ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟರ್ ಎಲ್ಲಿಸ್ ಪೆರ್‍ರಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಕಾರಿನ ಗಾಜನ್ನು ಪುಡಿ ಮಾಡಿದ್ದಾರೆ. ಯುಪ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಬೃಹತ್ ಗುರಿ ನೀಡಿದೆ. ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು.
ಸ್ಮೃತಿ ಮಂಧಾನ ಜೊತೆ ಸೋಫಿ ಡಿವೈನ್ ಬದಲಾಗಿ ಎಸ್ ಮೇಘನಾ ಇನ್ನಿಂಗ್ಸ್ ಆರಂಭಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 51 ರನ್ ಕಲೆಹಾಕಿತು. ಎಸ್ ಮೇಘನಾ 21 ಎಸೆತಗಳಲ್ಲಿ 28 ರನ್ ಗಳಿಸಿದರು.
ಮೇಘನಾ ಔಟಾದ ಬಳಿಕ ಜೊತೆಯಾದ ಮಂಧಾನ ಮತ್ತು ಎಲ್ಲಿಸ್ ಪೆರ್‍ರಿ 95 ರನ್‌ಗಳನ್ನು ಕಲೆಹಾಕಿದರು. ಸ್ಮೃತಿ ಮಂಧಾನ 50 ಎಸೆತಗಳಲ್ಲಿ 10 ಬೌಂಡರಿ ಮೂರು ಭರ್ಜರಿ ಸಿಕ್ಸರ್ ಸಹಿತ 80 ರನ್ ಗಳಿಸಿದರು. ಅತ್ಯುತ್ತಮ ಬ್ಯಾಟಿಂಗ್ ಮುಂದುವರೆಸಿದ ಎಲ್ಲಿಸ್ ಪೆರ್‍ರಿ 37 ಎಸೆತಗಳಲ್ಲಿ 4 ಬೌಂಡರಿ 4 ಸಿಕ್ಸರ್ ಸಹಿತ 58 ರನ್ ಗಳಿಸಿದರು. ಬಳಿಕ ಬಂದ ರಿಚಾ ಘೋಷ್ 10 ಎಸೆತಗಳಲ್ಲಿ 2 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 21 ರನ್ ಗಳಿಸಿದರು. ಅಂತಿಮವಾಗಿ ಆರ್ ಸಿಬಿ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿತು.
ಕಾರಿನ ಗಾಜು ಒಡೆದ ಪೆರ್‍ರಿ: ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಎಲ್ಲಿಸ್ ಪೆರ್‍ರಿ ಭರ್ಜರಿ ಸಿಕ್ಸರ್ ಮೂಲಕ ಕಾರಿನ ಗಾಜು ಒಡೆದರು. 18 ನೇ ಓವರ್ ನ 5ನೇ ಎಸೆತದಲ್ಲಿ ದೀಪ್ತಿ ಶರ್ಮಾ ಅವರಿಗೆ ಎಲ್ಲಿಸ್ ಪೆರ್‍ರಿ ಭರ್ಜರಿ ಸಿಕ್ಸರ್ ಬಾರಿಸಿದರು. ಅವರು ಹೊಡೆದ ಚಂಡು ಬೌಂಡರಿ ಗೆರೆ ಬಳಿ ನಿಲ್ಲಿಸಿದ್ದ ಟಾಟಾ ಪಂಚ್ ಕಾರಿನ ಗಾಜಿಗೆ ತಾಗಿದ್ದರಿಂದ ಪುಡಿ ಪುಡಿಯಾಯಿತು. ಇದನ್ನು ನೋಡಿ ಎಲ್ಲಿಸ್ ಪೆರ್‍ರಿ ಕೂಡ ತಲೆ ಮೇಲೆ ಕೈ ಹೊತ್ತುಕೊಂಡರು. ಪೆರ್‍ರಿ ಸಿಕ್ಸರ್ ನೋಡಿದ ಆರ್ ಸಿಬಿ ತಂಡದ ಇತರ ಆಟಗಾರರು ಕೂಡ ತಲೆ ಮೇಲೆ ಕೈಹೊತ್ತುಕೊಂಡರು.
ಮಹಿಳಾ ಪ್ರೀಮಿಯರ್ ಲೀಗ್ 2024 ರ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಕೊನೆಯ ಪಂದ್ಯ ಇದಾಗಿದ್ದು, ಮುಂದಿನ ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿವೆ.
Discover more from Coastal Times Kannada
Subscribe to get the latest posts sent to your email.
Discussion about this post