• About us
  • Contact us
  • Disclaimer
Wednesday, November 25, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

15ರ ಹರೆಯದಲ್ಲೇ ವಿಶ್ವ ದಾಖಲೆ; ವೈಭವ್ ಬ್ಯಾಟ್‌ಗೆ ಬಲಿಯಾದ ಘಟಾನುಘಟಿ ದಾಖಲೆಗಳು..!

Coastal Times by Coastal Times
November 25, 2026
in ಕ್ರೀಡಾ ಸುದ್ದಿ
15ರ ಹರೆಯದಲ್ಲೇ ವಿಶ್ವ ದಾಖಲೆ; ವೈಭವ್ ಬ್ಯಾಟ್‌ಗೆ ಬಲಿಯಾದ ಘಟಾನುಘಟಿ ದಾಖಲೆಗಳು..!
1
VIEWS
WhatsappTelegramShare on FacebookShare on Twitter

ವೈಭವ್ ಸೂರ್ಯವಂಶಿ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಪಂದ್ಯದಲ್ಲಿ ಯುಎಇ ವಿರುದ್ಧ 53 ಎಸೆತಗಳಲ್ಲಿ 204 ರನ್ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಅವರು ಕೇವಲ 28 ಎಸೆತಗಳಲ್ಲಿ ಶತಕ, 52 ಎಸೆತಗಳಲ್ಲಿ ದ್ವಿಶತಕ ಬಾರಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಹಾಗೂ ದ್ವಿಶತಕ ದಾಖಲೆಗಳನ್ನು ಮುರಿದರು. ಇದೇ ಇನ್ನಿಂಗ್ಸ್‌ನಲ್ಲಿ 28 ಸಿಕ್ಸರ್‌ ಸಿಡಿಸಿ ಹೊಸ ದಾಖಲೆ ಬರೆದರು. ಭಾರತ ಎ ತಂಡವು 250 ರನ್ ಗುರಿಯನ್ನು ವೇಗವಾಗಿ ಬೆನ್ನಟ್ಟಿತು.

ವೈಭವ್ ಸೂರ್ಯವಂಶಿ ಅವರ ಬ್ಯಾಟ್ ಸದ್ದು ಮಾಡಲು ಶುರುಮಾಡಿದರೆ ಎದುರಾಳಿ ಬೌಲರ್‌ಗಳಿಗೆ ಉಳಿಗಾಲವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅವರ ಬ್ಯಾಟಿಂಗ್ ಅಬ್ಬರ ಈ ಮಟ್ಟಕ್ಕೆ ಇರಲಿದೆ ಎಂದು ಯಾರೂ ಊಹಿಸಿರಲಿಲ್ಲ. ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಯುಎಇ ವಿರುದ್ಧದ ಪಂದ್ಯದಲ್ಲಿ ವೈಭವ್ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಕೇವಲ ರನ್ ಗಳಿಸುವುದಷ್ಟೇ ಅಲ್ಲದೆ, ಕ್ರಿಕೆಟ್ ಇತಿಹಾಸದಲ್ಲಿದ್ದ ಹಲವು ದಾಖಲೆಗಳನ್ನು ಪುಡಿಪುಡಿ ಮಾಡಿದ್ದಾರೆ

ಯುಎಇ ನೀಡಿದ್ದ 250 ರನ್‌ಗಳ ಗುರಿ ಬೆನ್ನಟ್ಟಿದ ವೈಭವ್ ಸೂರ್ಯವಂಶಿ ಒಬ್ಬರೇ ಬರೋಬ್ಬರಿ 204 ರನ್ ಸಿಡಿಸಿದರು. ಅದೂ ಕೇವಲ 53 ಎಸೆತಗಳಲ್ಲಿ ಎಂಬುದು ವಿಶೇಷ. ಈ ಪಂದ್ಯದಲ್ಲಿ ವೈಭವ್ ಲಿಸ್ಟ್ ಎ ಕ್ರಿಕೆಟ್‌ನ ಶತಕ, 150 ರನ್, ದ್ವಿಶತಕ ಹಾಗೂ ಸಿಕ್ಸರ್‌ಗಳ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ದಾಖಲೆಗಳ ಸುರಿಮಳೆಯೇ ಹರಿದಿದೆ

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ: ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ದಾಖಲೆ ಇದೀಗ ವೈಭವ್ ಪಾಲಾಗಿದೆ. ಅವರು ಕೇವಲ 28 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಹಿಂದೆ ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್ 29 ಎಸೆತಗಳಲ್ಲಿ ಶತಕ ಸಿಡಿಸಿದ್ದು ದಾಖಲೆಯಾಗಿತ್ತು

