ಮಂಗಳೂರು, ಡಿ. 03 : ಡಿಸೆಂಬರ್ 13 ಮತ್ತು 14 ರಂದು ಮಂಗಳೂರು ವಕೀಲರ ಸಂಘದಿಂದ ಜಿಲ್ಲಾ ಮಟ್ಟದ ಕ್ರಿಕೆಟ್, ಥ್ರೋ ಬಾಲ್ ಪಂದ್ಯಾಟ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಅವರು ಈ ಕ್ರೀಡಾಕೂಟದ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಪಣಂಬೂರು ಎನ್ ಎಂ ಪಿ ಟಿ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ವಕೀಲರ ಕ್ರಿಕೆಟ್ ಹಾಗೂ ಥ್ರೋ ಬಾಲ್ ಪಂದ್ಯಾಟದದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಕೀಲರ ಸಂಘಗಳು ಭಾಗವಹಿಸಲಿವೆ.
ಈ ಸಂದರ್ಭದಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಎಚ್ ವಿ, ಪ್ರಧಾನ ಸರಕಾರಿ ಅಭಿಯೋಜಕರಾದ ಶ್ರೀ ಎಂ ಪಿ ನರೋನ್ಹ, ಶ್ರೀ ಟಿ ಎನ್ ಪೂಜಾರಿ, ಶ್ರೀ ಎಂ ಆರ್ ಬಲ್ಲಾಳ್, ಶ್ರೀ ಎಂ ಯಶವಂತ ಮರೋಳಿ, ಮಂಗಳೂರು ವಕೀಲರ ಸಂಘ ದ ಉಪಾಧ್ಯಕ್ಷರಾದ ಸುಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಚ್, ಜೊತೆ ಕಾರ್ಯದರ್ಶಿ ಶ್ರೀಮತಿ ಜ್ಯೋತಿ, ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ರಿಚರ್ಡ್ ಡಿಕೋಸ್ಟ, ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜಗನ್ನಾಥ ರೈ, ಮೂಡುಬಿದ್ರೆ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್, ಶ್ರೀಮತಿ ಸಮನಾ ಶರಣ್, ಶ್ರೀಮತಿ ಶಾಲಿನಿ, ಹಾಗೂ ದಕ್ಷ ಕನ್ನಡ ಜಿಲ್ಲಾ ಹಾಗೂ ಕರಾವಳಿ ಭಾಗದ ವಕೀಲರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post