• About us
  • Contact us
  • Disclaimer
Saturday, October 3, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಹೆಸರು, ವಿಳಾಸ ಬದಲಿಸಿ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳೆ ಸೆರೆ

Coastal Times by Coastal Times
August 19, 2026
in ಕ್ರೈಮ್ ನ್ಯೂಸ್
ಮಂಗಳೂರು: ಹೆಸರು, ವಿಳಾಸ ಬದಲಿಸಿ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳೆ ಸೆರೆ
134
VIEWS
WhatsappTelegramShare on FacebookShare on Twitter

ಮಂಗಳೂರು: PITA ಅಡಿ ದಾಖಲಾಗಿದ್ದ ಪ್ರಕರಣದಲ್ಲಿ ಹೆಸರು ಮತ್ತು ವಿಳಾಸ ಬದಲಿಸಿಕೊಂಡು ಸುಮಾರು 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರಂಟ್​ ಆರೋಪಿತೆಯನ್ನು ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿ ಪತ್ತೆಹಚ್ಚಿ ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ. ಬಂಧಿತ ಆರೋಪಿತೆಯನ್ನು ಮೂಡಬಿದರೆ ತಾಲೂಕಿನ ಪುತ್ತಿಗೆ ಗ್ರಾಮ, ಬಡಗಮಿಜಾರು, ಹಂಡೇಲ ಮಸೀದಿ ಬಳಿಯ ನಿವಾಸಿ ಸಫಿಯಾ (53) ಎಂದು ಗುರುತಿಸಲಾಗಿದೆ.

ಸುಳ್ಳು ಹೆಸರು ನೀಡಿ ತಲೆಮರೆಸಿಕೊಂಡಿದ್ದ ಆರೋಪಿತೆ: ಆರೋಪಿತೆಯ ವಿರುದ್ಧ ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ: 09/2011 ಕಲಂ: 3(2)(a), 5(1)(a), 7 ಪಿ.ಐ.ಟಿ.ಪಿ ಕಾಯ್ದೆ (Prevention of Immoral Trafficking Act) ಅಡಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣವು ಮಂಗಳೂರಿನ 3ನೇ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ವಿಚಾರಣೆಯಾಗಿ, LPC ನಂ: 10/2019 ರಂತೆ ದೀರ್ಘಕಾಲದಿಂದ ಬಾಕಿ ಉಳಿದಿತ್ತು.

ಪ್ರಕರಣ ದಾಖಲಾಗಿ ದಸ್ತಗಿರಿಯಾದ ಸಂದರ್ಭದಲ್ಲಿ ಆರೋಪಿತೆಯು ತನ್ನ ಹೆಸರು ಮತ್ತು ಗಂಡನ ಹೆಸರು-ವಿಳಾಸವನ್ನು ಮರೆಮಾಚಿ “ಆಯಿಷಾ (36), ಗಂಡ: ಹಸನಬ್ಬ, ಬಂಗಗುಡ್ಡೆ ಮನೆ, ಗುರುಪುರ, ಮಂಗಳೂರು” ಎಂಬುದಾಗಿ ಸುಳ್ಳು ಮಾಹಿತಿ ನೀಡಿದ್ದಳು. ನ್ಯಾಯಾಲಯವು ಆಕೆಯ ಹಾಜರಾತಿಗಾಗಿ ಹಲವಾರು ಬಾರಿ ಎಲ್‌ಪಿಸಿ ವಾರಂಟ್​ ಹೊರಡಿಸಿದ್ದರೂ, ಆಕೆ ಹಾಜರಾಗದೇ ಸಫಿಯಾ ಮೂಡಬಿದರೆಯ ಬಡಗಮಿಜಾರಿನಲ್ಲಿ ವಿಳಾಸ ಬದಲಿಸಿಕೊಂಡು 15 ವರ್ಷಗಳಿಂದ ಪೊಲೀಸರು ಹಾಗೂ ನ್ಯಾಯಾಲಯಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಳು ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ.

ಬೆರಳು ಮುದ್ರೆ ತಜ್ಞರ ವರದಿಯಿಂದ ಸಿಕ್ಕಿಬಿದ್ದ ಆರೋಪಿ: ಆರೋಪಿತೆಯ ಗುರುತು ಪತ್ತೆಗಾಗಿ ಆಕೆಯ ಬೆರಳಚ್ಚನ್ನು ಮಂಗಳೂರಿನ ಬೆರಳು ಮುದ್ರೆ ಘಟಕದ ತಜ್ಞರಿಗೆ ಪರಿಶೀಲನೆಗೆ ಕಳುಹಿಸಲಾಗಿತ್ತು. ಮಹಿಳಾ ಪೊಲೀಸ್ ಠಾಣೆಯ ಅ.ಕ್ರ: 09/2011 ಪ್ರಕರಣದ ಕಡತದಲ್ಲಿದ್ದ ಹಳೆಯ ಬೆರಳಚ್ಚಿಗೆ ಈಗಿನ ಬೆರಳಚ್ಚು ಸಂಪೂರ್ಣವಾಗಿ ಹೋಲಿಕೆಯಾಗಿರುವುದು ತಜ್ಞರ ವರದಿಯಿಂದ ದೃಢಪಟ್ಟಿತ್ತು.

ಇದರ ಬೆನ್ನಲ್ಲೇ ದಿನಾಂಕ 18-08-2026 ರಂದು ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿತೆ ಸಫಿಯಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಾಜಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿಧನ

Next Post

ಮಂಗಳೂರು: ಎರಡು ಪ್ರತ್ಯೇಕ ಪ್ರಕರಣ; ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

Related Posts

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​
ಕ್ರೈಮ್ ನ್ಯೂಸ್

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​

October 1, 2026
336
ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು
ಕ್ರೈಮ್ ನ್ಯೂಸ್

ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

October 1, 2026
30
Next Post
ಮಂಗಳೂರು: ಎರಡು ಪ್ರತ್ಯೇಕ ಪ್ರಕರಣ; ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಮಂಗಳೂರು: ಎರಡು ಪ್ರತ್ಯೇಕ ಪ್ರಕರಣ; ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

Discussion about this post

Recent News

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಲಾಗಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಲಾಗಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

October 2, 2026
26
AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​

October 1, 2026
336
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಲಾಗಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಲಾಗಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

October 2, 2026
AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​

October 1, 2026
ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

October 1, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d