WPL 2024: ವುಮೆನ್ಸ್ ಪ್ರೀಮಿಯರ್ ಲೀಗ್ನ 13ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಆಟಗಾರ್ತಿ ಶಬ್ನಿಮ್ ಇಸ್ಲಾಯಿಲ್ ಮಹಿಳಾ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ಅತೀ ವೇಗವಾಗಿ ಚೆಂಡೆಸೆಯುವ ಮೂಲಕ ಎಂಬುದೇ ವಿಶೇಷ. ಅಂದರೆ ಮಹಿಳಾ ಕ್ರಿಕೆಟ್ನಲ್ಲಿ ಅತೀ ವೇಗದಲ್ಲಿ ಬೌಲಿಂಗ್ ಮಾಡಿದ ದಾಖಲೆಯನ್ನು ಶಬ್ನಿಮ್ ನಿರ್ಮಿಸಿದ್ದಾರೆ. ಅದು ಕೂಡ ವುಮೆನ್ಸ್ ಪ್ರೀಮಿಯರ್ ಲೀಗ್ ಮೂಲಕ ಎಂಬುದು ವಿಶೇಷ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಶಬ್ನಿಮ್ ಬರೋಬ್ಬರಿ 132.1 Kmph ವೇಗದಲ್ಲಿ ಚೆಂಡೆಸೆದಿದ್ದಾರೆ. ಈ ಮೂಲಕ ಮಹಿಳಾ ಕ್ರಿಕೆಟ್ನಲ್ಲಿ ಅತೀ ವೇಗವಾಗಿ ಬೌಲಿಂಗ್ ಮಾಡಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಶೇಷ ಎಂದರೆ ಇದಕ್ಕೂ ಮುನ್ನ ಈ ದಾಖಲೆ ಶಬ್ನಿಮ್ ಇಸ್ಮಾಯಿಲ್ ಅವರ ಹೆಸರಿನಲ್ಲಿಯೇ ಇತ್ತು. 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಶಬ್ನಿಮ್ 128kph ವೇಗದಲ್ಲಿ ಚೆಂಡೆಸೆದು ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ತನ್ನದೇ ದಾಖಲೆಯನ್ನು ಮುರಿದು ಸೌತ್ ಆಫ್ರಿಕಾ ಆಟಗಾರ್ತಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಇನಿಂಗ್ಸ್ನ 3ನೇ ಓವರ್ನ 2ನೇ ಎಸೆತವನ್ನು 132.1 Kmph ವೇಗದಲ್ಲಿ ಎಸೆದ ಶಬ್ನಿಮ್ ಇಸ್ಮಾಯಿಲ್ ಮಹಿಳಾ ಕ್ರಿಕೆಟ್ನಲ್ಲಿ 130+ Kmph ವೇಗದಲ್ಲಿ ಚೆಂಡೆಸೆದ ಮೊದಲ ಬೌಲರ್ ಹಾಗೂ ಅತೀ ವೇಗವಾಗಿ ಬೌಲಿಂಗ್ ಮಾಡಿದ ಆಟಗಾರ್ತಿ ಎಂಬ ವಿಶ್ವ ದಾಖಲೆಯನ್ನು ಬರೆದರು.
Discover more from Coastal Times Kannada
Subscribe to get the latest posts sent to your email.
Discussion about this post