ಮಂಗಳೂರು, ಡಿ.5: ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಇತ್ತೀಚೆಗೆ ದಾಳಿ ನಡೆಸಿದ ಸಂದರ್ಭ ಮಾದಕ ದ್ರವ್ಯಗಳು, ಮೊಬೈಲ್ ಸಹಿತ ಜೈಲಿನೊಳಗೆ ನಿಷೇಧಿತ ವಸ್ತುಗಳು ಪತ್ತೆಯಾದ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ಜೈಲು ಅಧೀಕ್ಷಕ ಬಿ.ಟಿ.ಓಬಳೇಶಪ್ಪ ಅವರನ್ನು ಇಲಾಖಾ ವಿಚಾರಣೆ ಬಾಕಿಯಿರಿಸಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಜು.25ರಂದು ಮುಂಜಾನೆ 4 ಗಂಟೆಗೆ, ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ನೇತೃತ್ವದಲ್ಲಿ ಇಬ್ಬರು ಡಿಸಿಪಿಗಳು, ಮೂವರು ಎಸಿಪಿಗಳು, 15 ಇನ್ ಸ್ಪೆಕ್ಟರ್ಗಳು ಸೇರಿದಂತೆ 150 ಪೊಲೀಸರು ಏಕಕಾಲದಲ್ಲಿ ಜೈಲಿಗೆ ದಾಳಿ ನಡೆಸಿದ್ದರು, ಈ ಸಂದರ್ಭ ಗಾಂಜಾ ಸಹಿತ ಹಲವಾರು ಪ್ಯಾಕೆಟ್ ಮಾದಕ ವಸ್ತುಗಳು, 25 ಮೊಬೈಲ್ ಫೋನ್, ಬ್ಲೂಟೂಥ್, ಐದು ಇಯರ್ ಫೋನ್, ಪೆನ್ ಡೈವ್, ಎರಡು ಚಾರ್ಜರ್ ಗಳು, ಕತ್ತರಿಗಳು, ಮೂರು ಕೇಬಲ್ ವಶಪಡಿಸಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿತ್ತು.
ಮೈಸೂರು ಕೇಂದ್ರ ಕಾರಾಗೃಹದ ಸಹಾಯಕ ಅಧಿಧೀಕ್ಷಕ ಕೆ.ಎನ್. ಮೋಹನ್ ಕುಮಾರ್ ಅವರನ್ನು ಮಂಗಳೂರು ಕಾರಾಗೃಹದ ಅ ಧೀಕ್ಷಕರ ಪ್ರಭಾರ ವಹಿಸಲಾಗಿದೆ ಎಂದು ಕಾರಾಗೃಹ ಮತ್ತು ಸುಧಾರಣ ಸೇವೆಯ ಮಹಾನಿರ್ದೇಶಕ ದೇವಜ್ಯೋತಿ ರೇ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post