ಟೆಕ್ಸಾಸ್: ಸೇವೆಯಲ್ಲಿದ್ದಾಗಲೇ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಇಂಡೋ–ಅಮೆರಿಕನ್ ಪೊಲೀಸ್ ಅಧಿಕಾರಿ ಹೆಸರನ್ನು ಅಂಚೆ ಕಚೇರಿ ಮರುನಾಮಕರಣ ಮಾಡುವ ಮೂಲಕ ಅಮೆರಿಕ ಸರ್ಕಾರ ಗೌರವಸಲ್ಲಿಸಿದೆ.
ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ 315 ಅಡಿಕ್ಸ್ ಹೊವೆಲ್ ರಸ್ತೆಯ ಅಂಚೆ ಕಚೇರಿಗೆ ದಿವಂಗತ ಹಿರಿಯ ಅಧಿಕಾರಿ ಡೆಪ್ಯೂಟಿ ಸಂದೀಪ್ ಸಿಂಗ್ ಧಲಿವಾಲ್ ಅವರ ಹೆಸರು ಮರುನಾಮಕರಣ ಮಾಡಲಾಗಿದೆ.
ಅಮೆರಿಕ ಪ್ರತಿನಿಧಿ ಲಿಜಿ ಫ್ಲೆಚರ್ ಅಧಿಕೃತವಾಗಿ ಅಂಚೆ ಕಚೇರಿಗೆ ‘ಡೆಪ್ಯೂಟಿ ಸಂದೀಪ್ ಸಿಂಗ್ ಧಲಿವಾಲ್ ಪೋಸ್ಟ್ ಆಫೀಸ್’ಎಂದು ನಾಮಕರಣ ಮಾಡಿದರು.
‘ಇಂದಿನಿಂದ, ಡೆಪ್ಯೂಟಿ ಸಂದೀಪ್ ಸಿಂಗ್ ಧಲಿವಾಲ್ ಪೋಸ್ಟ್ ಆಫೀಸ್ ಅವರ ಸೇವೆ, ಅವರ ತ್ಯಾಗ ಮತ್ತು ಅವರ ಉದಾಹರಣೆಯ ಶಾಶ್ವತ ಜ್ಞಾಪನೆಯಾಗಿರುತ್ತದೆ’ಎಂದು ಕಾಂಗ್ರೆಸ್ ಸದಸ್ಯೆ ಲಿಜಿ ಫ್ಲೆಚರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ಅವರು ತಮ್ಮ ಸಮುದಾಯಗಳಿಗೆ ಸೇವೆ ಸಲ್ಲಿಸಲು ಬಯಸುವ ಎಲ್ಲಾ ಧರ್ಮದ ಅಮೆರಿಕನ್ನರಿಗೆ ಮಾದರಿ ಎಂದು ಪರಿಗಣಿಸಲಾಗಿದೆ ಮತ್ತು ಒಬ್ಬ ವ್ಯಕ್ತಿಯು ನಮ್ಮ ಸಮುದಾಯವನ್ನು ಹೇಗೆ ಉತ್ತಮವಾಗಿ ಬದಲಾಯಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ’ಎಂದು ಅವರು ಹೇಳಿದರು.
ಡೆಪ್ಯೂಟಿ ಸಂದೀಪ್ ಸಿಂಗ್ ಧಲಿವಾಲ್ ಅವರು ಸೆಪ್ಟೆಂಬರ್ 27, 2019 ರಂದು ಟೆಕ್ಸಾಸ್‌ನ ಹ್ಯಾರಿಸ್ ಕೌಂಟಿಯಲ್ಲಿ ಟ್ರಾಫಿಕ್ ಸ್ಟಾಪ್ ಕೆಲಸದಲ್ಲಿ ತೊಡಗಿದ್ದಾಗ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು. ಹ್ಯಾರಿಸ್ ಕೌಂಟಿಯಲ್ಲಿ ಸಿಖ್ ಅಧಿಕಾರಿಗಳು ಗಸ್ತು ತಿರುಗುವಾಗ ಗಡ್ಡ ಮತ್ತು ಟರ್ಬನ್ ಧರಿಸಿ ಸೇವೆ ಸಲ್ಲಿಸಲು ನೀತಿಯನ್ನು ತಿದ್ದುಪಡಿ ಮಾಡಿದಾಗ ಧಲಿವಾಲ್ ಇತಿಹಾಸ ನಿರ್ಮಿಸಿದರು. ಅವರು, ಸಿಖ್ ಧರ್ಮದ ಟರ್ಬನ್ ಧರಿಸಿ ಪೊಲೀಸ್ ಸೇವೆ ಸಲ್ಲಿಸಿದ ಮೊದಲ ಅಧಿಕಾರಿಯಾಗಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post