• About us
  • Contact us
  • Disclaimer
Wednesday, July 29, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸ್ನೇಹಿತನೊಂದಿಗೆ ಸರಸ, ಸಂಸಾರದಲ್ಲಿ ವಿರಸ: ನಡುರಸ್ತೆಯಲ್ಲೇ ಚಾಕು ಇರಿದು ಪತ್ನಿಯ ಅಮಾನುಷ ಹತ್ಯೆ

Coastal Times by Coastal Times
February 5, 2025
in ಕ್ರೈಮ್ ನ್ಯೂಸ್
ಸ್ನೇಹಿತನೊಂದಿಗೆ ಸರಸ, ಸಂಸಾರದಲ್ಲಿ ವಿರಸ: ನಡುರಸ್ತೆಯಲ್ಲೇ ಚಾಕು ಇರಿದು ಪತ್ನಿಯ ಅಮಾನುಷ ಹತ್ಯೆ
177
VIEWS
WhatsappTelegramShare on FacebookShare on Twitter

ಬೆಂಗಳೂರು, ಫೆ.5: ಪತ್ನಿಯ ಶೀಲ ಶಂಕಿಸಿ ನಡುರಸ್ತೆಯಲ್ಲೇ ಚಾಕು ಇರಿದು ಪತಿಯೇ ಅಮಾನುಷವಾಗಿ ಕೊಲೆಗೈದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದಿದೆ.

ಮಗುವನ್ನ ಶಾಲೆಗೆ ಬಿಡಲು ಬಂದಿದ್ದ ಪತ್ನಿಯ ಮೇಲೆ ಪತಿ ಅಟ್ಯಾಕ್ ಮಾಡಿದ್ದು ಏಳೆಂಟು ಬಾರಿ ಚಾಕು ಇರಿದಿದ್ದಾನೆ. ತೀವ್ರ ಗಾಯಗೊಂಡು ನೆಲದಲ್ಲಿ ಕುಸಿದು ಬಿದ್ದ ಮಹಿಳೆ ಶ್ರೀಗಂಗಾ(29) ಸಾವನ್ನಪ್ಪಿದ್ದಾಳೆ. ಮೋಹನ್ ರಾಜು(32) ಪತ್ನಿಯನ್ನ ಕೊಲೆಗೈದ ದುರುಳ ವ್ಯಕ್ತಿ.

ಇವರು ಹೆಬ್ಬಗೋಡಿಯ ತಿರುಪಾಳ್ಯ ನಿವಾಸಿಗಳಾಗಿದ್ದು ಮದುವೆಯಾಗಿ ಏಳು ವರ್ಷಗಳಾಗಿದ್ದವು. ಇವರಿಗೆ ಆರು ವರ್ಷದ ಮಗನಿದ್ದು ಘಟನೆ ಸಂದರ್ಭದಲ್ಲಿ ಶಾಲೆಗೆ ಹೋಗಿದ್ದ. ಪತಿ ಮೋಹನ್ ರಾಜ್ ತನ್ನ ಸ್ನೇಹಿತನ ಜೊತೆಗೆ ಪತ್ನಿ ಗಂಗಾ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆಂದು ಶಂಕೆಯಲ್ಲಿ ಎರಡು- ಮೂರು ವರ್ಷದಿಂದ ಗಲಾಟೆ ಮಾಡುತ್ತಿದ್ದ. ಗಲಾಟೆಯಿಂದಾಗಿ ಕಳೆದ ಎಂಟು ತಿಂಗಳಿನಿಂದ ಪತಿ, ಪತ್ನಿ ದೂರವಾಗಿಯೇ ನೆಲೆಸಿದ್ದರು.

