ಮುಂಬೈ: IND vs ENG Match: ಐಸಿಸಿ ಟಿ20 ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯ ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 253 ರನ್‌ಗಳನ್ನು ಕಲೆಹಾಕಿತು. ಇದಕ್ಕೆ ಉತ್ತರವಾಗಿ ಬೆಥೆಲ್ ಅವರ ದಾಖಲೆಯ ಶತಕ ಸಹಾಯದಿಂದ ಇಂಗ್ಲೆಂಡ್ ಸಹ ಪ್ರಬಲ ಪೈಪೋಟಿ ನೀಡಿತು.
ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡವು ಕಳಪೆ ಆರಂಭವನ್ನು ಪಡೆದುಕೊಂಡಿತು. ಫಿಲ್ ಸಾಲ್ಟ್ ಅವರನ್ನು ಹಾರ್ದಿಕ್ ಪಾಂಡ್ಯ ಕೇವಲ 5 ರನ್‌ಗಳಿಗೆ ಔಟ್ ಮಾಡಿದರು. ನಂತರ ಹ್ಯಾರಿ ಬ್ರೂಕ್ ಅವರನ್ನು ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್‌ನಲ್ಲಿ 7 ರನ್‌ಗಳಿಗೆ ಪೆವಿಲಿಯನ್ ಸೇರಿದರು. ಜೋಸ್ ಬಟ್ಲರ್ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡರು.
ಆದರೆ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು 25 ರನ್‌ಗಳಿಗೆ ಔಟ್ ಮಾಡಿದರು. ಬಟ್ಲರ್ ಔಟಾದಾಗ ಇಂಗ್ಲೆಂಡ್ ಸ್ಕೋರ್ 3/64 ಆಗಿತ್ತು. ನಂತರ ವಿಲ್ ಜ್ಯಾಕ್ಸ್ ಮತ್ತು ಜಾಕೋಬ್ ಬೆಥೆಲ್ 77 ಪಾಲುದಾರಿಕೆಯೊಂದಿಗೆ ಇಂಗ್ಲೆಂಡ್‌ನ ಫೈನಲ್ ಕನಸನ್ನು ಜೀವಂತವಾಗಿರಿಸಿದರು. ಆದಾಗ್ಯೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಸಂಜು ಸ್ಯಾಮ್ಸನ್ ಅವರ ಸ್ಫೋಟಲ ಬ್ಯಾಟಿಂಗ್ ಬಲದಿಂದ ಅತ್ಯುತ್ತಮ ಸ್ಕೋರ್ ಕಲೆಹಾಕಿದರು. ಅವರು 42 ಎಸೆತಗಳಲ್ಲಿ 89 ರನ್ ಗಳಿಸಿದರು. ಇದರಲ್ಲಿ ಎಂಟು ಬೌಂಡರಿಗಳು ಮತ್ತು ಏಳು ಸಿಕ್ಸರ್‌ಗಳು ಸೇರಿದ್ದವು. ಆದಾಗ್ಯೂ, ಅಭಿಷೇಕ್ ಅವರ ಬ್ಯಾಟ್ ಮತ್ತೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಅವರು ಕೇವಲ 9 ರನ್‌ಗಳಿಗೆ ಔಟಾದರು. ಮೂರನೇ ಸ್ಥಾನದಲ್ಲಿ ಬಂದ ಇಶಾನ್ 18 ಎಸೆತಗಳಲ್ಲಿ 39 ರನ್‌ಗಳ ಅದ್ಭುತ ಇನ್ನಿಂಗ್ಸ್ ಗಳಿಸಿದರು. ಶಿವಂ ದುಬೆ 25 ಎಸೆತಗಳಲ್ಲಿ 43 ರನ್ ಗಳಿಸಿದರು. ಹಾರ್ದಿಕ್ 12 ಎಸೆತಗಳಲ್ಲಿ 27 ರನ್ ಮತ್ತು ತಿಲಕ್ ಕೇವಲ ಏಳು ಎಸೆತಗಳಲ್ಲಿ 21 ರನ್ ಗಳಿಸಿದರು. ಇಂಗ್ಲೆಂಡ್ ಪರ ಬೌಲಿಂಗ್‌ನಲ್ಲಿ ಆದಿಲ್ ರಶೀದ್ ಮತ್ತು ವಿಲ್ ಜಾಕ್ಸ್ ತಲಾ 2 ವಿಕೆಟ್ ಪಡೆದರು.
ಭಾರತ 253 ರನ್ಗಳಿಸಿ ದಾಖಲೆ ಬರೆದಿದೆ. ಇದು T20 ವಿಶ್ವಕಪ್ ನಾಕೌಟ್‌ಗಳ ಇತಿಹಾಸದಲ್ಲಿ ಅತ್ಯಧಿಕ ಸ್ಕೋರ್ ಆಗಿದೆ. ಈ ಸ್ವರೂಪದಲ್ಲಿ ಟೀಮ್ ಇಂಡಿಯಾ ಗಳಿಸಿದ ಎರಡನೇ ಅತ್ಯಧಿಕ ಸ್ಕೋರ್ ಇದಾಗಿದ್ದು, ಅದೇ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಗಳಿಸಿದ 256 ರನ್‌ಗಳ ನಂತರ ಇದಾಗಿದೆ. 2007ರಲ್ಲಿ ಕೀನ್ಯಾ ವಿರುದ್ಧ ಶ್ರೀಲಂಕಾ 260 ರನ್‌ಗಳನ್ನು ಗಳಿಸಿತ್ತು ಈ ದಾಖಲೆ ಮುರಿಯಲು ಭಾರತಕ್ಕೆ ಕೇವಲ ಏಳು ರನ್‌ಗಳು ಬೇಕಾಗಿದ್ದವು. ಆದರೆ ಇದು ಸಾಧ್ಯವಾಗಲಿಲ್ಲ.
Discover more from Coastal Times Kannada
Subscribe to get the latest posts sent to your email.







Discussion about this post