• About us
  • Contact us
  • Disclaimer
Wednesday, July 15, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ

Coastal Times by Coastal Times
February 16, 2026
in ಕ್ರೀಡಾ ಸುದ್ದಿ
T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ
26
VIEWS
WhatsappTelegramShare on FacebookShare on Twitter

ಕೊಲಂಬೊ, ಫೆ.15: ಭಾರತ ವಿರುದ್ಧದ ವಿಶ್ವಕಪ್​ ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಕೊಲಂಬೊದ ಆರ್​ ಪ್ರೇಮದಾಸ್​ ಮೈದಾನದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನ 27ನೇ ಪಂದ್ಯದಲ್ಲಿ ಟೀಮ್​ ಇಂಡಿಯಾ ವಿರುದ್ಧ ಹೀನಾಯ ಸೋಲನ್ನು ಕಂಡಿದೆ. ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದದ್ದ ಟೀಮ್​ ಇಂಡಿಯಾ ಇಶಾನ್​ ಕಿಶ್​ನ ಅವರ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್​ ಕಲೆಹಾಕಿತು.

ಈ ಬೃಹತ್​ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಭಾರತ ಬೌಲಿಂಗ್​ ದಾಳಿಗೆ ಸಿಲುಕಿ 114 ರನ್​ಗಳಿಗೆ ಆಲೌಟ್​ ಆಗಿದೆ. ಏಷ್ಯಾಕಪ್​ನಲ್ಲಿ ಅರ್ಧಶತಕ ಸಿಡಿಸಿ ವಿವಾದಾತ್ಮಕ ಗನ್​ ಸಂಭ್ರಮಾಚರಣೆ ಮಾಡಿದ್ದ ಶಾಹಿಬ್ಜಾದ ಫರ್ಹಾನ್​ ಹಾರ್ದಿಕ್​ ಎಸೆತದಲ್ಲಿ ಡಕೌಟ್​ ಆಗಿ ಪೆವಿಲಿಯನ್​ ಸೇರಿದರು. ಇದಲ್ಲದೇ, ಸೈಮ್​ ಅಯ್ಯೂಬ್​ (6), ಸಲ್ಮಾನ್​ ಅಲಿ ಆಘಾ (4), ಬಾಬರ್​ ಅಜಾಮ್​ (5), ಶದಾಬ್ ಖಾನ್ (14), ನವಾಜ್​ (4) ಭಾರತದ ದಾಳಿಗೆ ಕ್ರೀಸ್​ನಲ್ಲಿ ಉಳಿಯಲು ಸಾಧ್ಯವಾಗದೆ ಪೆವಿಲಿಯನ್​ ಸೇರಿದರು. ಪಾಕ್​ ಪರ ಉಸ್ಮಾನ್​ ಖಾನ್ (44) ಮಾತ್ರ ಅತ್ಯಧಿಕ ಸ್ಕೋರ್ ಕಲೆಹಾಕಿದರೇ, ಶಹೀನ್​ ಆಫ್ರಿದಿ ಅಜೇಯವಾಗಿ (23) ಉಳಿದರು. ಒಟ್ಟು ಮೂವರು ಫರ್ಹಾನ್​, ಅಬ್ರಾರ್, ಉಸ್ಮಾನ್​ ತಾರಿಖ್ ಡಕೌಟ್​ ಆದರು.

ಇದರೊಂದಿಗೆ ಭಾರತ 61 ರನ್​ಗಳಿಂದ ಪಂದ್ಯ ಗೆದ್ದು ಪಾಕಿಸ್ತಾನದ ಸೊಕ್ಕು ಮುರಿದಿದೆ. ಅಲ್ಲದೇ ಸೂಪರ್​ 8ರ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಭಾರತದ ಪರ ಜಸ್ಪ್ರೀತ್ ಬುಮ್ರಾ, ವರುಣ್​ ಚಕ್ರವರ್ತಿ, ಅಕ್ಷರ್​ ಪಟೇಲ್, ಜಸ್ಪ್ರೀತ್​ ಬುಮ್ರಾ​ ತಲಾ 2 ವಿಕೆಟ್​ ಪಡೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ಕಳಪೆ ಆರಂಭ ಪಡೆದುಕೊಂಡಿತು. ಎರಡನೇ ಪಂದ್ಯದಿಂದ ಹೊರಗುಳಿದಿದ್ದ ಅಭಿಷೇಕ್​ ಶರ್ಮಾ ಈ ಪಂದ್ಯಕ್ಕೆ ವಾಪಾಸ್​ ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೊದಲ ಎಸೆತದಲ್ಲೇ ಕ್ಯಾಚೌಟ್​ ಆಗಿ ಖಾತೆ ತೆರೆಯದೆ ನಿರ್ಗಮಿಸಿದರು. ಈ ವೇಳೆ ತಂಡ ಭಾರೀ ಸಂಕಷ್ಟಕ್ಕೆ ಸಿಲುಕಿತು. ಆದಾಗ್ಯೂ, ಇಶಾನ್​ ಕಿಶನ್​ ಅದ್ಭುತ ಪ್ರದರ್ಶನ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಅವರು ತಿಲಕ್​ ಜೊತೆ ಸೇರಿ 2ನೇ ವಿಕೆಟ್​ಗೆ 87 ರನ್​ಗಳನ್ನು ಕಲೆಹಾಕಿತು. ಸ್ಪಿನ್ನರ್​ಗಳ ಆರ್ಭಟದ ನಡುವೆಯೂ ಕಿಶನ್​ ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ 40 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್​ ಸಹಾಯದಿಂದ 77 ರನ್​ಗಳನ್ನು ಚಚ್ಚಿ ನಿರ್ಗಮಿಸಿದರು.

