿದೇಶಗಳಲ್ಲಿ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಅನೇಕ ದೇವಾ ಲಯಗಳು ಮತ್ತು ಸಂಸ್ಥೆಗಳು ಇವೆ. ಗುರುಗಳು 100 ವರ್ಷಗಳ ಹಿಂದೆ ಮಂಗಳೂರಿಗೆ ಭೇಟಿ ನೀಡಿ ಶ್ರೀ ಗೋಕರ್ಣನಾಥ ದೇವಸ್ಥಾನ ಸ್ಥಾಪಿಸಿದರು ಎಂದು ಹೇಳಿದ ಅವರು, ದಕ್ಷಿಣ ಕನ್ನಡದಲ್ಲಿ ಮಠ ಸ್ಥಾಪನೆಗೆ
ಐದು ಎಕ್ರೆ ಭೂಮಿ ಅಗತ್ಯವಿದೆ. ಜತೆಗೆ ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿಯವರ ಐತಿಹಾಸಿಕ ಸಭೆಯ ಶತಮಾನೋತ್ಸವದ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆಗೆ ಸಂಸತ್ತಿನಲ್ಲಿ ಆಗ್ರಹಿಸುವಂತೆ ಕೆ.ಸಿ. ವೇಣು ಗೋಪಾಲ್ ಅವರನ್ನು ವಿನಂತಿಸಿದರು.
ಕಾರ್ಯಕ್ರಮದ ಕೇಂದ್ರ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಮಾತನಾಡಿ, 2013ರಲ್ಲಿ ಮಂಗಳೂರು ವಿವಿಯಲ್ಲಿ ನಾರಾಯಣ ಗುರುಗಳ ಪೀಠ ಸ್ಥಾಪನೆಗೆ ಮುಂದಾದಾಗ ನನ್ನ ಎಂಎಲ್ಸಿನಿಧಿಯಿಂದ 35 ಲಕ್ಷ ರೂ. ಒದಗಿಸಲಾಗಿತ್ತು. ಸಂಸದರಾಗಿದ್ದ ನಳಿನ್ ಕುಮಾರ್‌ಕಟೀಲು ಹಾಗೂ ವಿಧಾನ ಪರಿಷತ್ ಸದಸ್ಯರಾಗಿದ್ದ ಹರೀಶ್ ಕುಮಾರ್‌ತಲಾ 10 ಲಕ್ಷ ರೂ. ಒದಗಿಸಿದ್ದರು.ಅಧ್ಯಯನ ಪೀಠದ ಕಾರ್ಯಕ್ಕೆ 2 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದರು.
ಮಠದ ಕಾರ್ಯದರ್ಶಿ ಶುಭಾಂಗಾ ನಂದ ಸ್ವಾಮೀಜಿ, ಸಚಿವರಾದ ಡಾ| ಜಿ.ಪರಮೇಶ್ವರ್, ದಿನೇಶ್ ಗುಂಡೂ ರಾವ್, ಲಕ್ಷಿ ¾à ಹೆಬ್ಟಾಳ್ಕರ್, ಸತೀಶ್ ಜಾರಕಿಹೊಳಿ, ಜಮೀರ್‌ಅಹ್ಮದ್ ಖಾನ್, ಮಾಜಿ ಸಚಿವರಾದ ಬಿ. ಜನಾರ್ದನ ಪೂಜಾರಿ, ವಿನಯ್ ಕುಮಾರ್‌ಸೊರಕೆ, ಬಿ.ರಮಾನಾಥ ರೈ, ಅಭಯಚಂದ್ರ, ಶಾಸಕರಾದ ಅಶೋಕ್ ಕುಮಾರ್‌ರೈ, ಹರೀಶ್ ಪೂಂಜ, ರಾಜೇಶ್ ನಾಯ್ಕ, ಡಿ.ವೇದವ್ಯಾಸ ಕಾಮತ್, ಡಾ|ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿ’ಸೋಜಾ, ಕಾರ್ಯಕ್ರಮದ ಪ್ರಧಾನ ಸಂಚಾಲಕರಾದ ಪಿ.ವಿ. ಮೋಹನ್, ಮಂಜುನಾಥ್
ಪೂಜಾರಿ, ಸಂಚಾಲಕರಾದ ರಕ್ಷಿತ್ ಶಿವರಾಂ, ಕೆ.ಗೋಪಿ, ಪ್ರಮುಖರಾದ ಪದ್ಮರಾಜ್ ಆರ್.ಪೂಜಾರಿ, ಪ್ರತಿಭಾ ಕುಳಾಯಿ, ಹರೀಶ್ ಕುಮಾರ್, ಸದಾಶಿವ ಉಳ್ಳಾಲ್, ಶಶಿಧರ ಹೆಗ್ಡೆ, ನವೀನ್ ಚಂದ್ರ ಸುವರ್ಣ, ಎಂ.ಎ.ಗಫೂರ್, ವಿಶ್ವಾಸ್ ಕುಮಾರ್‌ದಾಸ್ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post