ನಿನ್ನೆ ರಾತ್ರಿ ಮಗುವನ್ನ ನೋಡಲು ಪತಿ ಮೋಹನ್ ರಾಜ್ ಪತ್ನಿಯಿದ್ದ ಮನೆಗೆ ಬಂದಿದ್ದ. ಆದರೆ ಆಗಲೂ ಮತ್ತೆ ಪತಿ – ಪತ್ನಿ ನಡುವೆ ಗಲಾಟೆ ನಡೆದಿತ್ತು. ಇದರಿಂದ ಸಿಟ್ಟಾಗಿದ್ದ ಮೋಹನ್ ಬೆಳಗ್ಗೆ ಮಗುವನ್ನ ಶಾಲೆಗೆ ಬಿಡಲು ಸ್ಕೂಟರ್ ನಲ್ಲಿ ಬಂದಿದ್ದ ಶ್ರೀಗಂಗಾಳನ್ನು ಕೊಲ್ಲಲೆಂದೇ ಕಾದು ಕುಳಿತಿದ್ದು ಚೂರಿಯಿಂದ ದಾಳಿ ನಡೆಸಿದ್ದಾನೆ. ಗಂಭೀರ ಗಾಯಗೊಂಡು ಕುಸಿದು ಬಿದ್ದಿದ್ದ ಮಹಿಳೆಯನ್ನ ಆಸ್ಪತ್ರೆಗೆ ಒಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಶ್ರೀಗಂಗಾ ಕೆಲ ಹೊತ್ತಿನಲ್ಲಿಯೇ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ಆರೋಪಿ ಮೋಹನ್ ರಾಜ್ ನನ್ನು ಬಂಧಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಫೆ. 4 ಇಂದು ಮಂಗಳೂರು ‘ಕೊಡಿಯಾಲ್‌ ತೇರು’

Next Post

ಬ್ಯಾಂಕ್, ಹಣಕಾಸು ಸಂಸ್ಥೆ, ಆಭರಣ ಸಂಸ್ಥೆಗಳಿಗೆ ಸುರಕ್ಷತಾ ಕ್ರಮದ ಬಗ್ಗೆ ಪೊಲೀಸ್ ಕಮೀಷನರ್ ಅನುಪಮ್​ ಅಗರ್ವಾಲ್ ಸಲಹೆ

Related Posts

ಬಂಟ್ವಾಳ: ಚಿನ್ನದಾಸೆಗೆ ವೃದ್ಧ ಮಹಿಳೆಗೆ ವಿಷವುಣಿಸಿ, ಉಸಿರುಗಟ್ಟಿಸಿ ಕೊಲೆ ಪ್ರಕರಣ; ಮೂವರಿಗೆ ಜೀವಾವಧಿ ಶಿಕ್ಷೆ
ಕ್ರೈಮ್ ನ್ಯೂಸ್

ಬಂಟ್ವಾಳ: ಚಿನ್ನದಾಸೆಗೆ ವೃದ್ಧ ಮಹಿಳೆಗೆ ವಿಷವುಣಿಸಿ, ಉಸಿರುಗಟ್ಟಿಸಿ ಕೊಲೆ ಪ್ರಕರಣ; ಮೂವರಿಗೆ ಜೀವಾವಧಿ ಶಿಕ್ಷೆ

July 29, 2026
8
ಬಂಟ್ವಾಳ ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಪೊಲೀಸ್ ಬಲೆಗೆ; ಸಿಕ್ಕಿಬೀಳುವ ಭೀತಿಯಲ್ಲಿ ಇಲಿ ಪಾಷಾಣ ಸೇವಿಸಿ ಆಸ್ಪತ್ರೆ ಪಾಲು!
ಕ್ರೈಮ್ ನ್ಯೂಸ್

ಬಿಸಿ ರೋಡ್​ನ ಬಸ್ ನಿಲ್ದಾಣದಲ್ಲಿ ಯುವತಿ ಹತ್ಯೆಗೈದ ಆರೋಪಿ ಚೇತನ್ 11 ದಿನಗಳ ಚಿಕಿತ್ಸೆಯ ಬಳಿಕ ಪೊಲೀಸ್ ವಶಕ್ಕೆ

July 28, 2026
27
Next Post
ಬ್ಯಾಂಕ್, ಹಣಕಾಸು ಸಂಸ್ಥೆ, ಆಭರಣ ಸಂಸ್ಥೆಗಳಿಗೆ ಸುರಕ್ಷತಾ ಕ್ರಮದ ಬಗ್ಗೆ ಪೊಲೀಸ್ ಕಮೀಷನರ್ ಅನುಪಮ್​ ಅಗರ್ವಾಲ್ ಸಲಹೆ

ಬ್ಯಾಂಕ್, ಹಣಕಾಸು ಸಂಸ್ಥೆ, ಆಭರಣ ಸಂಸ್ಥೆಗಳಿಗೆ ಸುರಕ್ಷತಾ ಕ್ರಮದ ಬಗ್ಗೆ ಪೊಲೀಸ್ ಕಮೀಷನರ್ ಅನುಪಮ್​ ಅಗರ್ವಾಲ್ ಸಲಹೆ

