ಮಂಗಳೂರು – ಯುಎಇ ಮೂಲದ ಖ್ಯಾತ ಸಂಗೀತಗಾರ, ಗಿಟಾರ್ ವಾದಕ ಮತ್ತು ಗಾಯಕ ಗೋಪಿ ಕಾಮತ್ ಅವರ ಖ್ಯಾತ ರೆಟ್ರೊ ಬಾಲಿವುಡ್ ಮೆಲೋಡಿಗಳ ಸಂಗೀತ ಕಾರ್ಯಕ್ರಮ ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಗೌರವಾನ್ವಿತ ವಾಯೊಲಿನ್ ವಾದಕ ರಂಗ ಪೈ ಮತ್ತು ಪ್ರತಿಭಾವಂತ ಮರಾಠಿ ಹಿನ್ನೆಲೆ ಗಾಯಕಿ ಶ್ರೀಮತಿ ಅನುಷ್ಕಾ ಚಡ್ಡಾ ಸೇರಿದಂತೆ ಬಾಲಿವುಡ್ನ ನುರಿತ ಸಂಗೀತಗಾರರ ತಂಡದೊAದಿಗೆ ಕಾಮತ್ ಅವರು ‘ಎವರ್ಗ್ರೀನ್ ಮೆಲೋಡೀಸ್’ ನೊಂದಿಗೆ ಸಂಗೀತ ಆಸಕ್ತರನ್ನು ಮೋಡಿಗೊಳಿಸಲಿದ್ದಾರೆ.
ಗೋಪಿ ಕಾಮತ್ ಅವರು ಬಹುಮುಖ ಸಂಗೀತ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಗಾಯನ, ಗಿಟಾರ್, ಕೀಬೋರ್ಡ್ ಮತ್ತು ಹಾರ್ಮೋನಿಕಾದೊಂದಿಗೆ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಪ್ರಧಾನವಾಗಿ ಸಂಗೀತದ ಸುವರ್ಣ ಯುಗದ ರೆಟ್ರೊ ಹಾಡುಗಳನ್ನು ಹಾಡಲಿದ್ದಾರೆ. ಪ್ರೇಕ್ಷಕರೊಂದಿಗೆ ಆಳವಾಗಿ ಬೆಸೆಯಲಿರುವ ಭಾವಪೂರ್ಣ ಸಾಹಿತ್ಯಕ್ಕೆ ಹೆಸರುವಾಸಿಯಾದ ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ. ಕಾಮತ್ರವರು ಹಿಂದಿ ಮೆಲೋಡಿಗಳಿಗೆ ಮಾತ್ರ ಸೀಮಿತವಾಗಿಲ್ಲದೆ, ರೆಟ್ರೊ ಇಂಗ್ಲಿಷ್ ಹಾಡುಗಳ ಆಕರ್ಷಕ ಪ್ರದರ್ಶನಗಳನ್ನು ಸಹ ನೀಡಲಿದ್ದಾರೆ. ಉಡುಪಿ ಮೂಲದ ಅವರು, ಕನ್ನಡ, ತುಳು ಮತ್ತು ಕೊಂಕಣಿ ಹಾಡುಗಳ ಸಮೃದ್ಧ ಮಿಶ್ರಣದೊಂದಿಗೆ ವಿಶಿಷ್ಟವಾದ ಸಂಗೀತ ಕಾರ್ಯಕ್ರಮವನ್ನು ನೀಡಲಿದ್ದಾರೆ.
ಪ್ರದರ್ಶಕ ಮತ್ತು ಸಂಯೋಜಕರಾಗಿ, ಕಾಮತ್ ಪ್ರೇಕ್ಷಕರಿಗೆ ಹಾಸ್ಯ ಮತ್ತು ಉತ್ಸಾಹದ ಸಂವಾದದೊoದಿಗೆ ಆಕರ್ಷಕ ಮತ್ತು ಸಂವಾದಾತ್ಮಕ ಅನುಭವವನ್ನು ನೀಡಲಿದ್ದಾರೆ. 14 ದೇಶಗಳಲ್ಲಿ ಪ್ರಸ್ತುತಗೊಂಡಿರುವ ಅವರ ಪ್ರದರ್ಶನಗಳು ನಿರಂತರವಾಗಿ ಜನಮನಗಳನ್ನು ಸೆಳೆಯುತ್ತಿದ್ದು, ವಿಶೇಷವಾಗಿ ಯುಎಇಯಲ್ಲಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಾರ್ಯಕ್ರಮವು ಮಾರ್ಚ್ 9, 2024 ರಂದು ಮಂಗಳೂರಿನ ಹೋಟೆಲ್ ಮೋತಿ ಮಹಲ್ನ ಕನ್ವೆನ್ಷನ್ ಹಾಲ್ನಲ್ಲಿ ಸಂಜೆ 7:00 ಗಂಟೆಗೆ ನಡೆಯಲಿದೆ.
ಪ್ರತಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು: ಗೋಪಿ ಕಾಮತ್, ಜೆರಿ ಡಿಮೆಲ್ಲೊ ಮತ್ತು ರೀನಾ ಪಿಂಟೊ.
Discover more from Coastal Times Kannada
Subscribe to get the latest posts sent to your email.
Discussion about this post