• About us
  • Contact us
  • Disclaimer
Monday, September 21, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಊಟಕ್ಕೆ ಬಸ್ ನಿಲ್ಲಿಸಿದ್ದೇ ತಡ, ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ 90 ಲಕ್ಷ ಮೌಲ್ಯದ ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ

Coastal Times by Coastal Times
March 12, 2026
in ಕರಾವಳಿ
ಊಟಕ್ಕೆ ಬಸ್ ನಿಲ್ಲಿಸಿದ್ದೇ ತಡ, ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ 90 ಲಕ್ಷ ಮೌಲ್ಯದ ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ
81
VIEWS
WhatsappTelegramShare on FacebookShare on Twitter

ಕೊಪ್ಪಳ ಮಾ 12: ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್‌ನಲ್ಲಿ 90 ಲಕ್ಷ ಮೌಲ್ಯದ ಚಿನ್ನ, ವಜ್ರಾಭರಣವಿದ್ದ ಬ್ಯಾಗ್ ದರೋಡೆಯಾಗಿದೆ. ಕೊಪ್ಪಳ ಹೊರಹೊಲಯದಲ್ಲಿ ಊಟಕ್ಕೆಂದು ಬಸ್ ನಿಲ್ಲಿಸಿದಾಗ ಮಂಗಳೂರಿನ ಮೊಹಮ್ಮದ್, ಇರ್ಷಾದ್​ ಎಂಬುವರಿಗೆ ಸೇರಿದ ಚಿನ್ನ, ವಜ್ರಾಭರಣವಿದ್ದ ಚೀಲವನ್ನು ಕದ್ದು ಪರಾರಿಯಾಗಿದ್ದಾರೆ. ಬಸ್‌ನಲ್ಲಿ ಮಲಗಿದ್ದ ಪ್ರಯಾಣಿಕನೋರ್ವ ಚಿನ್ನ ಬ್ಯಾಗ್​ ಹಿಡಿದು ಪರಾರಿಯಾಗುತ್ತಿರುವ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಪೊಲೀಸರು ಆರೋಪಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ತವಾ ಪಂಜಾಬ್ ಹೋಟೆಲ್ ಮುಂದೆ ನಡೆದ ದರೋಡೆ : ಈ ದರೋಡೆ ಘಟನೆ ತವ ಪಂಜಾಬ್ ಹೊಟೇಲ್ ಮುಂಭಾಗದಲ್ಲಿ ನಡೆದಿದೆ. ರಾ.ಹೆ 63 ಕ್ಕೆ ಹೊಂದಿಕೊಂಡಂತೆ ಇರುವ ತವ ಪಂಜಾಬ್ ಹೊಟೇಲ್. ಮಂತ್ರಾಲಯದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್ ಕೊಪ್ಪಳ ಹೊರವಲಯದಲ್ಲಿ ಊಟಕ್ಕಾಗಿ ನಿಲ್ಲಿಸಲಾಗಿತ್ತು. ಆ ವೇಳೆ ಬಸ್‌ನಲ್ಲೇ ಮಲಗಿದ್ದ ಮಹಮ್ಮದ್ ಮತ್ತು ಇರ್ಷಾದ್ ಎಂಬ ಪ್ರಯಾಣಿಕರ ಬಳಿಯಿದ್ದ ಬಂಗಾರದ ಚೀಲವನ್ನು ಖದೀಮರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಇನ್ನು  ಚಿನ್ನಾಭರಗಳನ್ನು ಯುನಿಸೆಫ್ ಗೋಲ್ಡ್ ಕಂಪನಿಗೆ ಸೇರಿದ್ದು ಎನ್ನುವುದು ತಿಳಿದುಬಂದಿದೆ.