ಕೇವಲ 40 ಎಸೆತಗಳಲ್ಲಿ 150 ರನ್: ಶತಕದ ಬಳಿಕವೂ ವೈಭವ್ ಅಬ್ಬರ ಕಡಿಮೆಯಾಗಲಿಲ್ಲ. ಕೇವಲ 40 ಎಸೆತಗಳಲ್ಲಿ 150 ರನ್‌ಗಳ ಗಡಿ ದಾಟಿದರು. ಈ ಮೂಲಕ ಈ ಹಿಂದೆ 59 ಎಸೆತಗಳಲ್ಲಿ 150 ರನ್ ಗಳಿಸಿದ್ದ ತಮ್ಮದೇ ದಾಖಲೆಯನ್ನು ಮುರಿದು ಹೊಸ ಇತಿಹಾಸ ಬರೆದರು

52 ಎಸೆತಗಳಲ್ಲಿ ದ್ವಿಶತಕ: ವೈಭವ್ ಅವರ ಬ್ಯಾಟಿಂಗ್ ಅಬ್ಬರಕ್ಕೆ ಮತ್ತೊಂದು ವಿಶ್ವದಾಖಲೆ ಸೇರ್ಪಡೆಯಾಯಿತು. ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಈ ಹಿಂದೆ ನ್ಯೂಜಿಲೆಂಡ್‌ನ ಚಾಡ್ ಬೋವ್ಸ್ 103 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದು ದಾಖಲೆಯಾಗಿತ್ತು. ಇದೀಗ ಆ ದಾಖಲೆಯನ್ನು ವೈಭವ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ

ಒಂದೇ ಇನ್ನಿಂಗ್ಸ್‌ನಲ್ಲಿ 28 ಸಿಕ್ಸರ್: ಲಿಸ್ಟ್ ಎ ಕ್ರಿಕೆಟ್‌ನ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನೂ ವೈಭವ್ ಮುರಿದಿದ್ದಾರೆ. 204 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 28 ಸಿಕ್ಸರ್ ಸಿಡಿಸಿದರು. ಈ ಹಿಂದೆ ಡಾರ್ಸಿ ಶಾರ್ಟ್ 23 ಸಿಕ್ಸರ್ ಬಾರಿಸಿದ್ದು ದಾಖಲೆಯಾಗಿತ್ತು

ವೇಗವಾಗಿ ಗುರಿ ಬೆನ್ನಟ್ಟಿದ ಭಾರತ ಎ: ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡ ಕೇವಲ 14.2 ಓವರ್‌ಗಳಲ್ಲಿ 250 ರನ್‌ಗಳ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸಿತು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಅತಿ ವೇಗವಾಗಿ ಬೆನ್ನಟ್ಟಿದ ದಾಖಲೆಯನ್ನು ನಿರ್ಮಿಸಿತು. ಇದಕ್ಕೂ ಮೊದಲು 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು 20 ಓವರ್‌ಗಳಲ್ಲಿ ಬೆನ್ನಟ್ಟಿದ್ದು ದಾಖಲೆಯಾಗಿತ್ತು

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು ನೈಟ್ ಲೈಫ್‌ಗೆ ಗ್ರೀನ್ ಸಿಗ್ನಲ್: 11.45ರ ವರೆಗೂ ಹೊಟೇಲ್, ರೆಸ್ಟೋರೆಂಟ್ ನಡೆಸಲು ಅವಕಾಶ, ಕಮಿಷನರ್ ಸುಧೀರ್ ರೆಡ್ಡಿ ಆದೇಶ

Related Posts

ಸರ್ವಾಂಗಾಸನವನ್ನು ನಿರಂತರ 32 ನಿಮಿಷಗಳ ಕಾಲ ಮಾಡುವ ಮೂಲಕ ಆಳ್ವಾಸ್ ವಿದ್ಯಾರ್ಥಿ ಪಿಕೆ ವಿಕಾಸ್ ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಿಂದ ವಿಶ್ವ ದಾಖಲೆ ಮಾನ್ಯತೆ ಪಡೆದಿದ್ದಾರೆ.
ಕರಾವಳಿ

ಸರ್ವಾಂಗಾಸನವನ್ನು ನಿರಂತರ 32 ನಿಮಿಷಗಳ ಕಾಲ ಮಾಡುವ ಮೂಲಕ ಆಳ್ವಾಸ್ ವಿದ್ಯಾರ್ಥಿ ಪಿಕೆ ವಿಕಾಸ್ ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಿಂದ ವಿಶ್ವ ದಾಖಲೆ ಮಾನ್ಯತೆ ಪಡೆದಿದ್ದಾರೆ.

