ಯುಎಇ: ಒಮಾನ್ ವ್ಯಾಪ್ತಿಯಲ್ಲಿ ಹಾರ್ಮುಜ್ ಜಲಸಂಧಿಯ ದಕ್ಷಿಣ ಹಡಗು ಮಾರ್ಗದಲ್ಲಿ ಸಾಗುತ್ತಿದ್ದ ಮೊಂಬಾಸಾ ಮತ್ತು ಅಲ್ ಬಹಿಯಾ ಟ್ಯಾಂಕರ್ಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.
ಮೊಂಬಾಸಾ ಹಡಗಿನಲ್ಲಿದ್ದ ಒಬ್ಬ ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಆರು ಭಾರತೀಯ ಪ್ರಜೆಗಳು ಮತ್ತು ಇಬ್ಬರು ಉಕ್ರೇನಿಯನ್ನರು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ, ಅವರಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಯುಎಇ ರಕ್ಷಣಾ ಸಚಿವಾಲಯವು ತಿಳಿಸಿದೆ.
ಒಮಾನ್ ಪ್ರಾದೇಶಿಕ ಜಲವ್ಯಾಪ್ತಿಯ ಹಾರ್ಮುಜ್ ಜಲಸಂಧಿಯ ದಕ್ಷಿಣ ಮಾರ್ಗದಲ್ಲಿ ಸಾಗುತ್ತಿದ್ದ ಮೊಂಬಾಸಾ ಮತ್ತು ಅಲ್ ಬಹಿಯಾ ಟ್ಯಾಂಕರ್ಗಳ ಮೇಲೆ ಇರಾನ್ ಕ್ರೂಸ್ ಕ್ಷಿಪಣಿಗಳು ದಾಳಿ ಮಾಡಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ಘೋಷಿಸಿದೆ. ಈ ದಾಳಿಯಲ್ಲಿ ಮೊಂಬಾಸಾ ಟ್ಯಾಂಕರ್‌ನಲ್ಲಿದ್ದ ಒಬ್ಬ ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಆರು ಭಾರತೀಯರು ಮತ್ತು ಇಬ್ಬರು ಉಕ್ರೇನಿಯನ್ ಪ್ರಜೆಗಳು ಸೇರಿದ್ದಾರೆ. ಕ್ಷಿಪಣಿ ದಾಳಿಯಿಂದ ಹಡಗುಗಳಿಗೆ ಬೆಂಕಿ ತಗುಲಿದ್ದು, ಎರಡೂ ಟ್ಯಾಂಕರ್‌ಗಳಿಗೆ ಹಾನಿಯಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಯುಎಇ ರಕ್ಷಣಾ ಸಚಿವಾಲಯದ ಎಕ್ಸ್ ಪೋಸ್ಟ್ನಲ್ಲಿ ಹೇಳಲಾಗಿದೆ.
ಈ ದಾಳಿಯನ್ನು ಅಂತಾರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆ ಎಂದಿರುವ ಯುಎಇ, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಹಕ್ಕನ್ನು ಕಾಯ್ದಿರಿಸಿದೆ ಮತ್ತು ತನ್ನ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ದೇಶ ಬದ್ಧವಾಗಿದೆ ಎಂದು ಹೇಳಿದೆ.

ಘಟನೆಯಲ್ಲಿ ಅಸು ನೀಗಿರುವ ಕುಟುಂಬಕ್ಕೆ, ಭಾರತ ಸರ್ಕಾರ ಮತ್ತು ಜನರಿಗೆ ತನ್ನ ಪ್ರಾಮಾಣಿಕ ಸಂತಾಪ ಮತ್ತು ಸಹಾನುಭೂತಿಯನ್ನ ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ.
ವಾಣಿಜ್ಯ ಸಾಗಣೆಯನ್ನು ಗುರಿಯಾಗಿಸಿಕೊಳ್ಳುವುದು ಮತ್ತು ಹಾರ್ಮುಜ್ ಜಲಸಂಧಿಯನ್ನು ಆರ್ಥಿಕ ದಬ್ಬಾಳಿಕೆ ಅಥವಾ ಬ್ಲ್ಯಾಕ್‌ಮೇಲ್ ಸಾಧನವಾಗಿ ಬಳಸುವುದು ಕಡಲ್ಗಳ್ಳತನದ ಕೃತ್ಯವಾಗಿದೆ. ಈ ಪ್ರದೇಶದ ಸ್ಥಿರತೆ, ಅದರ ಜನರು ಮತ್ತು ಜಾಗತಿಕ ಇಂಧನ ಭದ್ರತೆಗೆ ನೇರ ಬೆದರಿಕೆಯನ್ನು ಒಡ್ಡುತ್ತದೆ ಎಂದು ಯುಎಇ ರಕ್ಷಣಾ ಸಚಿವಾಲಯ ಒತ್ತಿ ಹೇಳಿದೆ.
ದಾಳಿಯನ್ನು ಸಮರ್ಥಿಸಿಕೊಂಡ ಇರಾನ್: ಯುಎಇ ಧ್ವಜ ಹೊತ್ತಿದ್ದ ಈ ಎರಡು ವಾಣಿಜ್ಯ ಹಡಗುಗಳ ಮೇಲೆ ತಾನೇ ದಾಳಿ ನಡೆಸಿರುವುದನ್ನು ಇರಾನ್ ಒಪ್ಪಿಕೊಂಡಿದೆ. ” ಈ ಹಡಗುಗಳು ನಮ್ಮ ನೌಕಾಯಾನ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದವು ಮತ್ತು ಜಲಸಂಧಿಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದವು, ಹಾಗಾಗಿ ದಾಳಿ ಮಾಡಿದ್ದೇವೆ” ಎಂದು ಇರಾನ್ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಯುಎಇ ಖಂಡನೆ: ಆದರೆ, ಯುಎಇ ರಕ್ಷಣಾ ಸಚಿವಾಲಯವು ಇರಾನ್‌ನ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಗೆ ಧಕ್ಕೆ ತಂದಿದೆ ಎಂದು ಯುಎಇ ಹೇಳಿದೆ. ಇತ್ತೀಚೆಗೆ ಇರಾನ್ ಮೇಲೆ ಅಮೆರಿಕ ಭಾರಿ ದಾಳಿ ನಡೆಸಿದ ಬೆನ್ನಲ್ಲೇ, ಇರಾನ್ ಈ ರೀತಿಯ ಪ್ರತಿಕಾರ ಕ್ರಮಕ್ಕೆ ಮುಂದಾಗಿರುವುದು ಗಲ್ಫ್ ವಲಯದಲ್ಲಿ ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.

Discover more from Coastal Times Kannada
Subscribe to get the latest posts sent to your email.








Discussion about this post