ಸಿಸಿ ಕ್ಯಾಮರಾದಲ್ಲಿ ಸೆರೆಗೊಂಡ ದೃಶ್ಯ : ಹೋಟೆಲ್ ಮುಂಭಾಗದಲ್ಲಿದ್ದ ಸಿಸಿ ಕ್ಯಾಮರದಲ್ಲಿ ಈ ದರೋಡೆ ಕೃತ್ಯದ ಸಂಪೂರ್ಣ ದೃಶ್ಯ ದಾಖಲಾಗಿದ್ದು, ಆರೋಪಿಗಳು ಹೇಗೆ ಬಸ್‌ಗೆ ಹತ್ತಿ ಬಂಗಾರದ ಚೀಲವನ್ನು ಕದ್ದುಕೊಂಡು ಹೋಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಅವರದ್ದೇ ಆಗ ಸಿಗ್ನಲ್‌ಗಳು ಒಬ್ಬೊಬ್ಬರಂತೆ ಬಂದು ಕಾಯುತ್ತಿರುವುದು ಕಂಡುಬಂದಿದೆ. ಈ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮಹಮ್ಮದ್ ಮತ್ತು ಇರ್ಷಾದ್ ಎಂಬವರು ಮಂತ್ರಾಲಯದಿಂದ ಮಂಗಳೂರಿಗೆ ಬಂಗಾರದೊಂದಿಗೆ ಪ್ರಯಾಣಿಸುತ್ತಿದ್ದರು. ಬಸ್ ಊಟಕ್ಕಾಗಿ ನಿಂತಿದ್ದ ವೇಳೆ ಅವರು ಮಲಗಿದ್ದ ಕಾರಣ ಖದೀಮರು ಈ ಅವಕಾಶವನ್ನು ಬಳಸಿಕೊಂಡು ದರೋಡೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಈ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಸಿಂಧನೂರಿನಿಂದ ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರಯಾಣಿಸಿ ಕೊಪ್ಪಳಕ್ಕೆ ಬಂದಿದ್ದಾನೆ. ಅದೇ ವೇಳೆ ಇನ್ನೂ ಮೂವರು ಖದೀಮರು ಬೇರೆ ವಾಹನದಲ್ಲಿ ಬಸ್‌ನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಒಟ್ಟು ನಾಲ್ವರು ಸೇರಿಕೊಂಡು ಈ ದರೋಡೆ ಕೃತ್ಯವನ್ನು ಸಂಚು ರೂಪಿಸಿ ನಡೆಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ಬಸ್ ಪ್ರಯಾಣಿಕರ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ದರೋಡೆ ನಡೆಸಿದ ನಾಲ್ವರು ಖದೀಮರು ಯಾವ ದಿಕ್ಕಿಗೆ ಪರಾರಿಯಾಗಿದ್ದಾರೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಟ್ಟಾರೆ, ದಿನದ ಬೆಳಕಿನಲ್ಲಿ ನಡೆದ ಈ ಬಂಗಾರದ ದರೋಡೆ ಪ್ರಕರಣ ಕೊಪ್ಪಳ ಜಿಲ್ಲೆಯಲ್ಲೇ ಭಾರೀ ಸಂಚಲನ ಮೂಡಿಸಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂಬ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ವಿಟ್ಲ: ಬಾಡಿಗೆ ಮನೆಯೊಂದರಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 4 ಮಂದಿ ಆರೋಪಿಯ ಬಂಧನ

Next Post

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ

Related Posts

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ
ಕರಾವಳಿ

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ

September 19, 2026
64
ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ
ಕರಾವಳಿ

ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ

September 19, 2026
56
Next Post
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ

Discussion about this post

Recent News

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ

September 19, 2026
64
ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ

ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ

September 19, 2026
56
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ

ಮಂಗಳೂರು : ಮೀನುಗಾರಿಕೆ ಧಕ್ಕೆಗೆ ಸಿಎಂ ಡಿಕೆ ಶಿವಕುಮಾರ್ ದಿಢೀರ್ ಭೇಟಿ, ಹಳೆ ಬಂದರಿನಲ್ಲಿ ವ್ಯವಹಾರ ಸ್ಥಗಿತ

September 19, 2026
ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ

ಮಂಗಳೂರಿಗೆ ‘ಮಂಗಳೂರು ಐ’ ಆಕಾಶಗೋಪುರ ಗಿಫ್ಟ್: 32,611 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳಿಗೆ ಅನುಮೋದನೆ

September 19, 2026
ಮಂಗಳೂರು: ತುಳು ಭಾಷೆ ರಾಜ್ಯದ ಎರಡನೇ ಅಧಿಕೃತ ಭಾಷಾ ಮಾನ್ಯತೆ – ಸಿಎಂ ಘೋಷಣೆ, ಮಂಗಳೂರಿನಲ್ಲಿ ಸಂಭ್ರಮಾಚರಣೆ

ಮಂಗಳೂರು: ತುಳು ಭಾಷೆ ರಾಜ್ಯದ ಎರಡನೇ ಅಧಿಕೃತ ಭಾಷಾ ಮಾನ್ಯತೆ – ಸಿಎಂ ಘೋಷಣೆ, ಮಂಗಳೂರಿನಲ್ಲಿ ಸಂಭ್ರಮಾಚರಣೆ

September 18, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d