ಬೆಂಗಳೂರು, ಸೆ 06: ಸುಮಾರು ಏಳು ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರಿನ ಆಸರೆ ಒದಗಿಸಬಲ್ಲ ಬಹುಕೋಟಿ ವೆಚ್ಚದಲ್ಲಿ ನಿರ್ಮಾಗೊಳ್ಳುತ್ತಿರುವ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ ಇಂದು (ಸೆಪ್ಟಂಬರ್ 06) ಶುಕ್ರವಾರ ಗೌರಿ ಹಬ್ಬದಂದು ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರು ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಗುರುವಾರವಷ್ಟೇ ಸ್ಥಳ ಪರಶೀಲನೆಗೆ ಆಗಮಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ನಾಳೆ ಎತ್ತಿನ ಹೊಳೆ ಕಾಮಗಾರಿ ಲೋಕಾರ್ಪಣೆ ಹಿನ್ನಲೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯೋಜನೆಯ ಮೊದಲ ಹಂತದಲ್ಲಿ ನೀರೆತ್ತು ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದರು. ಬಯಲು ಸೀಮೆ ಕೆಲವು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಹೆಬ್ಬನಹಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಹೆಬ್ಬನಹಳ್ಳಿ ಬಳಿ ಬಾಗಿನ ಅರ್ಪಿಸಿ ವೇದಿಕೆ ಕಾರ್ಯಕ್ರಮ ಜರುಗಲಿದೆ.
ಒಟ್ಟು ಸುಮಾರು 8000 ಕೋಟಿ ರೂ. ಅಂದಾಜು ವೆಚ್ಚದಲ್ಲಿ 2014ರಲ್ಲಿ ಈ ಎತ್ತಿನಹೊಳೆ ಯೋಜನೆ ಆರಂಭಿಸಲಾಗಿತ್ತು. ಬರೋಬ್ಬರಿ ಹತ್ತು ವರ್ಷಗಳ ನಂತರ ಯೋಜನೆಯಲ್ಲಿ ನೀರೆತ್ತುವ ಎಂಟು ವಿಯರ್‌ಗಳ ಪೈಕಿ ಏಳು ವೀಯರ್‌ಗಳಲ್ಲಿ ಶುಕ್ರವಾರ ನೀರೆತ್ತುವ ಕಾರ್ಯ ಆರಂಭವಾಗಲಿದೆ. ಬಾಕಿ ವೀಯರ್ ಕೆಲಸಗಳು ಶೀಘ್ರವೇ ಪೂರ್ಣಗೊಳ್ಳಲಿವೆ. ಸಕಲೇಶಪುರ ಈ ಭಾಗದಿಂದ 260 ಕಿಲೋ ಮೀಟರ್ ದೂರದಲ್ಲಿರುವ ದೊಡ್ಡಬಳ್ಳಾಪುರವರೆಗೆ ಈ ಯೋಜನೆ ನೀರು ತುಲುಪಲಿದೆ. ಅದಕ್ಕೆ ಸಂಬಂಧಿದ ಕಾಲುವೆ ನಿರ್ಮಾಣ ಪೂರ್ಣಗೊಂಡಿದೆ. ಸಾಕಷ್ಟು ವಿವಾದಗಳಿಂದ ಸುದ್ದಿಯಾಗಿದ್ದ ಈ ಯೋಜನೆಯ ಉದ್ಘಾಗಟನೆಗೆ ಕೊನೆಗೆ ಕಾಲ ಕೂಡಿ ಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post