ಭಾರತ 88 ರನ್​ ವೇಳೆ ತನ್ನ 2ನೇ ವಿಕೆಟ್​ ಕಳೆದಕೊಂಡಿತು. ಬಳಿಕ ಪಿಚ್​ ಪರಿವರ್ತನೆಯಿಂದಾಗಿ ಬ್ಯಾಟರ್​ಗಳ ರನ್​ ಗಳಿಸಲು ಹರಸಾಹಸ ಪಡುವಂತಾಯ್ತು. ಕಿಶಾನ್​ ವಿಕೆಟ್​ ಬೆನ್ನಲ್ಲೆ ತಂಡದ ಸ್ಕೋರ್ 126ಕ್ಕೆ ತಲುಪಿದ್ದ ವೇಳೆ ಸತತ ಎರಡು ವಿಕೆಟ್​ಗಳು ಉರುಳಿದವು. 25 ರನ್​ ಗಳಿಸಿದ ತಿಲಕ್​ ಬಳಿಕ ಬಂದ ಹಾರ್ದಿಕ್​ ಡಕೌಟ್​ ಆಗಿ ಪೆವಿಲಿಯನ್​ ಸೇರಿದರು. ಈ ವೇಳೆ ಸೂರ್ಯ ಮತ್ತು ದುಬೆ ಜೊತೆಯಾಗಿ ತಂಡದ ಸ್ಕೋರ್​ 150ರ ಗಡಿ ತಲುಪಿಸುವಲ್ಲಿ ಯಶಸ್ವಿ ಆದರು. ಸೂರ್ಯ 33 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಬಳಿಕ ಶಿವಂ ದುಬೆ (27) ಮತ್ತು ರಿಂಕು ಸಿಂಗ್​ 170 ರ ಗಡಿ ದಾಟಿಸುವಲ್ಲಿ ಯಶಸ್ವಿ ಆದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಟಾ ಬಯಲು

Next Post

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

Related Posts

FIFA World Cup 2026: ಫ್ರಾನ್ಸ್ ವಿರುದ್ಧ 2-0 ಅಂತರದ ಗೆದ್ದು ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಸ್ಪೇನ್​
ಕ್ರೀಡಾ ಸುದ್ದಿ

FIFA World Cup 2026: ಫ್ರಾನ್ಸ್ ವಿರುದ್ಧ 2-0 ಅಂತರದ ಗೆದ್ದು ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಸ್ಪೇನ್​

July 15, 2026
30
FIFA World Cup 2026: ಕೊನೆಯ 15 ನಿಮಿಷದಲ್ಲಿ 3 ಗೋಲು; ಈಜಿಪ್ಟ್ ಗೆ ಸೋಲುಣಿಸಿ ಕ್ವಾರ್ಟರ್ ಫೈನಲ್‌ ಗೆ ಅರ್ಜೆಂಟೀನಾ ಲಗ್ಗೆ
ಕ್ರೀಡಾ ಸುದ್ದಿ

FIFA World Cup 2026: ಕೊನೆಯ 15 ನಿಮಿಷದಲ್ಲಿ 3 ಗೋಲು; ಈಜಿಪ್ಟ್ ಗೆ ಸೋಲುಣಿಸಿ ಕ್ವಾರ್ಟರ್ ಫೈನಲ್‌ ಗೆ ಅರ್ಜೆಂಟೀನಾ ಲಗ್ಗೆ

July 8, 2026
37
Next Post
ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

Discussion about this post

Recent News

FIFA World Cup 2026: ಫ್ರಾನ್ಸ್ ವಿರುದ್ಧ 2-0 ಅಂತರದ ಗೆದ್ದು ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಸ್ಪೇನ್​

FIFA World Cup 2026: ಫ್ರಾನ್ಸ್ ವಿರುದ್ಧ 2-0 ಅಂತರದ ಗೆದ್ದು ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಸ್ಪೇನ್​

July 15, 2026
30
ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ

ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ

July 15, 2026
14
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

FIFA World Cup 2026: ಫ್ರಾನ್ಸ್ ವಿರುದ್ಧ 2-0 ಅಂತರದ ಗೆದ್ದು ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಸ್ಪೇನ್​

FIFA World Cup 2026: ಫ್ರಾನ್ಸ್ ವಿರುದ್ಧ 2-0 ಅಂತರದ ಗೆದ್ದು ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಸ್ಪೇನ್​

July 15, 2026
ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ

ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ

July 15, 2026
ಸುರತ್ಕಲ್​ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

ಸುರತ್ಕಲ್​ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

July 15, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d