Discussion about this post

Recent News

ಬಂಟ್ವಾಳ: ಚಿನ್ನದಾಸೆಗೆ ವೃದ್ಧ ಮಹಿಳೆಗೆ ವಿಷವುಣಿಸಿ, ಉಸಿರುಗಟ್ಟಿಸಿ ಕೊಲೆ ಪ್ರಕರಣ; ಮೂವರಿಗೆ ಜೀವಾವಧಿ ಶಿಕ್ಷೆ

ಬಂಟ್ವಾಳ: ಚಿನ್ನದಾಸೆಗೆ ವೃದ್ಧ ಮಹಿಳೆಗೆ ವಿಷವುಣಿಸಿ, ಉಸಿರುಗಟ್ಟಿಸಿ ಕೊಲೆ ಪ್ರಕರಣ; ಮೂವರಿಗೆ ಜೀವಾವಧಿ ಶಿಕ್ಷೆ

July 29, 2026
8
ಉಳ್ಳಾಲದಲ್ಲಿ ಪೊಲೀಸರಿಂದ ಕಾಲೇಜು ವಿದ್ಯಾರ್ಥಿಗಳ ದಿಢೀರ್ ಡ್ರಗ್ಸ್‌ ತಪಾಸಣೆ: 159 ಮಂದಿಯಲ್ಲಿ ಒಬ್ಬನಿಗೆ ‘ಪಾಸಿಟಿವ್’

ಉಳ್ಳಾಲದಲ್ಲಿ ಪೊಲೀಸರಿಂದ ಕಾಲೇಜು ವಿದ್ಯಾರ್ಥಿಗಳ ದಿಢೀರ್ ಡ್ರಗ್ಸ್‌ ತಪಾಸಣೆ: 159 ಮಂದಿಯಲ್ಲಿ ಒಬ್ಬನಿಗೆ ‘ಪಾಸಿಟಿವ್’

July 29, 2026
18
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬಂಟ್ವಾಳ: ಚಿನ್ನದಾಸೆಗೆ ವೃದ್ಧ ಮಹಿಳೆಗೆ ವಿಷವುಣಿಸಿ, ಉಸಿರುಗಟ್ಟಿಸಿ ಕೊಲೆ ಪ್ರಕರಣ; ಮೂವರಿಗೆ ಜೀವಾವಧಿ ಶಿಕ್ಷೆ

ಬಂಟ್ವಾಳ: ಚಿನ್ನದಾಸೆಗೆ ವೃದ್ಧ ಮಹಿಳೆಗೆ ವಿಷವುಣಿಸಿ, ಉಸಿರುಗಟ್ಟಿಸಿ ಕೊಲೆ ಪ್ರಕರಣ; ಮೂವರಿಗೆ ಜೀವಾವಧಿ ಶಿಕ್ಷೆ

July 29, 2026
ಉಳ್ಳಾಲದಲ್ಲಿ ಪೊಲೀಸರಿಂದ ಕಾಲೇಜು ವಿದ್ಯಾರ್ಥಿಗಳ ದಿಢೀರ್ ಡ್ರಗ್ಸ್‌ ತಪಾಸಣೆ: 159 ಮಂದಿಯಲ್ಲಿ ಒಬ್ಬನಿಗೆ ‘ಪಾಸಿಟಿವ್’

ಉಳ್ಳಾಲದಲ್ಲಿ ಪೊಲೀಸರಿಂದ ಕಾಲೇಜು ವಿದ್ಯಾರ್ಥಿಗಳ ದಿಢೀರ್ ಡ್ರಗ್ಸ್‌ ತಪಾಸಣೆ: 159 ಮಂದಿಯಲ್ಲಿ ಒಬ್ಬನಿಗೆ ‘ಪಾಸಿಟಿವ್’

July 29, 2026
ರೂ.1 ಕೋಟಿ ಸಂಬಳದ AI ಉದ್ಯೋಗ ಗಿಟ್ಟಿಸಿಕೊಂಡ ಯುವಕ: ಕಿವುಡ ಮತ್ತು ಮೂಕ ತಂದೆಯ ಕನಸನ್ನು ನನಸಾಗಿಸಿದ ಮಗ

ರೂ.1 ಕೋಟಿ ಸಂಬಳದ AI ಉದ್ಯೋಗ ಗಿಟ್ಟಿಸಿಕೊಂಡ ಯುವಕ: ಕಿವುಡ ಮತ್ತು ಮೂಕ ತಂದೆಯ ಕನಸನ್ನು ನನಸಾಗಿಸಿದ ಮಗ

July 28, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d