October 5, 2026
32
ಮಂಗಳೂರು: ಏಷ್ಯನ್ ಗೇಮ್ಸ್‌ನ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಬಿಜೆಪಿಯಿಂದ ಅಭಿನಂದನೆ
ಕ್ರೀಡಾ ಸುದ್ದಿ

ಮಂಗಳೂರು: ಏಷ್ಯನ್ ಗೇಮ್ಸ್‌ನ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಬಿಜೆಪಿಯಿಂದ ಅಭಿನಂದನೆ

October 3, 2026
27

Discussion about this post

Recent News

15ರ ಹರೆಯದಲ್ಲೇ ವಿಶ್ವ ದಾಖಲೆ; ವೈಭವ್ ಬ್ಯಾಟ್‌ಗೆ ಬಲಿಯಾದ ಘಟಾನುಘಟಿ ದಾಖಲೆಗಳು..!

15ರ ಹರೆಯದಲ್ಲೇ ವಿಶ್ವ ದಾಖಲೆ; ವೈಭವ್ ಬ್ಯಾಟ್‌ಗೆ ಬಲಿಯಾದ ಘಟಾನುಘಟಿ ದಾಖಲೆಗಳು..!

November 25, 2026
1
ಮಂಗಳೂರು ನೈಟ್ ಲೈಫ್‌ಗೆ ಗ್ರೀನ್ ಸಿಗ್ನಲ್: 11.45ರ ವರೆಗೂ ಹೊಟೇಲ್, ರೆಸ್ಟೋರೆಂಟ್ ನಡೆಸಲು ಅವಕಾಶ, ಕಮಿಷನರ್ ಸುಧೀರ್ ರೆಡ್ಡಿ ಆದೇಶ

ಮಂಗಳೂರು ನೈಟ್ ಲೈಫ್‌ಗೆ ಗ್ರೀನ್ ಸಿಗ್ನಲ್: 11.45ರ ವರೆಗೂ ಹೊಟೇಲ್, ರೆಸ್ಟೋರೆಂಟ್ ನಡೆಸಲು ಅವಕಾಶ, ಕಮಿಷನರ್ ಸುಧೀರ್ ರೆಡ್ಡಿ ಆದೇಶ

November 24, 2026
41
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

15ರ ಹರೆಯದಲ್ಲೇ ವಿಶ್ವ ದಾಖಲೆ; ವೈಭವ್ ಬ್ಯಾಟ್‌ಗೆ ಬಲಿಯಾದ ಘಟಾನುಘಟಿ ದಾಖಲೆಗಳು..!

15ರ ಹರೆಯದಲ್ಲೇ ವಿಶ್ವ ದಾಖಲೆ; ವೈಭವ್ ಬ್ಯಾಟ್‌ಗೆ ಬಲಿಯಾದ ಘಟಾನುಘಟಿ ದಾಖಲೆಗಳು..!

November 25, 2026
ಮಂಗಳೂರು ನೈಟ್ ಲೈಫ್‌ಗೆ ಗ್ರೀನ್ ಸಿಗ್ನಲ್: 11.45ರ ವರೆಗೂ ಹೊಟೇಲ್, ರೆಸ್ಟೋರೆಂಟ್ ನಡೆಸಲು ಅವಕಾಶ, ಕಮಿಷನರ್ ಸುಧೀರ್ ರೆಡ್ಡಿ ಆದೇಶ

ಮಂಗಳೂರು ನೈಟ್ ಲೈಫ್‌ಗೆ ಗ್ರೀನ್ ಸಿಗ್ನಲ್: 11.45ರ ವರೆಗೂ ಹೊಟೇಲ್, ರೆಸ್ಟೋರೆಂಟ್ ನಡೆಸಲು ಅವಕಾಶ, ಕಮಿಷನರ್ ಸುಧೀರ್ ರೆಡ್ಡಿ ಆದೇಶ

November 24, 2026
ಕಾವೂರು: ಕೆಲಸ ಮಾಡಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕನನ್ನು ಕೊಂದವನಿಗೆ ಜೀವಾವಧಿ ಶಿಕ್ಷೆ

ಕಾವೂರು: ಕೆಲಸ ಮಾಡಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕನನ್ನು ಕೊಂದವನಿಗೆ ಜೀವಾವಧಿ ಶಿಕ್ಷೆ

November 22, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d