ಬಜಪೆ: ಪೊರ್ಕೋಡಿ ದೇವಸ್ಥಾನದ ಕಡೆಗೆ ಹೋಗುವ ರಸ್ತೆಯಲ್ಲಿ ಕರೋಡಿ ಎಂಬಲ್ಲಿರುವ ಮನೆಯ ಬೆಡ್ ರೂಮಿನಲ್ಲಿದ್ದ ಕಬ್ಬಿಣದ ಕಪಾಟಿನ ಮಿನಿಲಾಕರ್ ನ್ನು ಮುರಿದು ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವಾಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಸೆ.1ರಂದು ಪ್ರಕರಣ ಕೇಸು ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಗುಮಾನಿತ ವ್ಯಕ್ತಿಯಾದ ಬಜಪೆಯ ತಾರೀಕಂಬ್ಳ ನಿವಾಸಿ ವಿನ್ಸೆಂಟ್ ಡಿ’ಸೋಜಾ (34) ಎಂಬವರನ್ನು ಬಜಪೆ ಪೊಲೀಸ್ ನಿರೀಕ್ಷಕಪ್ರಕಾಶ್ ರವರ ತಂಡ ಸೆ.4ರಂದು ಮಧ್ಯಾಹ್ನ ಬಜಪೆಯ ಕಿನ್ನಿಪದವು ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದುಕೊಂಡು ,ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಒಟ್ಟು 80 ಗ್ರಾಂ ತೂಕದ ಚಿನ್ನಾಭರಣಗಳನ್ನು (ಚಿನ್ನದ ಕರಿಮಣಿ ಸರ, ಬಿಳಿ ಬಣ್ಣದ ಹರಳುಗಳಿಂದ ಕೂಡಿರುವ ಚಿನ್ನದ ನೆಕ್ಲೆಸ್, ಚಿನ್ನದ ಬಳೆಗಳು-2, ಚಿನ್ನದ ಉಂಗುರಗಳು-3, ಒಂದು ಜೊತೆ ಚಿನ್ನದ ಕಿವಿ ಒಲೆ ಮತ್ತು ಒಂದು ಜತೆ ಚಿನ್ನದ ಜುಮುಕಿ) ವಶಪಡಿಸಿಕೊಂಡಿರುತ್ತಾರೆ.
ಮಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ಮಟ್ಟಹಾಕಲು ದೃಢನಿರ್ಧಾರ ಕೈಗೊಂಡಿರುವ ಪೊಲೀಸ್ ಆಯುಕ್ತ ಕುಲದೀಪ ಕುಮಾರ್ ಜೈನ್ ರವರ ಮಾರ್ಗದರ್ಶನದಂತೆ, ಆರೋಪಿಗಳ ಬಂಧನಕ್ಕೆ ಬಜ್ಪೆ ಪೊಲೀಸ್ ನಿರೀಕ್ಷಕ ಪ್ರಕಾಶ್, ಪಿಎಸ್‌ಐ ಗುರಪ್ಪ ಕಾಂತಿ, ಪಿಎಸ್‌ಐ ಲತಾ, ಪಿಎಸ್‌ಐ ಕುಮರೇಶ, ಪಿಎಸ್‌ಐ ರೇವಣ ಸಿದ್ದಪ್ಪ, ಎಎಸ್‌ಆರ್ ರಾಮ ಪೂಜಾರಿ, ರಶೀದಾ ಶೇಖ್, ಸುಜನ್, ರೋಹಿತಾ, ದುರ್ಗಾಪ್ರಸಾದ್ ಶೆಟ್ಟಿ, ಸಂತೋಷ, ಬಸವರಾಜ ಪಾಟೀಲ, ಕೆಂಚನಗೌಡ ಕಾರ್ಯಾಚರಣೆ ನಡೆಸಿದರು.
Discover more from Coastal Times Kannada
Subscribe to get the latest posts sent to your email.
Discussion about this post